Ration Card Edit: ರಾತ್ರೋರಾತ್ರಿ ರೇಷನ್ ಕಾರ್ಡ್ ಇದ್ದವರಿಗೆ ಹೊಸ ನಿಯಮ, ಇನ್ನುಮುಂದೆ ಈ ಕೆಲಸ ಅಸಾಧ್ಯ ಅಂದ ಸರ್ಕಾರ.
ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ ಸಮಯಾವಕಾಶ ಮುಕ್ತಾಯ.
Ration Card Edit And Update: ರಾಜ್ಯ ಸರ್ಕಾರದ ಐದು ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿದೆ. ಸದ್ಯದಲ್ಲೇ ರಾಜ್ಯದ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ಯೋಜನೆಯಾದ Yuva Nidhi ಜಾರಿಯಾಗುವ ಸಾಧ್ಯತೆ ಇದೆ. ರಾಜ್ಯ ಸಾರ್ಕಾರ ಯುವ ನಿಧಿ ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇನ್ನು ರಾಜ್ಯ ಸರ್ಕಾರ ಉಚಿತ ಯೋಜನೆಗಳ ಲಾಭ ಪಡೆಯಲು Ration Card ಮುಖ್ಯ ದಾಖಲೆಯಾಗಿದೆ.
Ration Card ತಿದ್ದುಪಡಿಗೆ ಅವಕಾಶ ನೀಡಿದ ಸರ್ಕಾರ
ಇನ್ನು Gruha Lakshmi ಹಾಗೂ Anna Bhagya ಯೋಜನೆಗಳಿಗೆ Ration Card ಮುಖ್ಯ ಪುರಾವೆಯಾಗಿದೆ. ಇನ್ನು Ration Card ನಲ್ಲಿ ಸರಿಯಾದ ಮಾಹಿತಿ ಇಲ್ಲದೆ ಇರುವ ಕಾರಣ ಸಾಕಷ್ಟು ಅರ್ಹ ಫಲಾನುಭವಿಗಳು Gruha Lakshmi ಹಾಗೂ Anna Bhagya ಯೋಜನೆಗಳಿಂದ ವಂಚಿತರಾಗಿದ್ದಾರೆ. ಈ ಕಾರಣಕ್ಕೆ ಸರ್ಕಾರ Ration Card ತಿದ್ದುಪಡಿಗೆ ಅವಕಾಶ ನೀಡಿತ್ತು. ಇದೀಗ ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
Ration Card ತಿದ್ದುಪಡಿಗೆ ದಿನಾಂಕ ವಿಸ್ತರಣೆ
ಈ ಹಿಂದೆ ಸರ್ಕಾರ ಯೋಜನೆಯಡಿ ಅರ್ಹರು ಲಾಭವನ್ನು ಪಡೆಯಲು ರೇಷನ್ ಕಾರ್ಡ್ ನ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು. ಇನ್ನು ಕೊಡ ಕೆಲವರ ಪಡಿತರ ಚೀಟಿ ತಿದ್ದುಪಡಿ ಆಗಿಲ್ಲ. ಮನೆಯ ಮುಖ್ಯಸ್ಥೆ ಮಹಿಳೆ ಆಗಿಲ್ಲದಿದ್ದರೆ ಅದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕಿದೆ. ಈ ಹಿಂದೆ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 9 ಕೊನೆಯ ದಿನಾಂಕವನ್ನು ನಿಗದಿಪಡಿಸಿತ್ತು. ಆದರೆ ದಿನಾಂಕವನ್ನು ಸರ್ಕಾರ ವಿಸ್ತರಿಸಿದ್ದು, ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 14 ರವರೆಗೆ ಸರ್ಕಾರ ಕಾಲಾವಕಾಶವನ್ನು ನೀಡಿದೆ.
ಇನ್ನುಮುಂದೆ Ration Card ತಿದ್ದುಪಡಿ ಅಸಾಧ್ಯ
ಇನ್ನು ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ ಸಮಯಾವಕಾಶ ಮುಕ್ತಾಯಗೊಂಡಿದೆ. ಇನ್ನುಮುಂದೆ Ration Card ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಇನ್ನು ಸರ್ಕಾರ Ration Card ತಿದ್ದುಪಡಿ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಹೇಳಿದೆ.
ಅರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ಇದ್ದ ಅವಕಾಶ ಮುಕ್ತಾಯಗೊಂಡಿದೆ. ಇನ್ನು ಕೂಡ ರಾಜ್ಯದ ಅನೇಕ ಫಲಾನುಭವಿಗಳ ರೇಷನ್ ಕಾರ್ಡ್ ತಿದ್ದುಪಡಿ ಬಾಕಿ ಇದೆ. ಸರ್ಕಾರ ಜನಸಾಮಾನ್ಯರ ಕಷ್ಟವನ್ನು ಅರಿತು ತಿದ್ದಿಪಡಿಗೆ ಮತ್ತೆ ಅವಕಾಶವನ್ನು ನೀಡುತ್ತದಾ ಎನ್ನುವುದನ್ನು ಕಾದು ನೋಡಬೇಕಿದೆ.