Ration Card: ದೇಶದಲ್ಲಿ ಜಾರಿಗೆ ಬಂತು ಹೊಸ ರೇಷನ್ ಕಾರ್ಡ್ ರೂಲ್ಸ್, ಇನ್ಮುಂದೆ ಈ ಎಲ್ಲಾ ಕಾರ್ಡ್ ರದ್ದು.

ಇನ್ನುಮುಂದೆ ಇಂತವರ ರೇಷನ್ ಕಾರ್ಡ್ ರದ್ದಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Ration Card Cancelation: ದೇಶದಲ್ಲಿ ಈಗಾಗಲೇ ಬಡ ಜನರಿಗಾಗಿ ಉಚಿತ ಪಡಿತರನ್ನು ನೀಡಲಾಗುತ್ತಿಯಾದೆ. BPL Ration Card ಹೊಂದಿರುವ ಕುಟುಂಬಕೆ ಸರ್ಕಾರ ಉಚಿತವಾಗಿ ಪಡಿತರನ್ನು ನೀಡುತ್ತಿದೆ. ಇತ್ತೀಚಿಗೆ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರೂ ಕೂಡ ಸರ್ಕಾರ ಹೊಸ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಇನ್ನು ಉಚಿತ ಗ್ಯಾರಂಟಿ ಯೋಜನೆಗಳ ಲಾಭ ಅನರ್ಹರಿಗೆ ತಲುಪ ಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಪಡಿತರ ಚೀಟಿ ಹೊಂದಿರುವವರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ಇದಕ್ಕಾಗಿ ಅನರ್ಹರ ಪಡಿತರ ಚೀಟಿಯನ್ನು ರದ್ದುಗೊಳಿಸುವ ಕಾರ್ಯದಲ್ಲಿ ಸರ್ಕಾರ ತೊಡಗಿಕೊಂಡಿದೆ. ಇನ್ನು ಸರ್ಕಾರ ಯಾರ ಪಡಿತರ ಚೀಟಿಯನ್ನು ರದ್ದುಗೊಳಿಸಬೇಕೆನ್ನುವ ಬಗ್ಗೆ ನಿರ್ಧರಿಸಿದೆ. ಇನ್ನುಮುಂದೆ ಇಂತವರ ರೇಷನ್ ಕಾರ್ಡ್ ರದ್ದಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Ration Card Cancelation
Image Credit: Odishatv

ದೇಶದಲ್ಲಿ ಜಾರಿಗೆ ಬಂತು ಹೊಸ ರೇಷನ್ ಕಾರ್ಡ್ ರೂಲ್ಸ್, ಇನ್ಮುಂದೆ ಈ ಎಲ್ಲಾ ಕಾರ್ಡ್ ರದ್ದು
•ಆರ್ಥಿಕವಾಗಿ ದುರ್ಬಲವಾಗಿರುವ ಎಲ್ಲ ಬಡ ಕುಟುಂಬಗಳಿಗೆ ಮಾತ್ರ ಪಡಿತರ ಚೀಟಿ ಸೌಲಭ್ಯವಿದೆ. ಆರ್ಥಿಕವಾಗಿ ಶ್ರೀಮಂತ ಕುಟುಂಬಗಳಿಗೆ ಪಡಿತರ ಚೀಟಿ ಸೌಲಭ್ಯವಿಲ್ಲ, ಆದರೆ ವಂಚನೆಯಿಂದ ಪಡಿತರ ಚೀಟಿ ಪಡೆಯುವ ಶ್ರೀಮಂತ ಕುಟುಂಬಗಳು ಸಾಕಷ್ಟಿವೆ. ಅಂತಹ ಎಲ್ಲಾ ಕಾರ್ಡುದಾರರನ್ನು ಗುರುತಿಸಿ, ನಂತರ ಅನರ್ಹರು ಪಡೆದ ಪಡಿತರ ಚೀಟಿಗಳನ್ನು ಮುಚ್ಚಲಾಗುತ್ತದೆ.

•ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ಎಲ್ಲಾ ಪಡಿತರ ಚೀಟಿದಾರರು, ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ ಗೆ ಲಿಂಕ್ ಮಾಡುವುದು ಅವಶ್ಯಕ. ಆದರೆ ಪಡಿತರ ಚೀಟಿಗಳು ಇನ್ನೂ ಆಧಾರ್‌ ಗೆ ಲಿಂಕ್ ಆಗದಂತಹ ಅನೇಕ ಪಡಿತರ ಚೀಟಿಗಳಿವೆ. ಇಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ.

•ಆಹಾರ ಇಲಾಖೆಯು ಪ್ರಕಾರ, ಪ್ರತಿ 5 ವರ್ಷಗಳಿಗೊಮ್ಮೆ ಪಡಿತರ ಚೀಟಿಯನ್ನು ನವೀಕರಿಸುವುದು ಅವಶ್ಯಕ. ಈ ಪ್ರಕ್ರಿಯೆಯಲ್ಲಿ ಆಫ್‌ ಲೈನ್ ಅಥವಾ ಆನ್‌ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನವೀಕರಣ ಪ್ರಕ್ರಿಯೆಯ ನಂತರ, ಪಡಿತರ ಚೀಟಿದಾರರು ಹೊಸ ಪಡಿತರ ಚೀಟಿಯನ್ನು ಪಡೆಯುತ್ತಾರೆ ಆದರೆ ಅನೇಕ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯನ್ನು ನವೀಕರಿಸುವುದಿಲ್ಲ. ನವೀಕರಣ ಆಗದೆ ಇರುವ ಪಡಿತರಚೀಟಿಯನ್ನು ಕೂಡ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ.

Join Nadunudi News WhatsApp Group

•ಇನ್ನು ಆರು ತಿಂಗಳಿನಿಂದ ಯಾರು ಪಡಿತರನ್ನು ಪಡಿದಿಲ್ಲವೋ ಅಂತವರನ್ನು ಕೂಡ ಅನರ್ಹರ ಪಟ್ಟಿಗೆ ಸೇರಿಸಲು ಸರ್ಕಾರ ನಿರ್ಧರಿಸಿದೆ. ಆರು ತಿಂಗಳಿನಿಂದ ಪಡಿತ್ರನ್ನು ಪಡೆಯದೇ ಇರುವ ಕುಟುಂಬದ ಪಡಿತರ ಚೀಟಿಯನ್ನು ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ.

Ration Card latest News
Image Credit: Gulfhindi

Join Nadunudi News WhatsApp Group