Allu Arjun Birthday: ಅಲ್ಲೂ ಅರ್ಜುನ್ ಅವರಿಗೆ ವಿಭಿನ್ನವಾಗಿ ಬರ್ತ್ಡೇ ವಿಶ್ ಮಾಡಿದ ರಶ್ಮಿಕಾ, ವೈರಲ್ ಆಯಿತು ರಶ್ಮಿಕಾ ವಿಶ್.

ನನ್ನ ಪುಷ ರಾಜ್ ಗೆ ಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಅಲ್ಲೂ ಅರ್ಜುನ್ ಗೆ ವಿಶ್ ಮಾಡಿದ ನಟಿ ರಶ್ಮಿಕಾ ಮಂದಣ್ಣ

Rashmika Mandanna Birthday Wishes To Allu Arjun: ನಟಿ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದಿಂದ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ಇನ್ನು ನಟಿ ರಶ್ಮಿಕಾ ಮತ್ತು ನಟ ಅಲ್ಲೂ ಅರ್ಜುನ್ (Allu Arjun)ಪುಷ್ಪ ಸಿನಿಮಾ ಸಾಕಷ್ಟು ಖ್ಯಾತಿ ಪಡೆದಿದೆ. ಈ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರ ಮಾಡಿದ ನಟಿ ರಶ್ಮಿಕಾ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ.

Rashmika Mandanna wishes Allu Arjun on his birthday.
Image Credit: mirchi9

ಅಲ್ಲೂ ಅರ್ಜುನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ನಟಿ ರಶ್ಮಿಕಾ ಮಂದಣ್ಣ
ಪುಷ್ಪ ಸಿ ರೈಸ್ (Pushpa) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಅಲ್ಲೂ ಅರ್ಜುನ್ ಮತ್ತು ನಟಿ ರಶ್ಮಿಕಾ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇವರಿಬ್ಬರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾವೇ ಯಶಸ್ಸು ಕಂಡಿದ್ದು ಮತ್ತೆ ಈ ಜೋಡಿ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನು ಇಂದು ಏಪ್ರಿಲ್ 8 ರಂದು ನಟ ಅಲ್ಲೂ ಅರ್ಜುನ್ ಹುಟ್ಟಿದ ಹಬ್ಬಕ್ಕೆ ಸಾಕಷ್ಟು ಅಭಿಮಾನಿಗಳು ಹಾಗು ಸಿನಿಮಾ ನಟ ನಟಿಯರು ಶುಭ ಕೋರಿದ್ದಾರೆ. ಅದೇ ರೀತಿ ಅಲ್ಲೂ ಅರ್ಜುನ್ ಆತ್ಮೀಯ ಸ್ನೇಹಿತೆಯಾದ ರಶ್ಮಿಕಾ ಮಂದಣ್ಣ ಸಹ ನನ್ನ ಪುಷ್ಪ ರಾಜ್ ಗೆ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದ್ದಾರೆ.

Actress Rashmika Mandanna said Happy Birthday to my Pushparaj
Image Credit: timesofindia.indiatimes

ಅಲ್ಲೂ ಅರ್ಜುನ್ ಜೊತೆ ಇರುವ ಫೋಟೋ ಹಂಚಿಕೊಂಡ ನಟಿ ರಶ್ಮಿಕಾ
ಅಲ್ಲೂ ಅರ್ಜುನ್ ಜೊತೆ ಇರುವ ಫೋಟೋ ಹಂಚಿಕೊಂಡು ನಟಿ ರಶ್ಮಿಕಾ ಹುಟ್ಟುಹಬ್ಬದ ಶುಭ ಕೋರಿದ್ದು ಈ ಫೋಟೋ ನೋಡಿದ ಅಭಿಮಾನಿಗಳು ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ಹುಟ್ಟು ಹಬಬ್ಬ ಶುಭಾಶಯಗಳು ಪುಷ್ಪರಾಜ್.

Join Nadunudi News WhatsApp Group

ಪುಷ್ಪ ನಿಮ್ಮ ಆಕ್ಷನ್ ನೋಡುವುದಕ್ಕೆ ಇಡೀ ವಿಶ್ವ ಕಾದಿದೆ. ನಿಮ್ಮನ್ನು ಜನರು ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಪೋಸ್ಟ್ ಗೆ ಅಭಿಮಾನಿಗಳ ಕಡೆಯಿಂದ ಪಾಸಿಟಿವ್ ಕಮೆಂಟ್ಸ್ ಬಂದಿದೆ.

Join Nadunudi News WhatsApp Group