ಹೆತ್ತವರ ವಿಷಯವಾಗಿ ಮತ್ತೆ ಟ್ರೊಲ್ ಆದ ರಶ್ಮಿಕಾ ಮಂದಣ್ಣ, ಅಷ್ಟಕ್ಕೂ ರಶ್ಮಿಕಾ ಮಾಡಿದ್ದೇನು ನೋಡಿ.

ಚಿತ್ರರಂಗದ ನಟ ಮತ್ತು ನಟಿಯರು ಯಾವುದೇ ಕೆಲಸವನ್ನ ಮಾಡಿದರೂ ಕೂಡ ಸಕತ್ ವೈರಲ್ ಆಗುತ್ತದೆ ಎಂದು ಹೇಳಬಹುದು. ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗುವ ನಟಿ ಅಂದರೆ ಅದೂ ರಶ್ಮಿಕಾ ಮಂದಣ್ಣ ಎಂದು ಹೇಳಬಹುದು. ಹೌದು ರಶ್ಮಿಕಾ ಮಂದಣ್ಣ ಅವರು ಯಾವುದೇ ಕೆಲಸವನ್ನ ಮಾಡಿದರು ಸದ್ಯದ ದಿನಗಳಲ್ಲಿ ಸಕತ್ ಟ್ರೊಲ್ ಮತ್ತು ಸುದ್ದಿಗೆ ಕಾರಣವಾಗುತ್ತಿದ್ದರೆ. ದೇಶದಲ್ಲಿ ಟಾಪ್ ನಟಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರು ಶೂಟಿಂಗ್ ಬಹಳ ಬ್ಯುಸಿ ಇದ್ದು ಬೇರೆ ಊರಿನಲ್ಲಿಯೇ ಹೆಚ್ಚಿನ ಸಮಯವನ್ನ ಕಳೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ಈಗ ಮತ್ತೆ ರಶ್ಮಿಕಾ ಮಂದಣ್ಣ ಅವರು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಹೆತ್ತವರ ವಿಷಯವಾಗಿ ಮತ್ತೆ ರಶ್ಮಿಕಾ ಮಂದಣ್ಣ ಈಗ ಟ್ರೊಲ್ ಆಗುತ್ತಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಾಗಲು ಕಾರಣ ಏನು ಅನ್ನುವುದನ್ನ ತಿಳಿಯೋಣ ಬನ್ನಿ. ನಿಮಗೆಲ್ಲ ತಿಳಿದಿರುವ ಹಾಗೆ ನಟಿ ರಶ್ಮಿಕಾ ಮಂದಣ್ಣ ಅವರು ತಡವಾಗಿ ವಿಶ್ ಮಾಡುವುದರ ಮೂಲಕ ಪದೇಪದೇ ಟ್ರೊಲ್ ಆಗುತ್ತಲೇ ಇರುತ್ತಾರೆ. ಹಿಂದೆ ರಶ್ಮಿಕಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಮರೆತು ಟೀಕೆಗೆ ಗುರಿಯಾಗಿದ್ದರು.

rashmika mandanna family news

ಇನ್ನು ಈಗ ಮತ್ತೆ ಹೆತ್ತವರ ಮದುವೆಯನ್ನ ಮರೆತು ಮತ್ತೆ ಟ್ರೊಲ್ ಆಗಿದ್ದಾರೆ ರಶ್ಮಿಕಾ ಮಂದಣ್ಣ. ಇನ್ಸ್ಟಾಗ್ರಾಮ್ ನಲ್ಲಿ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ತಡವಾಗಿ ನೆನಪಿಸಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ರಶ್ಮಿಕಾ, ಈ ಜಗತ್ತಿಗೆ ನನ್ನನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಮತ್ತು ಜನ್ಮ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇವತ್ತು ನಾನು ಈ ಮಟ್ಟದಲ್ಲಿ ಇದ್ದೇನೆ ಅಂದರೆ ಅದಕ್ಕೆ ನೀವೇ ಕಾರಣ. ಸದಾ ನಾನು ನಿಮಗೆ ಋಣಿಯಾಗಿರುವೆ ಎಂದು ಬರೆದುಕೊಂಡಿದ್ದಾರೆ, ಅಷ್ಟೇ ಅಲ್ಲದೇ ವಿಶ್ ಮಾಡುತ್ತಿರುವುದಕ್ಕೆ ತಡವಾದ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ.

ಇನ್ನು ರಶ್ಮಿಕಾ ತಡವಾಗಿ ವಿಶ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅಭಿಮಾನಿಗಳು, ಪುಣ್ಯಕ್ಕೆ ತಡವಾದರೂ ವಿಶ್ ಮಾಡಿದ್ದೀರಲ್ಲ ಗ್ರೇಟ್ ಎಂದು ಕಮೆಂಟ್ ಮಾಡಿದರೆ ಇನ್ನೂ ಕೆಲವರು ಮರೆತಿದ್ದರೆ ಇನ್ನೂ ಅನಾಹುತ ಆಗಿರುವುದು ಎಂದು ಎಚ್ಚರಿಸಿದ್ದಾರೆ. ಇನ್ನು ಕೆಲವರು ತಂದೆ ತಾಯಿಯನ್ನೇ ಮರೆತಿರುವುದರಿಂದ ಈ ಹಿಂದಿನ ಎಲ್ಲಾ ಆವಾಂತರಗಳನ್ನು ಕ್ಷಮಿಸಲಾಗುವುದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಹೆತ್ತವಡ ಮದುವೆಯ ವಾರ್ಷಿಕೋತ್ಸವಕ್ಕೆ ತಡವಾಗಿ ವಿಶ್ ಮಾಡಿದ್ದಾರೆ ಮತ್ತೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Join Nadunudi News WhatsApp Group

rashmika mandanna family news

Join Nadunudi News WhatsApp Group