Bank License: ಈ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI, ಹಣ ಇಟ್ಟವರು ಬೇಗ ವಾಪಾಸ್ ಪಡೆದುಕೊಳ್ಳಿ.

RBI ಇನ್ನೊಂದು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ್ದು ಜನರು ಹಣವನ್ನ ಮರಳಿ ಪಡೆಯಬೇಕು ಎಂದು ಬ್ಯಾಂಕ್ ತಿಳಿಸಿದೆ.

Adoor Co-Operative Urban Bank License: ಈಗ ಆರ್ ಬಿ ಐ (RBI) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆರ್ ಬಿ ಐ ಅಡೂರು ಕೋಒಪರೇಟಿವ್ ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದೆ. ದೇಶದಲ್ಲಿ ಸಾಕಷ್ಟು ಸರ್ಕಾರೀ ಬ್ಯಾಂಕ್ ಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ವಿವಿಧ ರೀತಿಯ ಸೌಲಭ್ಯದ ಜೊತೆಗೆ ಅನೇಕ ನಿಯಮಗಳನ್ನು ಜಾರಿಗೊಳಿಸುತ್ತದೆ.

ಇನ್ನು ಸರ್ಕಾರೀ ಬ್ಯಾಂಕ್ ಗಳ ಜೊತೆಗೆ ದೇಶದಲ್ಲಿ ಅನೇಕ ಸಹಕಾರಿ ಬ್ಯಾಂಕ್ ಗಳು ಇವೆ. ಇನ್ನು ಇತ್ತೀಚಿನ ದಿನಗಳಲ್ಲಿ ಸಹಕಾರಿ ಬ್ಯಾಂಕ್ ಗಳಲ್ಲಿ ಅನೇಕ ರೀತಿಯ ಅಕ್ರಮಗಳು ಬೆಳಕಿಗೆ ಬಂದಿವೆ. ಈ ಕಾರಣದಿಂದ ಆರ್ ಬಿಐ ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

RBI has canceled the license of another bank and the bank said that people should get their money back.
Image Credit: bqprime

ಅಡೂರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ರದ್ದುಗೊಳಿಸಿದ ಆರ್ ಬಿ ಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಇದೀಗ ಕೇರಳ ಮೂಲದ ಅಡೂರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ನ ಪರವಾನಗಿಯನ್ನು ಆರ್ ಬಿ ಐ ರದ್ದುಗೊಳಿಸಿದೆ. ಇಂದು ಕೇಂದ್ರೀಯ ಬ್ಯಾಂಕ್ ನಿಂದ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿ ಕೆಲಸ ಮಾಡಲು ಅನುಮತಿಸಲಾಗಿದೆ.

ಇನ್ನು ಆರ್ ಬಿ ಐ ಹೊರಡಿಸಿದ ಸೂಚನೆಯ ಪ್ರಕಾರ ಬ್ಯಾಂಕ್ ನ ಪರವಾನಗಿ ರದ್ದುಗೊಳಿಸುವಿಕೆಯು ಏಪ್ರಿಲ್ 24-2023 ರಂದು ವ್ಯವಹಾರದ ಮುಕ್ತಾಯದಿಂದ ಜಾರಿಗೆ ಬಂದಿದೆ. ಆರ್ ಬಿ ಐ ಅಡೂರ್ ಕೋ ಒಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಗೆ ಬ್ಯಾಂಕಿಂಗ್ ಪರವಾನಗಿ ರದ್ದು ಮಾಡಿದೆ ಎಂದು ಹೇಳಲಾಗಿದೆ.

RBI has canceled the license of Adoor Co-Operative Urban Bank
Image Credit: indiancooperative

ಅಡೂರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್
ಇನ್ನು ಅಡೂರ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ನ ಖಾತೆದಾರರು 5 ಲಕ್ಷದ ವರೆಗಿನ ಠೇವಣಿಗಳ ಮೇಲೆ ವಿಮಾ ರಕ್ಷಣೆಯ ಪ್ರಯೋಜನವನ್ನು ಪಡೆಯುತ್ತಾರೆ. ಈ ವಿಮೆಯು ವಿಮೆ ಮತ್ತು ಕ್ರೆಡಿಟ್ ಗ್ಯಾರೆಂಟಿ ಕಾರ್ಪೊರೇಷನ್ ನಿಂದ ಲಭ್ಯವಿದೆ. ಡಿಐಸಿಜೆಐಸಿಯು ರಿಸರ್ವ್ ಬ್ಯಾಂಕ್ ನ ಅಂಗಸಂಸ್ಥೆಯಾಗಿದ್ದು, ಸಹಕಾರಿ ಬ್ಯಾಂಕ್ ನ ಗ್ರಾಹಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

Join Nadunudi News WhatsApp Group

ಅಡೂರ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್‌ ನಲ್ಲಿ ರೂ 5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಠೇವಣಿ ಹೊಂದಿರುವ ಗ್ರಾಹಕರು ಡಿಐಸಿಜಿಸಿಯಿಂದ ಸಂಪೂರ್ಣ ಕ್ಲೈಮ್ ಪಡೆಯುತ್ತಾರೆ. ಆದರೆ ಅಂತಹ ಗ್ರಾಹಕರು ತಮ್ಮ ಖಾತೆಯಲ್ಲಿ 5 ಲಕ್ಷ ರೂ.ಗಿಂತ ಹೆಚ್ಚು ಠೇವಣಿ ಇಟ್ಟಿದ್ದರೆ, ಅವರಿಗೆ ಪೂರ್ಣ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group