Ration Card: ಜೂನ್ 30 ರೊಳಗೆ ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ರೇಷನ್ ಕಾರ್ಡ್, BPL ಕಾರ್ಡುದಾರರ ಗಮನಕ್ಕೆ.

ಜೂನ್ 30 ರೊಳಗೆ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ರದ್ದಾಗಲಿದೆ.

Ration Card And Aadhar Card Link: ಪಡಿತರ ಚೀಟಿದಾರರಿಗೆ ಇದೀಗ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ರದ್ದು ಮಾಡುವುದಾಗಿ ತಿಳಿಸಿದೆ. ಪಡಿತರ ಚೀಟಿ (Ration Card) ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ.

Ration Card Ban
Image Credit: yahoo

ರದ್ದಾಗಲಿದೆ ಪಡಿತರ ಚೀಟಿ
ಪಡಿತರಚೀಟಿದಾರರು ಈ ನಿಯಮವನ್ನು ತಿಳಿದುಕೊಳ್ಳುವುದು ಉತ್ತಮ. ಜೂನ್ 30 ರೊಳಗೆ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ತಾನಾಗಿಯೇ ರದ್ದಾಗಲಿದೆ. ಇದರ ಬಗ್ಗೆ ಮಾಹಿತಿ ತಿಳಿಯೋಣ.

ಪಡಿತರಚೀಟಿದಾರರಿಗೆ ಹೊಸ ಮಾಹಿತಿ
ಜುಲೈ 1 ರಿಂದ ಪಡಿತರಕ್ಕೆ ಸಿಗುವ ಉಚಿತ ಅಕ್ಕಿ ಲಭ್ಯವಾಗುವುದಿಲ್ಲ. ತಪ್ಪು ಜನರು ಪಡಿತರ ಚೀಟಿ ಪಡೆಯುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಇನ್ನು ಅರ್ಹರಿಗೆ ಮಾತ್ರ ಗ್ಯಾಸ್ ಅಥವಾ ಸಬ್ಸಿಡಿ ದೊರೆಯುತ್ತದೆ ಎಂದು ತಿಳಿಸಲಾಗಿದೆ. ನಕಲು ಪಡಿತರ ಚೀಟಿ ಬರುತ್ತಿರುವುದರಿಂದ ಈ ರೀತಿಯ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Central government has instructed to link Aadhaar card with ration card
Image Credit: bhaskarhindi

ಅಲ್ಲದೆ ಆಯಾ ರಾಜ್ಯ ಸರ್ಕಾರಗಳು ಕೂಡ ಆರ್ಜಿಗಳನ್ನು ಸ್ವೀಕರಿಸಿ ತಮ್ಮ ನಿಯಮಾನುಸಾರ ಹೊಸ ಪಡಿತರ ಚೀಟಿಯನ್ನು ಜಾರಿಗೊಳಿಸುತ್ತಿದೆ. ಎಲ್ಲರೂ ಒಂದೇ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚಿಸಿದೆ. ಯಾರಾದರೂ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ ಬೇಗ ಮಾಡುವುದು ಉತ್ತಮ.

Join Nadunudi News WhatsApp Group

Join Nadunudi News WhatsApp Group