ಕನ್ನಡ ಚಿತ್ರರಂಗದ ಇನ್ನೊಬ್ಬ ಖ್ಯಾತ ನಟಿ ಇನ್ನಿಲ್ಲ, ಕಣ್ಣೀರಿನಲ್ಲಿ ಇಡೀ ಕನ್ನಡ ಚಿತ್ರರಂಗ.

ಯಾಕೋ ಕನ್ನಡ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಕಾಣುತ್ತದೆ. ಹೌದು ಒಬ್ಬರಾದ ಮೇಲೆ ಒಬ್ಬರು ಖ್ಯಾತ ನಟ ನಟಿಯರು ಆಸ್ಪತ್ರೆಯನ್ನ ಸೇರುತ್ತಿದ್ದಾರೆ ಮತ್ತು ಒಬ್ಬರಾದ ಮೇಲೆ ಒಬ್ಬರವು ತಮ್ಮ ಅಭಿಮಾನಿಗಳನ್ನ ಬಿಟ್ಟು ಇಹಲೋಕವನ್ನ ತ್ಯಜಿಸುತ್ತಿದ್ದಾರೆ ಎಂದು ಹೇಳಬಹುದು. ಹೌದು ಕಳೆದ ವರ್ಷ ಹಲವು ಯುವನಟರು ಮತ್ತು ನಟಿಯರು ಅಕಾಲಿಕವಾಗಿ ಇಹಲೋಕವನ್ನ ತ್ಯಜಿಸಿದ್ದರು ಮತ್ತು ಅದೆಷ್ಟೋ ಹಿರಿಯ ನಟ ನಟಿಯರು ಮತ್ತು ಖ್ಯಾತ ಸಾಹಿತಿಗಳು ಇಹಲೋಕವನ್ನ ತ್ಯಜಿಸಿದ್ದರು ಎಂದು ಹೇಳಬಹುದು. ಇನ್ನು ಈಗ 2021 ಕೂಡ ಕನ್ನಡ ಚಿತ್ರರಂಗದ ಪಾಲಿಗೆ ಕರಾಳವಾದ ವರ್ಷವಾಗಿದೆ ಎಂದು ಹೇಳಬಹುದು. ಹೌದು 2021 ರಲ್ಲಿ ಕೂಡ ಸಾಯುವವರ ಸಂಖ್ಯೆಯ ದಿನದಿಂದ ದಿನಕ್ಕೆ ಮುಂದುವರೆಯುತ್ತಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗುತ್ತಿದೆ ಎಂದು ಹೇಳಬಹುದು.

ಒಬ್ಬ ಕಲಾವಿದನ ಸಾವಿನ ನೋವನ್ನ ಮರೆಯುವ ಮುನ್ನವೇ ಇನ್ನೊಬ್ಬ ಕಲಾವಿದನ ಅಗಲಿಕೆಯ ಸುದ್ದಿ ಕೇಳಿ ಬರುತ್ತಿರುವುದು ಜನರ ಬೇಸರಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ವಿಷಯಕ್ಕೆ ಬರುವುದಾದರೆ ನಿನ್ನೆ ಮಧ್ಯಾಹ್ನ ಕನ್ನಡ ಇನ್ನೊಬ್ಬ ಹಿರಿಯ ಕಲಾವಿದೆ ಇಹಲೋಕವನ್ನ ತ್ಯಜಿಸಿದ್ದು ಇಡೀ ಚಿತ್ರರಂಗವೇ ಈ ಕಲಾವಿದೆಯ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಹಾಗಾದರೆ ಈ ಹಿರಿಯ ನಟಿ ಯಾರು ಮತ್ತು ಅವರ ಅಗಲಿಕೆಗೆ ಕಾರಣ ಏನು ಅನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

ratima devi no more

ಕನ್ನಡ ಹಿರಿಯ ನಟಿ ಮತ್ತು ಕಲಾವಿದೆ ಪ್ರತಿಮಾ ದೇವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸುಮಾರು 60 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ಪ್ರತಿಮಾ ದೇವಿ ನಿನ್ನೆ ಮಧ್ಯಾಹ್ನ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ನಿರ್ದೇಶಕ ಎಸ್‍ವಿ ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಪ್ರತಿಮ ದೇವಿ ಇಂದು ಮಧ್ಯಾಹ್ನ ಮನೆಯಲ್ಲಿ ವಿಧಿವಶರಾಗಿದ್ದಾರೆ. 88 ವರ್ಷ ವಯಸ್ಸಾಗಿರುವ ಪ್ರತಿಮಾ ದೇವಿ ಅವರು ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿತ್ತು, ಆದರೆ ನಿನ್ನೆ ಮಧ್ಯಾಹ್ನ ಆರೋಗ್ಯದಲ್ಲಿ ಏರುಪೇರು ಆಗಿದ್ದು ನಟಿ ಪ್ರತಿಮಾ ದೇವಿ ವಿಧಿವಶರಾಗಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯವರಾದ ಪ್ರತಿಮಾ ದೇವಿ ಅವರ ಮೂಲ ಹೆಸರು ಮೋಹಿನಿ, ತಮ್ಮ ಸಣ್ಣ ವಯಸ್ಸಿನಿಂದಲೇ ರಂಗಭೂಮಿಯಲ್ಲಿ ನಟನೆಯನ್ನ ಮಾಡಲು ಶುರು ಮಾಡಿದರು ಪ್ರತಿಮಾ ದೇವಿಯವರು, ಸಣ್ಣ ಪ್ರಾಯದಲ್ಲೇ ರಂಗಭೂಮಿಯಲ್ಲಿ ಅಭಿನಯಿಸಿದ್ದ ಇವರು 1947ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಕೃಷ್ಣಲೀಲಾ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಜಗನ್ಮೋಹಿನಿ ಚಿತ್ರದ ಮುಖಾಂತರ ನಾಯಕಿಯಾಗಿ ಹೊರಹೊಮ್ಮಿದ್ದರು. ಚಂಚಲ ಕುಮಾರಿ, ನಾಗಕನ್ಯಾ, ದಲ್ಲಾಳಿ, ಧರ್ಮಸ್ಥಳ ಮಹಾತ್ಮೆ, ವರದಕ್ಷಿಣೆ, ಮುಟ್ಟಿದ್ದೆಲ್ಲಾ ಚಿನ್ನ, ರಾಜ್‍ಕುಮಾರ್ ಅವರ ಜತೆಗೆ ಭಕ್ತಚೇತ ಹೀಗೆ ಒಟ್ಟು 60 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜಯರಾಜ್ ಸಿಂಗ್ ಹಾಗೂ ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಇವರ ಮಕ್ಕಳು.

Join Nadunudi News WhatsApp Group

ratima devi no more

Join Nadunudi News WhatsApp Group