RBI Licence: ಸಡನ್ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI, ನಿನ್ನೆಯಿಂದಲೇ ಎಲ್ಲಾ ವಹಿವಾಟು ಬಂದ್.

ಇದೀಗ ಮತ್ತೊಂದು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿದ RBI.

RBI Cancelled The Kapol Co-operative Bank Limited Licence: Reserve Bank Of India ಇತ್ತೀಚಿಗೆ ದೇಶದ ಸಾಕಷ್ಟು ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ RBI ಕಳೆದ ಎರಡು ತಿಂಗಳ ಹಿಂದೆ ಐದು ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಿತ್ತು. ಈ ನಿಟ್ಟಿನಲ್ಲಿ ಅನೇಕ ಬ್ಯಾಂಕುಗಳು ಎಚ್ಚೆತ್ತುಕೊಂಡಿದ್ದವು.

RBI ನಿಯಮಗಳನ್ನು ಬ್ಯಾಂಕುಗಳು ಪಾಲಿಸುತ್ತಿದ್ದವು. ಆದರೆ Septembar 20 ರ ನಂತರ RBI ಮತ್ತೆ ಕೆಲ ಸಹಕಾರಿ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಕಳೆದ ವಾರದಲ್ಲಿ RBI 3 ಬ್ಯಾಂಕುಗಳ ಪಾರವಾನಗಿಯನ್ನು ರದ್ದುಗೊಳಿಸಿದ್ದು, ಇದೀಗ ಮಹಾರಾಷ್ಟ್ರದ ಮತ್ತೊಂದು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿದೆ. ಈ ಸಹಕಾರಿ ಬ್ಯಾಂಕ್ ನ ವಹಿವಾಟುಗಳು ನಿನ್ನೆಯಿಂದಲೇ ಬಂದ್ ಆಗಿವೆ. 

RBI Cancelled The Kapole Co-operative Bank Limited Licence
Image Credit: Thehindubusinessline

ಕಳೆದ ವಾರದಲ್ಲಿ ಮೂರು ಬ್ಯಾಂಕುಗಳ ಪರವಾನಗಿ ರದ್ದು
ಇನ್ನು RBI Septembar 21 ರಂದು ತಿರುವನಂತಪುರ (ಕೇರಳ) ಅನಂತಶಯನಂ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ (Anantashayaman Shakari Bank Limites) ಪರವಾನಗಿಯನ್ನು ರದ್ದುಗೊಳಿಸಿತ್ತು. ಕೇರಳದ ಸಹಕಾರಿ ಬ್ಯಾಂಕ್ ಪರನಾಗಿ ರದ್ದುಗೊಳಿಸಿದ ಬೆನ್ನಲ್ಲೇ Mallikarjuna Town Co-operative Bank Niamita (Maski, Karnataka) ಮತ್ತು National Cooperative Bank Limited (Bahraich, UP) ಬ್ಯಾಂಕುಗಳ ಪರವಾನಗಿಯನ್ನು ರದ್ದು ಮಾಡಿದೆ. ಕೆಳೆದ ವಾರ 3 ಸಹಕಾರಿ ಬ್ಯಾಂಕುಗಳ ಪರವಾನಗಿ ರದ್ದಾದ ಬಳಿಕ Septembar 25 ರಂದು Maharastra Cooperative ಬ್ಯಾಂಕ್ ಪವಾರವಾನಗಿಯನ್ನು RBI ರದ್ದು ಮಾಡಿದೆ.

ಸಡನ್ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI
ಕೇಂದ್ರ ಬ್ಯಾಂಕ್ ಇದೀಗ The Kapol Co-operative Bank Limited (Mumbai, Maharashtra) ಬ್ಯಾಂಕಿನ ಪರವಾನಗಿಯನ್ನು ರದ್ದು ಮಾಡಿದೆ. ಈ ಸಹಕಾರಿ ಬ್ಯಾಂಕ್ ನಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ Septembar 25 ರಂದು ಈ ಕ್ರಮ ಕೈಗೊಂಡಿದೆ. ಇನ್ನು ಪರವಾನಗಿ ರದ್ದಾದ ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಬ್ಯಾಂಕ್ ಗೆ ಸೂಚನೆ ನೀಡಿದೆ.

RBI Cancelled The Kapol Co-operative Bank Limited Licence
Image Credit: Bqprime

ಬ್ಯಾಂಕ್ ನ ಪರವಾನಗಿ ರದ್ದಾಗಲು ಕಾರಣವೇನು..?
ಬ್ಯಾಂಕ್ ನ ಪರವಾನಗಿ ರದ್ದಾದ ಬಳಿಕ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದಾಗಲಿ ಅಥವಾ ಗ್ರಾಹಕರು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ ಎಂದು RBI ಆದೇಶ ಹೊರಡಿಸಿದೆ.

Join Nadunudi News WhatsApp Group

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 56 ರ ಜೊತೆಗೆ ಸೆಕ್ಷನ್ 11 (1), ಸೆಕ್ಷನ್ 22 (3) (ಡಿ) ನ ನಿಬಂಧನೆಗಳ ಉಲ್ಲಂಘನೆಯಾಗಿರುವ ಕಾರಣ RBI ಈ ನಿರ್ಧಾರ ಕೈಗೊಂಡಿದೆ. ಹಾಗೆಯೆ ಪ್ರತಿ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಅಡಿಯಲ್ಲಿ ರೂ. 5 ಲಕ್ಷದವರೆಗೆ ಠೇವಣಿಗಳನ್ನು ಪಡೆಯಬಹುದು. ಇದಕ್ಕಿಂತ ಹೆಚ್ಚಿನ ಠೇವಣಿ ಮೊತ್ತವನ್ನು ಕ್ಲೈಮ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು RBI ಮಾಹಿತಿ ನೀಡಿದೆ.

Join Nadunudi News WhatsApp Group