Ratan Tata: ರತನ್ ಟಾಟಾ ಯಾಕಿನ್ನೂ ಮದುವೆ ಆಗಿಲ್ಲ…? ಪ್ರೀತಿಸಿದ ಹುಡುಗಿ ದೂರವಾಗಿದ್ದು ಹೇಗೆ….?

ಈ ಕಾರಣಕ್ಕೆ ತಾನು ಪ್ರೀತಿಮಾಡಿದ ಹುಡುಗಿಯನ್ನ ಅಮೆರಿಕಾದಲ್ಲಿ ಬಿಟ್ಟು ಬರುತ್ತಾರೆ ರತನ್ ಟಾಟಾ

Ratan Tata Love Story: ಭಾರತದ ಆಗರ್ಭ ಶ್ರೀಮಂತ ಉದ್ಯಮಿ ಎಂದು ಕರೆಸಿಕೊಳ್ಳುವ ರತನ್ ಟಾಟಾ (Ratan Tata) ಅವರು ಕೋಟ್ಯಾಂತರ ಭಾರತೀಯರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಪ್ರಪಂಚದಾದ್ಯಂತ Ratan Tata ಅವರು ಟಾಟಾ ಗ್ರೂಪ್ ನ ಅದ್ಬುತ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ನಾವು Ratan Tata ಅವರ ಬಿಸಿನೆಸ್ ಲೋಕದ ಸಾಧನೆ ಹೊರತಾಗಿ ಅವರ ವಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Ratan Tata Love Story
Image Credit: Indiatimes

ರತನ್ ಟಾಟಾ ಯಾಕಿನ್ನೂ ಮದುವೆ ಆಗಿಲ್ಲ…?
ಸರಳ ವ್ಯಕ್ತಿತ್ವದ ಟಾಟಾ ಎಂದರೆ ಎಲ್ಲರೂ ಬಹಳ ಇಷ್ಟ ಪಡುತ್ತಾರೆ. Ratan Tata ಯಾಕೆ ಮದುವೆಯಾಗಿಲ್ಲ? ಅವರಿಗೆ ಯಾವತ್ತೂ ಪ್ರೀತಿಯಾಗಿಲ್ವಾ? ಇದೀಗ Ratan Tata ಅವರು ತಾವು ಅವಿವಾಹಿತರಾಗಿ ಉಳಿದಿರುವ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಯವ್ವನದ ದಿನಗಳನ್ನು ಮೆಲುಕು ಹಾಕಿರುವ ಅವರು ಲಾಸ್ ಏಂಜಲೀಸ್‌ನಲ್ಲಿದ್ದ ದಿನಗಳಲ್ಲಿ ಯುವತಿಯೊಬ್ಬಳನ್ನು ಪ್ರೀತಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ಸಂದರ್ಶನದ ವೇಳೆ Ratan Tata ಅವರು ಉತ್ತರ ನೀಡಿದ್ದು, ತಮ್ಮ ಪ್ರೇಮ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ.

Ratan Tata Latest News
Image Credit: Linkedin

ರತನ್ ಟಾಟಾ ಪ್ರೀತಿಸಿದ ಹುಡುಗಿ ದೂರವಾಗಿದ್ದು ಹೇಗೆ….?
ನಾನು ಲಾಸ್ ಏಂಜಲೀಸ್ ನಲ್ಲಿ ಇರುವಾಗ ಒಬ್ಬರನ್ನು ಪ್ರೀತಿಸುತ್ತಿದ್ದರು ಆದರೆ ಅಜ್ಜಿಯ ಅರೋಗ್ಯ ಸಮಸ್ಯೆಯ ಕಾರಣ ನಾನು ಭಾರತಕ್ಕೆ ಹಿಂದಿರುಗ ಬೇಕಾಯಿತು. ಪ್ರೀತಿಸಿದ ಹುಡುಗಿ ನನ್ನನ್ನು ಭಾರತದಲ್ಲಿ ಭೇಟಿ ಮಾಡಲು ಮುಂದಾಗಿದ್ದಳು ಆದರೆ 1962 ರಲ್ಲಿ ಭಾರತ-ಚೀನಾ ಯುದ್ಧ ಪ್ರಾರಂಭವಾಗಿತ್ತು ಹಾಗಾಗಿ ಅವರ ಪೋಷಕರು ಅವಳಿಗೆ ಭಾರತಕ್ಕೆ ತೆರಳಲು ಅವಕಾಶ ನೀಡಲಿಲ್ಲ. ಇದರಿಂದ ನಾನು ಮನಸಾರೆ ಪ್ರೀತಿಸಿದವರಿಂದ ದೂರವಾದೆ. ಇದಾದ ನಂತರ ಹಲವು ಸಂಬಂಧಗಳು ನನ್ನ ಬಳಿಗೆ ಬಂದಿದ್ದವು ಆದರೆ ಹೆಂಡತಿ ಅನಿಸಿಕೊಳ್ಳುವ ವ್ಯಕ್ತಿ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group