Own Ration Shop: ಈಗ ನಿಮ್ಮದೇ ಹೆಸರಿನಲ್ಲಿ ತೆರೆಯಿರಿ ಹೊಸ ರೇಷನ್ ಶಾಪ್, ಸರ್ಕಾರದ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ.

ರಾಜ್ಯದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.

Ration Shop Dealership: ರಾಜ್ಯದಲ್ಲಿ ಈಗಾಗಲೇ Anna Bhagya ಯೋಜನೆಯಡಿ BPL ಪಡಿತರ ಚೀಟಿದಾರರಿಗೆ ಉಚಿತ ಪಡಿತರನು ನೀಡಲಾಗುತ್ತಿದೆ. ರಾಜ್ಯದ ಜನತೆಗೆ ಉಚಿತ ಪಡಿತರ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಬಡತನ ರೇಖೆಗಿಂತ ಕೆಳಗಿರುವವರು ಮಾತ್ರ ಉಚಿತ ಪಡಿತರ ಲಾಭವನ್ನು ಪಡೆಯಲು ಅರ್ಹರಿಗಿರುತ್ತಾರೆ. ಪ್ರಸ್ತುತ ರಾಜ್ಯದಲ್ಲಿ ಅನರ್ಹರು ಕೂಡ ಉಚಿತ ಪಡಿತರ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಇನ್ನಷ್ಟು ಹೊರೆ ಎದುರಾಗುತ್ತಿದೆ ಎನ್ನಬಹುದು. ಇನ್ನು ಅಕ್ರಮವಾಗಿ ಪಡಿತರನ್ನು ಪಡೆಯುತ್ತಿರುವುದನ್ನು ಕಡಿವಾಣ ಹಾಕಲು ಸರ್ಕಾರ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದೆ. ಇನ್ನು ರಾಜ್ಯದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಬಗ್ಗೆ ವಿವರ ಇಲ್ಲಿದೆ.

Ration Shop Apply
Image Credit: Businessleague

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ
ಸಾಮಾನ್ಯವಾಗಿ ಎಲ್ಲ ಪ್ರದೇಶದಲ್ಲಿಯೂ ಗ್ರಾಮಕ್ಕೆ ಅನುಗುಣವಾಗಿ ಒಂದೊಂದು ನ್ಯಾಯಬೆಲೆ ಅಂಗಡಿ ಇರುತ್ತದೆ. ಜನರು ತಮ್ಮ ತಮ್ಮ ಊರಿಗೆ ಸಂಬಂಧಿಸಿದ ನಾಯ್ಯಬೇಳೆ ಅಂಗಡಿಯಲ್ಲಿ ಪಡಿತರನ್ನು ಪಡೆಯುತ್ತಾರೆ. ಇನ್ನು ಕೆಲವೊಂದು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆ ಇರುತ್ತದೆ. ಕೆಲ ಹಳ್ಳಿ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳು ಲಭ್ಯವಿರುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನ ಮಾಡಿದೆ. ಸ್ಥಳೀಯರು ಅರ್ಜಿ ಸಲ್ಲಿಸುವ ಮೂಲಕ ಸರ್ಕಾರ ಷರತ್ತಿನ ಅನ್ವಯ ನ್ಯಾಯಬೆಲೆ ಅಂಗಡಿಯನ್ನು ತೆರೆಯಬಹುದಾಗಿದೆ.

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಪ್ರತಿ ಕೆಜಿ ದವಸ ಧಾನ್ಯದ ಮಾರಾಟಕ್ಕೆ ಅನುಗುಣವಾಗಿ ಕಮಿಷನ್ ಅನ್ನು ನೀಡಲಾಗುತ್ತದೆ. ಮಾಸಿಕ ಮಾರಾಟದ ಮೇಲು ಕೂಡ ಸಂಭಾವನೆ ಅವಲಂಭಿಸಿರುತ್ತದೆ. ಇನ್ನು ಗ್ರಾಮದ ಪಡಿತರ ಚೀಟಿ ಅನುಗುಣವಾಗಿ ಬೋನಸ್ ಕೂಡ ಪಡೆಯುವ ಅವಕಾಶ ಇರುತ್ತದೆ.

Ration Shop Latest News
Image Credit: ABP Live

ಕಂಪ್ಯೂಟರ್ ಜ್ಞಾನ ಹೊಂದಿರುವ 18 ವರ್ಷ ಮೇಲ್ಪಟ್ಟವರು ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಸಲ್ಲಿಸಬಹುದು. ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ htpp://ahar.kar.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ನವೆಂಬರ್ ತಿಂಗಳು ಕೊನೆಯ ದಿನಾಂಕವಾಗಿದೆ.

Join Nadunudi News WhatsApp Group

Join Nadunudi News WhatsApp Group