Ration Card: ರೇಷನ್ ಕಾರ್ಡ್ ನಲ್ಲಿ ಯಜಮಾನಿ ಅಂತ ಹೆಸರಿರದವರಿಗೆ ಇನ್ನೊಂದು ಸಮಸ್ಯೆ
ರೇಷನ್ ಕಾರ್ಡ್ ತಿದ್ದುಪಡಿ ಹೊಸ ನಿಯಮ
Ration Card Updates: ಗ್ಯಾರಂಟಿ ಯೋಜನೆಯ ಸೌಲಭ್ಯ ಗಳನ್ನು ಪಡೆಯುದಕ್ಕಾಗಿ ಈಗಾಗಲೇ ರೇಷನ್ ಕಾರ್ಡ್ (Ration Card) ತಿದ್ದುಪಡಿಗೆ ಅವಕಾಶ ವನ್ನು ನೀಡಲಾಗಿತ್ತು, ಈಗಾಗಲೇ ಹೆಸರು ಬದಲಾವಣೆ,,ಹೆಸರು ಸೆರ್ಪಡೆ, ಹೆಸರು ಡಿಲೀಟ್ ಹೀಗೆ ಹಲವು ತಿದ್ದುಪಡಿಗೆ ಅವಕಾಶ ನೀಡಿದ್ದು, ಇದೀಗ ನೀಡಿದ ಅವಧಿ ಮೂಗಿದಿದೆ, ಅದರೆ ಇನ್ನು ಅನೇಕ ಜನರ ರೇಷನ್ ಕಾರ್ಡ್ ತಿದ್ದುಪಡಿ ಯಾಗಿಲ್ಲ,ವಿಧಾನಸಭೆ ಚುನಾವಣೆ ನಡೆದ ಬಳಿಕ ಗ್ಯಾರಂಟಿ ಯೋಜನೆಗಳ ಸೌಲಭ್ಯ ಕ್ಕಾಗಿ ತಿದ್ದಿಪಡಿ ಅವಕಾಶ ನೀಡಿದ್ದು ಬಹುತೇಕರಿಗೆ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ಮಾಡಲು ಸಾಧ್ಯವಾಗಿಲ್ಲ.
ಪೂರ್ಣ ಗೊಂಡಿಲ್ಲ
ಪಡಿತರ ತಿದ್ದುಪಡಿಗಾಗಿ ಸೆ.12 ರಿಂದ 14 ರವರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವಕಾಶ ನೀಡಿತ್ತು. ನಿಗದಿತ ಸಮಯದಲ್ಲಿ ಕೆಲವೊಂದು ಕುಟುಂಬಗಳು ತಮ್ಮ ಪಡಿತರ ಚೀಟಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿವೆ. ಕೆಲವು ಅರ್ಜಿಗಳು ಆನ್ಲೈನ್ ಮೂಲಕ ನೋಂದಣಿಯಾಗಿವೆ. ಆದರೆ ಕೆಲವು ಗ್ರಾಮೀಣ ಪ್ರದೇಶದಲ್ಲಿ ಇದು ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಜನರು ಗ್ರಾಹಕ ಸೇವಾ , ಗ್ರಾಮ ವನ್ಗಳಲ್ಲಿ ಸಾಲು ಗಟ್ಟಿ ನಿಂತಿದ್ದರು, ಆದರೆ ಬಹುತೇಕ ಕಡೆ ಸರ್ವರ್ ಸಮಸ್ಯೆ ಉಂಟಾಗಿತ್ತು, ಈ ವೆಬ್ಸೈಟ್ ಲಿಂಕ್ ತೆರೆದುಕೊಳ್ಳದೇ ಸಮಸ್ಯೆ ಯಾಗಿತ್ತು, ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗಿಲ್ಲ.
ಇನ್ಮುಂದೆ ಅವಕಾಶ ಇಲ್ಲ
ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ನೀಡಿದ್ದು, ಆಹಾರ ಇಲಾಖೆ ಇನ್ಮುಂದೆ ಮತ್ತೆ ಅವಕಾಶ ನೀಡಲಾಗುತ್ತದೆಯೋ ಎಂಬ ಪ್ರಶ್ನೆ ಎಲ್ಲರಲ್ಲಿಯು ಇದೆ, ಗ್ರಾಮೀಣ ಪ್ರದೇಶದಲ್ಲಿ ಹಲವಷ್ಟು ಜನರಿಗೆ ತಿದ್ದುಪಡಿ ಮಾಡಲು ಸಾಧ್ಯ ವಾಗಿಲ್ಲ
ಹೊಸ ಕಾರ್ಡ್ ಅರ್ಜಿ ಸಲ್ಲಿಕೆ
ಈಗಾಗಲೇಹೊಸ ಕಾರ್ಡ್ ಅರ್ಜಿ ಸಲ್ಲಿಕೆ ಬಗ್ಗೆ ಜನರು ಬಹಳಷ್ಟು ಆಸಕ್ತಿ ವಹಿಸಿದ್ದಾರೆ, ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಇನ್ನುಕೂಡ ಅವಕಾಶ ನೀಡಿಲ್ಲ, ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದವರ ಪರಿಶೀಲನೆ ನಡಿತಾ ಇದ್ದು ಶೀಘ್ರವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬಹುದು.