100 Rs Note Ban: ದೇಶದಲ್ಲಿ ಬ್ಯಾನ್ ಆಗುತ್ತಾ 100 ರೂಪಾಯಿ ನೋಟುಗಳು…? ಎಲ್ಲಾ ಪ್ರಶ್ನೆಗೆ ಉತ್ತರಿಸಿದ RBI.

ದೇಶದಲ್ಲಿ ಬ್ಯಾನ್ ಆಗುತ್ತಾ 100 ರೂಪಾಯಿ ನೋಟುಗಳು...?

RBI Clarified About 100 Rs Note Ban: ಸದ್ಯ ದೇಶದಲ್ಲಿ 2000 ರೂ. ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಂಡಿದೆ. Reserve Bank Of India,  May 19 2023 ರಂದು 2,000 ರೂಪಾಯಿ ನೋಟುಗಳನ್ನು ರದ್ದುಮಾಡಿದೆ. ಇನ್ನು ಮೇ ನಿಂದ ಅಕ್ಟೋಬರ್ 9 ರ ವರೆಗೆ ಜನಸಾಮಾನ್ಯರಿಗೆ 2,000 ರೂಪಾಯಿ ನೋಟುಗಳ ವಿನಿಮಯ ಅಥವಾ ಠೇವಣಿಗೆ ಅನುಮತಿ ನೀಡಿತ್ತು.

October 10 ರಿಂದ ದೇಶದಲ್ಲಿ 2000 ರೂ. ನೋಟುಗಳಿಗೆ ಬೆಲೆ ಇಲ್ಲ. ಸದ್ಯ ದೇಶದಲ್ಲಿ 2000 ರೂಪಾಯಿ ನೋಟುಗಳು ಅಮಾನ್ಯಗೊಂಡ ನಂತರದ ದಿನದಿಂದ ನೋಟುಗಳ ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಸದ್ಯ RBI 100 ರೂ. ನೋಟುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ವೈರಲ್ ಆಗುತ್ತಿದೆ. ಈ ವೈರಲ್ ಮಾಹಿತಿ ಜನರ ನಿದ್ದೆಯನ್ನು ಕೆಡಿಸುತ್ತಿದೆ.

RBI Clarified About 100 Rs Note Ban
Image Credit: Oneindia

ದೇಶದಲ್ಲಿ ಬ್ಯಾನ್ ಆಗುತ್ತಾ 100 ರೂಪಾಯಿ ನೋಟುಗಳು…?
ಈ ಹಿಂದೆ ದೇಶದಲ್ಲಿ 2000 ರೂ. ನೋಟಿನ ಬ್ಯಾನ್ ನ ಬೆನ್ನಲ್ಲೇ 500 ರೂ. ನೋಟಿನ ಬ್ಯಾನ್ ಬಗ್ಗೆ ಸುದ್ದಿ ವೈರಲ್ ಆಗುತ್ತಿತ್ತು. ಈ ಬಗ್ಗೆ RBI ಸಾಕಷ್ಟು ಬರಿ ಸ್ಪಷ್ಟನೆ ನೀಡಿದೆ. 500 ರೂ. ನೋಟಿನ ರದ್ದಿತಿಯ ಬಗ್ಗೆ ಸುದ್ದಿಗಳು ವೈರಲ್ ಆಗುವುದು ಕಡಿಮೆಯಾಗುತ್ತಿದ್ದಂತೆ ಇಡಿದ ಸೋಶಿಯಲ್ ಮೀಡಿಯಾದಲ್ಲಿ ಹಳೇ 100 ರೂ. ನೋಟಿನ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

ಸದ್ಯ ಹಳೆಯ 100 ರೂಪಾಯಿ ನೋಟಿನ ಬಗ್ಗೆ ಜನರಲ್ಲಿ ಚರ್ಚೆ ಶುರುವಾಗಿದೆ. ಹೌದು ಹಳೆಯ 100 ರೂಪಾಯಿ ನೋಟು ಅಮಾನ್ಯವಾಗುತ್ತದೆ ಎನ್ನುವ ಬಗ್ಗೆ ವಾಟ್ಸಾಪ್ ನಲ್ಲಿ ಸುದ್ದಿ ಹರಿದಾಡುತ್ತಿದೆ. ಆದಷ್ಟು ಬೇಗ ನಿಮ್ಮ ಬಳಿ ಇರುವ ಈ 100 ರೂಪಾಯಿ ನೋಟನ್ನು ಖರ್ಚು ಮಾಡುವುದು ಅಥವಾ ಬ್ಯಾಂಕ್ ಗೆ ಹಿಂದಿರುಗಿಸುದು ಉತ್ತಮ ಎನ್ನುವ ಬಗ್ಗೆ ಮಾಹಿತಿ ವೈರಲ್ ಆಗುತ್ತಿದೆ. ಆದರೆ ದೇಶದಲ್ಲಿ 100 ರೂ. ಹಳೆಯ ನೋಟುಗಳನ್ನು ಅಮಾನತ್ತುಗೊಳಿಸುವುದರ ಬಗ್ಗೆ RBI ಹೇಳುವುದೇನು..? ಎನ್ನುವ ಬಗ್ಗೆ ವಿವರ ಇಲ್ಲಿದೆ.

Old 100 Rs Note Ban
Image Credit: Zeebiz

ಎಲ್ಲಾ ಪ್ರಶ್ನೆಗೆ ಉತ್ತರಿಸಿದ RBI
100 ರೂಪಾಯಿಯ ಹಳೆಯ ನೋಟು ಅಮಾನ್ಯವಾಗಿದ್ದು ಮಾರ್ಚ್ 31 ರಂದು 100 ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನಾಂಕವಾಗಿದೆ. ಹಾಗಾಗಿ ಬ್ಯಾಂಕ್‌ ಗಳಲ್ಲಿ ನೀವು ನಿಮ್ಮ 100 ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಈ ನೋಟುಗಳು ಏಪ್ರಿಲ್ 1 ರಿಂದ ಮಾನ್ಯವಾಗಿರುವುದಿಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

ಆದರೆ ಇದೊಂದು ಸುಳ್ಳು ಸುದ್ದಿ. ಹಳೆಯ 100 ರೂಪಾಯಿ ನೋಟನ್ನು ಬ್ಯಾನ್ ಮಾಡುವ ಬಗ್ಗೆ RBI ಯಾವುದೇ ಘೋಷಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು 100 ರೂ. ನೋಟುಗಳನ್ನು ಬ್ಯಾನ್ ಮಾಡುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಇಂತಹ ಸುಳ್ಳು ಸುದ್ದಿಗಳಿಗೆ ಗಮನ ಹರಿಸಬೇಡಿ ಎಂದು RBI ಜನರಿಗೆ ಎಚ್ಚರಿಕೆ ನೀಡಿದೆ.

Old 100 Rs Note Ban Fact Check
Image Credit: India TV News

Join Nadunudi News WhatsApp Group