Licence Cancelled: ದಿಡೀರ್ ಇನ್ನೆರಡು ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದ RBI, ಕಣ್ಣೀರಿಡುತ್ತಿದ್ದಾರೆ ಹಣ ಇಟ್ಟ ಜನರು.

ದಿಡೀರ್ ಇನ್ನೆರಡು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ ರಿಸರ್ವ್ ಬ್ಯಾಂಕ್.

RBI Cancelled Two Cooperative Bank Licence: ಸದ್ಯದ ದೇಶದಲ್ಲಿ Central Bank ವಿವಿಧ ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಕಳೆದ ಎರಡು ತಿಂಗಳಿನಲ್ಲಿ Reserve Bank Of India ಐದು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿ ಬ್ಯಾಂಕ್ ನ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಿತ್ತು.

ಇನ್ನು ಮೊನ್ನೆಯಷ್ಟೇ ಕೇರಳದ ಒಂದು ಸಹಕಾರಿ ಬ್ಯಾಂಕ್ ನ ಪರವಾನಗಿ ರದ್ದುಗೊಳಿಸಿದೆ. ಇದರ ಜೊತೆಗೆ ಇನ್ನುಳಿದ ನಾಲ್ಕು ಬ್ಯಾಂಕುಗಳಿಗೆ RBI ಲಕ್ಷ ಲಕ್ಷ ದಂಡ ವಿಧಿಸಿದೆ. ಇದೀಗ RBI ಮತ್ತೆ ಎರಡು ಸಹಕಾರಿ ಬ್ಯಾಂಕ್ ಗಳ ಲೈಸೆನ್ಸ್ ಅನ್ನು ರದ್ದು ಮಾಡಿ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. RBI ನಿಯಮ ಉಲ್ಲಘಿಸುತ್ತಿರುವ ಬ್ಯಾಂಕಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಿದೆ.

RBI Cancelled Two Cooperative Bank Licence
Image Credit: Rightsofemployees

ಈ ವಾರದಲ್ಲಿ ಮತ್ತೆ 3 ಬ್ಯಾಂಕುಗಳ ಪರವಾನಗಿ ರದ್ದು
ಇನ್ನು RBI Septembar 21 ರಂದು ತಿರುವನಂತಪುರ (ಕೇರಳ) ಅನಂತಶಯನಂ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ (Anantashayaman Shakari Bank Limites) ಪರವಾನಗಿಯನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ನೀಡಿತ್ತು. ಕೇರಳದ ಸಹಕಾರಿ ಬ್ಯಾಂಕ್ ಪರನಾಗಿ ರದ್ದುಗೊಳಿಸಿದ ಬೆನ್ನಲ್ಲೇ ಇದೀಗ RBI Karnataka ಹಾಗೂ Uttara Pradesh ಸಹಕಾರಿ ಬ್ಯಾಂಕ್ ಗಳ ಲೈಸೆನ್ಸ್ ಅನ್ನು ರದ್ದುಗಳಿಸಲು ಮುಂದಾಗಿದೆ. ಈ ವಾರದಲ್ಲಿ 3 ಬ್ಯಾಂಕುಗಳ ಪರವಾನಗಿಯನ್ನು RBI ರದ್ದುಗೊಳಿಸಿದೆ.

ದಿಡೀರ್ ಇನ್ನೆರಡು ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದ RBI
ಕೇಂದ್ರ ಬ್ಯಾಂಕ್ ಇದೀಗ Mallikarjuna Town Co-operative Bank Niamita (Maski, Karnataka) ಮತ್ತು National Cooperative Bank Limited (Bahraich, UP) ಬ್ಯಾಂಕುಗಳ ಪರವಾನಗಿಯನ್ನು ರದ್ದು ಮಾಡಿದೆ. ಈ ಸಹಕಾರಿ ಬ್ಯಾಂಕ್ ನಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ.

RBI again close bank license in india
Image Credit: Indiancooperative

ಇನ್ನು ಪರವಾನಗಿ ರದ್ದಾದ ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಬ್ಯಾಂಕ್ ಗೆ ಸೂಚನೆ ನೀಡಿದೆ. ಬ್ಯಾಂಕ್ ನ ಪರವಾನಗಿ ರದ್ದಾದ ಬಳಿಕ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದಾಗಲಿ ಅಥವಾ ಗ್ರಾಹಕರು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ ಎಂದು RBI ಆದೇಶ ಹೊರಡಿಸಿದೆ.

Join Nadunudi News WhatsApp Group

ಬ್ಯಾಂಕುಗಳಿಗೆ ದಂಡ ವಿಧಿಸಿದ RBI
*ಶ್ರೀ ವರ್ಣ ಸಹಕಾರಿ ಬ್ಯಾಂಕ್ ಲಿಮಿಟೆಡ್ ಗೆ RBI 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

*HCBL ಸಹಕಾರ ಬ್ಯಾಂಕ್ ಲಿಮಿಟೆಡ್ ಗೆ 11 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.

*ದಿ ಸ್ಟೇಟ್ ಟ್ರಾನ್ಸ್‌ಪೋರ್ಟ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ರೂ 2 ಲಕ್ಷ ದಂಡವನ್ನು ವಿಧಿಸಲಾಗಿದೆ.

*ದಿ ಸಿಟಿಜನ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

Join Nadunudi News WhatsApp Group