Ravindra Jadeja: ಪತ್ನಿಯ ಕಾರಣ ತಂದೆಯ ಜೊತೆಗಿನ ಸಂಬಂಧ ಕಳೆದುಕೊಂಡ ರವೀಂದ್ರ ಜಡೇಜಾ…? ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಬಡತನದಲ್ಲಿಯೂ ಕ್ರಿಕೆಟಿಗರನ್ನಾಗಿ ಮಾಡಿದ ತನ್ನ ತಂದೆಯನ್ನೇ ಜಡೇಜಾ ದೂರವಿಡಲು ಕಾರಣವೇನು..?

Ravindra Jadeja And His Father ವಿವಿಧ ಕ್ಷೇತ್ರಗಳಲ್ಲಿ ಜನರು ಸಾಧನೆಯನ್ನು ಮಾಡಿರುತ್ತಾರೆ. ಆಯಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಜೀವನದಲ್ಲಿ ಸಾಕಷ್ಟು ಸೋಲು ಗೆಲವನು ನೋಡಿದ ಬಳಿಕವೇ ಯಶಸ್ಸನ್ನು ಕಾಣಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಸಾಧನೆಯ ಮಾಡಿದವರ ಜೀವನದ ಕಥೆಯನ್ನು ಕೆಳೆದರೆ ಅವರು ಯಾವ ರೀತಿಯ ತೊಂದರೆಯನ್ನ ಅನುಭವಿಸಿದ್ದಾರೆ ಎನ್ನುವುದನ್ನು ತಿಳಿಯಲು ಸಾದ್ಯವಾಗುತ್ತದೆ.

ಇನ್ನು ಕ್ರಿಕೆಟ್ ಕ್ಷೇತ್ರದಲ್ಲಿರುವ ಎಲ್ಲ ಆಟಗಾರರ ಜೀವನದಲ್ಲಿ ಒಂದು ಕಹಿ ಘಟನೆ ನಡೆದಿರುತ್ತದೆ. ಸಧ್ಯ ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ Ravindra Jadeja ಅವರ ಕುಟುಂಭದಲ್ಲಿ ಬಿರುಕು ಮೂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಡತನದಲ್ಲಿಯೂ ಕ್ರಿಕೆಟಿಗರನ್ನಾಗಿ ಮಾಡಿದ ತನ್ನ ತಂದೆಯನ್ನೇ ಜಡೇಜಾ ದೂರವಿಡಲು ಕಾರಣವೇನು..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Ravindra Jadeja Life Story
Image Credit: Jagran

ರವೀಂದ್ರ ಜಡೇಜಾ ಮತ್ತು ಅವರ ತಂದೆಯ ನಡುವೆ ಬಿರುಕು
ರವೀಂದ್ರ ಜಡೇಜಾ ಮತ್ತು ತಂದೆ ಅನಿರುದ್ಧ್ ಸಿನ್ಹಾ ಜಡೇಜಾ ನಡುವಿನ ಸಂಬಂಧವು ಹದಗೆಟ್ಟಿದೆ ಎಂದು ಇತ್ತೀಚಿನ ಬೆಳವಣಿಗೆಗಳು ಬಹಿರಂಗಪಡಿಸಿವೆ. ತಂದೆಯ ವಿರುದ್ಧ ಮಗ ಸಿಟ್ಟಿಗೆದ್ದು, ಪತ್ನಿ ರಿವಾಬಾ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಇದಾಗಿದೆ ಎಂದು ಜಡೇಜಾ ಬಹಿರಂಗವಾಗಿ ಹೇಳಿದ್ದಾರೆ. ನನ್ನ ಮಗನ ಸಂಬಂಧ ಮುರಿದು ಬಿದ್ದಿದೆ. ಜಡೇಜಾ ಅವರ ಪತ್ನಿ ರಿವಾಬಾ ಅವರಿಂದ ಕುಟುಂಬದಲ್ಲಿ ಬಿರುಕು ಸೃಷ್ಟಿಸುತ್ತಿದ್ದಾರೆ ಎಂದು ಅನಿರುದ್ಧ್ ಆರೋಪ ಮಾಡಿದ್ದರು.

Ravindra Jadeja Father
Image Credit: Sportskeeda

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಜಡೇಜಾ, ಎಲ್ಲಾ ಆರೋಪಗಳು ಆಧಾರರಹಿತವಾಗಿದ್ದು, ತಮ್ಮ ಪತ್ನಿ ರಿವಾಬಾ ಅವರ ಘನತೆಗೆ ಮಸಿ ಬಳಿಯುವ ಪ್ರಯತ್ನ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ಹೇಳಿದ ಎಲ್ಲಾ ವಿಷಯಗಳು ಅರ್ಥಹೀನ ಮತ್ತು ಸುಳ್ಳು. ಇದು ಕೇವಲ ಏಕಪಕ್ಷೀಯ ಸಮಸ್ಯೆಯಾಗಿದೆ. ನಾನು ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಇದು ನನ್ನ ಹೆಂಡತಿಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳು. ಅವರು ನಿಜವಾಗಿಯೂ ಖಂಡನೀಯ ಮತ್ತು ಅಸಹ್ಯಕರರು ಎಂದು ಜಡೇಜಾ ಪ್ರತಿಕ್ರಿಯಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group