Fortified rice: ರೇಷನ್ ಅಂಗಡಿಗಳಲ್ಲಿ ಇನ್ನುಮುಂದೆ ಸಿಗಲಿದೆ ಶಕ್ತಿಶಾಲಿ ಅಕ್ಕಿ, ಹೊಸ ಯೋಜನೆ ಜಾರಿಗೆ ತಂದ ಸರ್ಕಾರ.

ಪಡಿತರ ಚೀಟಿ ಹೊಂದಿರುವವರಿಗೆ ಸರವರ್ಧಕ ವಿತರಣೆ ಮಾಡಲು ಸರ್ಕಾರ ನಿರ್ಧಾರವನ್ನ ಮಾಡಿದೆ.

Fortified Rice For ration Card Holdres: ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ (Central Government) ಉಚಿತ ಪಡಿತರನ್ನು ಇಡುತ್ತಿದೆ. ಉಚಿತ ಪಡಿತರ ವಿತರಣೆಯಿಂದಾಗಿ ಜನಸಾಮಾನ್ಯರು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಜನರಿಗೆ ಪಡಿತರನ್ನು ಕೇಂದ್ರ ಸರ್ಕಾರ ನೀಡುತ್ತಿದೆ.

ಇದೀಗ ಪಡಿತರ ಚೀಟಿ ಹೊಂದಿದವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪಡಿತರ ವಿತರಣೆಯಲ್ಲಿ ಹೊಸ ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಿದೆ.

The government has decided to distribute ration card to the ration card holders.
Image Credit: financialexpress

ಪಡಿತರ ಚೀಟಿದಾರರಿಗೆ ಹೊಸ ಸೌಲಭ್ಯ
ಇದೀಗ ಕೇಂದ್ರ ಸರ್ಕಾರ ಪಡಿತರ ಚೀಟಿ ಹೊಂದಿರುವವರಿಗೆ ಹೊಸ ಸೌಲಭ್ಯವನ್ನ ನೀಡಲಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿನ ರಕ್ತ ಹೀನತೆಯನ್ನು ಹೋಗಲಾಡಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಹೊಸ ಸೌಲಭ್ಯವನ್ನು ಒದಗಿಸಲಿದೆ. ಈಗಾಗಲೇ 269 ಜಿಲ್ಲೆಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪೋರ್ಟಿಫೈಡ್ ಅಕ್ಕಿಯನ್ನು (Fortified Rice) ವಿತರಿಸಲಾಗುತ್ತಿದೆ.

ಇನ್ನು ಸಾಕಷ್ಟು ಜಿಲ್ಲೆಗಳಲ್ಲಿ ಈ ಹೊಸ ಸೌಲಭ್ಯ ಜಾರಿಗೆ ಬರಬೇಕಿದೆ. 2024 ರ ಒಳಗೆ ಇನ್ನು ಉಳಿದ ಜಿಲ್ಲೆಗಳಿಗೆ ಫೋರ್ಟಿಫೈಡ್ ಅಕ್ಕಿಯನ್ನು ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾಹಿತಿ ನೀಡಿದ್ದಾರೆ.

The state government has decided to distribute fortified rice in ration shops
Image Credit: businesstoday

ಮೈಕ್ರೋನ್ಯೂಟ್ರಿಯಂಟ್ ಒಳಗೊಂಡ ಸಾರವರ್ಧಿತ ಅಕ್ಕಿ ವಿತರಣಾ ಯೋಜನೆ
ಇನ್ನು ಮಹಿಳೆಯರಲ್ಲಿ ಹಾಗು ಮಕ್ಕಳಲ್ಲಿ ರಕ್ತ ಹೀನತೆಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸುವ ದ್ರಷ್ಟಿಯಿಂದ ಮೈಕ್ರೋನ್ಯೂಟ್ರಿಯಂಟ್ (Micronutrient) ಒಳಗೊಂಡ ಸಾರವರ್ಧಿತ ಅಕ್ಕಿ ವಿತರಣೆ ಮಾಡಲು ಕೇಂದ್ರ ಸರ್ಕಾರ ಯೋಜನೆ ನಡೆಸಿದೆ.

Join Nadunudi News WhatsApp Group

ಸಾರವರ್ಧಿತ ಅಕ್ಕಿಯನ್ನು ವಿತರಿಸುವ ಗುರಿ ಸರ್ಕಾರದ್ದಾಗಿದೆ. ದೇಶದಲ್ಲಿ ಒಟ್ಟು 735 ಜಿಲ್ಲೆಗಳಿವೆ. ಎಲ್ಲಾ ಜಿಲ್ಲೆಗಳಿಗೂ ಉತ್ತಮ ಗುಣಮಟ್ಟದ ಅಕ್ಕಿಯನ್ನು ವಿತರಿಸಲು ಸರ್ಕಾರ ಮುಂದಾಗಿದೆ. ಪಿಡಿಎಸ್ ನ ಮೂಲಕ ಇದುವರೆಗೂ 269 ಜಿಲ್ಲೆಗಳಲ್ಲಿ ಮೈಕ್ರೋನ್ಯೂಟ್ರಿಯಂಟ್ ಒಳಗೊಂಡ ಸಾರವರ್ಧಿತ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಉಳಿದ ಜಿಲ್ಲೆಗಳಿಗೂ ಈ ಯೋಜನೆಯ ವ್ಯಾಪ್ತಿಯನ್ನು ವಿತರಿಸಲು ಸರ್ಕಾರ ಮುಂದಾಗಿದೆ.

Join Nadunudi News WhatsApp Group