ಪತ್ರ ಬರೆದಿಟ್ಟು ಪ್ರಾಣ ಕಳೆದುಕೊಂಡ ದೇಶದ ಖ್ಯಾತ ಕಿರುತೆರೆ ನಟಿ, ಕಣ್ಣೀರಿಟ್ಟ ಚಿತ್ರರಂಗ.

ದೇಶದ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಹೇಳಬಹುದು. ಹೌದು ಕಳೆದ ಎರಡು ವರ್ಷದಲ್ಲಿ ಅದೆಷ್ಟೋ ಹಿರಿಯ ನಟ ನಟಿಯರು ಇಹಲೋಕವನ್ನ ತ್ಯಜಿಸಿದರೆ, ಅದೆಷ್ಟೋ ಯುವ ನಟ ನಟಿಯರು ಅಕಾಲಿಕವಾಗಿ ಇಹಲೋಕವನ್ನ ತ್ಯಜಿಸಿದ್ದಾರೆ ಎಂದು ಹೇಳಬಹುದು. ಇನ್ನು ಇದರ ನಡುವೆ ಈಗ ದೇಶದ ಚಿತ್ರರಂಗಕ್ಕೆ ಇನ್ನೊಂದು ಶಾಕಿಂಗ್ ಸುದ್ದಿ ಬಂದಿದೆ. ಹೌದು ಜೀವನದಲ್ಲಿ ಏನಾದರು ಸಾಧನೆಯನ್ನ ಮಾಡಬೇಕು ಅಂದುಕೊಂಡು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಖ್ಯಾತ ಕಿರುತೆರೆ ನಟಿ ಪ್ರೇಮ ವೈಫಲ್ಯದ ಕಾರಣ ಇಹಲೋಕವನ್ನ ತ್ಯಜಿಸಿದ್ದು ದೇಶದ ಚಿತ್ರರಂಗ ಈ ನಟಿಯ ಅಕಾಲಿಕ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು.

ಹಾಗಾದರೆ ಈ ಖ್ಯಾತ ನಟಿ ಯಾರು ಮತ್ತು ಈಕೆ ಪ್ರೀತಿಯಲ್ಲಿ ಮೋಸ ಹೋಗಲು ಕಾರಣ ಏನು ಅನ್ನುವುದನ್ನ ತಿಳಿಯೋಣ ಬನ್ನಿ. ಪ್ರೀತಿ ಅನ್ನುವುದು ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಭೋಗದ ವಸ್ತುವಾಗಿದೆ ಎಂದು ಹೇಳಬಹುದು. ಇನ್ನು ಹಲವು ಹುಡುಗಿಯರು ಕುರುಡು ಪ್ರೀತಿಯನ್ನ ನಂಬಿ ಮೋಸ ಹೋಗುತ್ತಿದ್ದಾರೆ. ಅದೇ ರೀತಿಯಲ್ಲಿ ಕಿರುತೆರೆಟಿಯಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಈಗ ಪ್ರೇಮ ವೈಫಲ್ಯದ ಕಾರಣ ತನ್ನ ಜೀವವನ್ನ ಕಳೆದುಕೊಂಡಿದ್ದಾಳೆ. 24 ವರ್ಷದ ಖ್ಯಾತ ಕಿರುತೆರೆ ರಶ್ಮಿರೇಖಾ ಓಜಾ ಅವರು ಪ್ರೇಮ ವೈಫಲ್ಯದ ಕಾರಣ ತನ್ನ ಜೀವವನ್ನ ಕಳೆದುಕೊಂಡಿದ್ದಾರೆ.

Rashmirekha no more

ಕಿರುತೆರೆ ನಟಿ ರಶ್ಮಿರೇಖಾ ಓಜಾ ಅವರು ಸಂತೋಷ್ ಪಾತ್ರ ಅನ್ನುವುದರ ಜೊತೆ ಕೆಲವು ಸಮಯಗಳಿಂದ ಓಡಾಡುತ್ತಿದ್ದು ಅವರನ್ನ ಪ್ರೀತಿ ಮಾಡುತ್ತಿದ್ದಳು ಎಂದು ಹೇಳಲಾಗಿದೆ ಮತ್ತು ಆತ ಸಡನ್ ಆಗಿ ಈಕೆಯನ್ನ ಬಿಟ್ಟುಹೋಗಿದ್ದು ರಶ್ಮಿರೇಖಾ ಓಜಾ ಅವರು ಕೆಲವು ಸಮಯಗಳಿಂದ ತೀವ್ರವಾದ ಖಿನ್ನತೆಗೆ ಒಳಾಗಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಕಿರುತೆರೆಯ ಕೆಲವು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರಶ್ಮಿರೇಖಾ ಓಜಾ ಅವರ ಸಾವು ಸಹಜ ಸಾವು ಅಲ್ಲ ಅನ್ನುವುದು ಅವರು ಬರೆದಿಟ್ಟ ಪತ್ರದಿಂದ ಪೊಲೀಸರಿಗೆ ತಿಳಿದಿದೆ. ಇನ್ನು ಈ ಪತ್ರದಲ್ಲಿ ಸಾಯಲು ಅಸಲಿ ಕಾರಣ ಏನು ಅನ್ನುವನ್ನ ಉಲ್ಲೇಖ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ಪೊಲೀಸರು ಪ್ರಿಯತಮ ಸಂತೋಷ್ ಅವರನ್ನ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆಯನ್ನ ಮಾಡುತ್ತಿದ್ದಾರೆ. ಸದ್ಯ ನಟಿಯ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದ್ದು ಚಿತ್ರರಂಗದ ಹಲವು ನಟ ನಟಿಯರು ಈ ನಟಿಯ ಅಗಲಿಕೆಗೆ ಕಂಬನಿಯನ್ನ ಮಿಡಿದಿದ್ದಾರೆ. ದುಡಿಕಿನ ನಿರ್ಧಾರದ ಕಾರಣ ಈ ನಟಿ ತಮ್ಮ ಸುಂದರ ಜೀವನವನ್ನ ಹಾಳು ಮಾಡಿಕೊಂಡಳು ಎಂದು ಹೇಳಿದರೆ ತಪ್ಪಾಗಲ್ಲ. ಈ ನಟಿ ರಶ್ಮಿರೇಖಾ ಓಜಾ ಅವರ ಸಾವಿಗೆ ನ್ಯಾಯ ಸಿಗಲಿ ಮತ್ತು ನಟಿ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Rashmirekha no more

Join Nadunudi News WhatsApp Group