Fact Check: ನೋಟಿನ ಮೇಲೆ ಗಾಂಧೀಜಿ ಬದಲಿದೆ ರಾಮನ ಫೋಟೋ ಬರುತ್ತಾ…? ಸ್ಪಷ್ಟನೆ ನೀಡಿದ RBI

ನೋಟಿನ ಮೇಲೆ ರಾಮನ ಫೋಟೋ ಬಂದಿರುವ ಬಗ್ಗೆ ಸ್ಪಷ್ಟನೆ ನೀಡಿದ RBI

RBI Clarification On God Ram Photo 500 Notes: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀ ರಾಮನ ಉದ್ಘಾಟನಾ ಸಮಾರಂಭ ನಡೆಯಲಿದ್ದು ಇಡೀ ವಿಶ್ವವೇ ಶ್ರೀ ರಾಮನ ಜಪವನ್ನು ಜಪಿಸುತ್ತಿದೆ . ಶ್ರೀರಾಮನ ಪ್ರಸ್ಥಿಸ್ಥಾಪನೆ ಜೊತೆಗೆ ಈಗ ಇನ್ನೊಂದು ಸುದ್ದಿ ವೈರಲ್ ಆಗಿದ್ದು, ಇನ್ನು ನೋಟುಗಳ ಮೇಲೆ ಗಾಂಧೀಜಿ ಯವರ ಬದಲಾಗಿ ಶ್ರೀರಾಮನ ಫೋಟೋವನ್ನು ಅಳವಡಿಸಲಾಗುವುದು ಎನ್ನಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಮನ ಚಿತ್ರವಿರುವ 500 ರೂ.ಗಳ ಹೊಸ ನೋಟುಗಳನ್ನು ಆರ್ಬಿಐ ಬಿಡುಗಡೆ ಮಾಡಲಿದೆ ಎಂಬ ಸಂದೇಶವೊಂದು ವೈರಲ್ ಆಗಿತ್ತು. ಅದರಲ್ಲಿ ಮಹಾತ್ಮ ಗಾಂಧಿಯವರ ಬದಲು ಭಗವಾನ್ ಶ್ರೀ ರಾಮನ ಚಿತ್ರವಿದೆ, ಹಾಗಾದ್ರೆ ಇನ್ನುಮುಂದೆ ನೋಟುಗಳಲ್ಲಿನ ಫೋಟೋ ಬದಲಾಗಲಿದೆಯೇ ಅನ್ನುವ ಪ್ರಶ್ನೆ ಮೂಡಿದ್ದು RBI ಅದಕ್ಕೆ ಉತ್ತರ ನೀಡಿದೆ 

RBI replacing Mahatma Gandhi with Lord Ram on Rs 500 notes
Image Credit: News 18

ನೋಟುಗಳಲ್ಲಿ ಶ್ರೀ ರಾಮನ ಫೋಟೋ ಅಳವಡಿಕೆ

ದೇಶದಲ್ಲೆಡೆ ರಾಮ ಮಂದಿರ ಉದ್ಘಾಟನೆ ಸುದ್ದಿ ಹರಿದಾಡುತ್ತಿದ್ದಂತೆ ಇನ್ನೊಂದೆಡೆ ಈ ನೋಟುಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಪ್ರಾರಂಭ ಆಗಿದೆ. ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದ ಮೊದಲು, ಹೊಸ ಸರಣಿಯ ನೋಟುಗಳಿಂದ ಮಹಾತ್ಮ ಗಾಂಧಿಯವರ ಚಿತ್ರವನ್ನು ತೆಗೆದುಹಾಕಲು ಮತ್ತು ಅದರ ಮೇಲೆ ಭಗವಾನ್ ಶ್ರೀ ರಾಮನ ಚಿತ್ರವನ್ನು ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ ಎಂಬ ಸುದ್ದಿಯ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ ಇದು ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ.

RBI Clarification On 500 Note
Image Credit: The Indian Express

500 ರೂಪಾಯಿ ನೋಟುಗಳ ಚಿತ್ರವನ್ನು ಎಡಿಟ್ ಮಾಡಲಾಗಿದೆ

Join Nadunudi News WhatsApp Group

ಭಗವಾನ್‌ ಶ್ರೀರಾಮನ ಚಿತ್ರದೊಂದಿಗೆ ವೈರಲ್ ಆಗುತ್ತಿರುವ 500 ರೂಪಾಯಿ ನೋಟುಗಳ ಚಿತ್ರವನ್ನು ಎಡಿಟ್ ಮಾಡಲಾಗಿದೆ ಇದು ನಕಲಿ ಎಂದು ಕಂಡುಬಂದಿದೆ. ಏಕೆಂದರೆ ಆರ್ಬಿಐ ವೆಬ್ಸೈಟ್ನಲ್ಲಿ ಬ್ಯಾಂಕ್ ನೋಟುಗಳಲ್ಲಿನ ಬದಲಾವಣೆಗಳ ಬಗ್ಗೆ ನಮಗೆ ಅಂತಹ ಯಾವುದೇ ಮಾಹಿತಿ ಕಂಡುಬಂದಿಲ್ಲ ಅಥವಾ ಯಾವುದೇ ಸುದ್ದಿ ವರದಿಯಾಗಿಲ್ಲ. ಹಾಗಾಗಿ ಇದು ಸುಳ್ಳು ಸುದ್ದಿ ಆಗಿದ್ದು ಅಂತಹ ನೋಟುಗಳು ನಿಮಗೆ ಸಿಕ್ಕರೆ ಅದು ನಕಲಿ ನೋಟುಗಳಾಗಿರುತ್ತದೆ ಎನ್ನುವುದನ್ನು ನೆನಪಿನಲ್ಲಿಡಿ.

Join Nadunudi News WhatsApp Group