Rashmika Mandanna: ನಾನ್ ವೆಜ್ ತಿನ್ನಲ್ಲ ಅಂತ ಹೇಳಿ ತಿಂದಿದ್ದಕ್ಕೆ ನೆಟ್ಟಿಗರಿಂದ ಟ್ರೊಲ್ ಆದ ರಶ್ಮಿಕಾ.

ಇತ್ತೀಚಿನ ಚಿಕನ್ ಬರ್ಗರ್ ಜಾಹಿರಾತಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಾನ್ ವೆಜ್ ತಿನ್ನಲ್ಲ ಎಂದು ಜಾಹೀರಾತಿಗಾಗಿ ಮಾಂಸಾಹಾರವನ್ನು ನಟಿ ಸೇವಿಸಿರುವುದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

Actress Rashmika Troll: ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಏನೆ ಮಾಡಿದರು ಸಹ ನೆಟ್ಟಿಗರಿಂದ ಟ್ರೊಲ್ ಆಗುತ್ತಾರೆ. ಕಿರಿಕ್ ಪಾರ್ಟಿ ಸಿನಿಮಾದ ಚಿತ್ರರಂಗಕ್ಕೆ ಪರಿಚಿತರಾದ ನಟಿ ಇದೀಗ ಬಹುಬೇಡಿಕೆಯ ನಟಿಯಾಗಿ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಮಾತ್ರವಲ್ಲದೆ ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಚಿಕನ್ ಬರ್ಗರ್ ಜಾಹಿರಾತಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಾನ್ ವೆಜ್ ತಿನ್ನಲ್ಲ ಎಂದು ಜಾಹೀರಾತಿಗಾಗಿ ಮಾಂಸಾಹಾರವನ್ನು ನಟಿ ಸೇವಿಸಿರುವುದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

Rashmika Troll
Image Source: Koimoi

ನಾನ್ ವೆಜ್ ತಿಂದಿದ್ದಕ್ಕೆ ನೆಟ್ಟಿಗರಿಂದ ಟ್ರೊಲ್ ಆದ ರಶ್ಮಿಕಾ
ಇದೀಗ ಖ್ಯಾತ ನಟಿ ನಾನ್ ವೆಜ್ ತಿಂದಿರುವ ವಿಷಯವಾಗಿ ಸಖತ್ ಟ್ರೊಲ್ ಆಗಿದ್ದರೆ. ನಟಿ ರಶ್ಮಿಕಾ ಮಂದಣ್ಣ ಹೊಸ ಜಾಹಿರಾತಿನಲ್ಲಿ ನಾನ್ ವೆಜ್ ತಿಂದಿದ್ದಾರೆ. ಆದರೆ ಈ ಹಿಂದೆ ತಮ್ಮನ್ನು ತಾವು ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು. ಜನರಿಗೆ ಇದು ಇಷ್ಟ ಆಗಿಲ್ಲ. ನಮ್ಮನ್ನು ಮೂರ್ಖರನ್ನಾಗಿಸುವುದು ನಿಲ್ಲಿಸಿ ಅಂತ ಕಾಮೆಂಟ್ ಮಾಡಿದ್ದಾರೆ.

Rashmika Troll
Image Source: Youtube

ಟಾಲಿವುಡ್ ನಟನ ಜೊತೆ ಡೇಟಿಂಗ್ ನಲ್ಲಿ ಕಿರಿಕ್ ಬ್ಯೂಟಿ
ಇನ್ನು ರಶ್ಮಿಕಾ ಮಂದಣ್ಣ ಅವರು ತಮ್ಮ ಪ್ರೀತಿಯ ವಿಚಾರವಾಗಿ ಈ ಹಿಂದೆ ಸುದ್ದಿಯಲ್ಲಿದ್ದರು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿಚಾರವಾಗಿ ಸಾಕಷ್ಟು ವೈರಲ್ ಸುದ್ದಿಗಳು ಹರಡಿದ್ದವು. ಇದೀಗ ರಶ್ಮಿಕಾ ಮಂದಣ್ಣ ಟಾಲಿವುಡ್ ನಟನ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾಹಿತಿ ಹರಡಿದಿದೆ.

ಸಾಯಿ ಶ್ರೀನಿವಾಸ್ ಜೊತೆ ರಶ್ಮಿಕಾ ಡೇಟಿಂಗ್
ಟಾಲಿವುಡ್ ನ್ ಖ್ಯಾತ ನಟರಾದ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ಕಿರಿಕಿ ಬ್ಯೂಟಿ ಕೆಲವು ಫೋಟೋಗಳು ವೈರಲ್ ಆಗುತ್ತಿದೆ. ಸಾಯಿ ಶ್ರೀನಿವಾಸ್ ಹಾಗೂ ರಶ್ಮಿಕಾ ಜೊತೆಯಾಗಿ ಯಾವುದೇ ಚಿತ್ರದಲ್ಲಿ ನಟಿಸದೆ ಇದ್ದರು ಕೊಡ ಇಬ್ಬರು ಭೇಟಿ ಆಗಿರುವುದು ಅನುಮಾನಗಳನ್ನು ಹುಟ್ಟುಹಾಕಿವೆ. ಇನ್ನು ರಶ್ಮಿಕಾ ಹಾಗೂ ಸಾಯಿ ಶ್ರೀನಿವಾಸ್ ಅವರ ಡೇಟಿಂಗ್ ವಿಚಾರದ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ.

Rashmika Troll
Image Source: Youtube

Join Nadunudi News WhatsApp Group

Join Nadunudi News WhatsApp Group