Floating Bond: ಪ್ರತಿ ತಿಂಗಳು ಸಿಗಲಿದೆ 33 ಸಾವಿರ ರೂ ಪಿಂಚಣಿ, RBI ನಿಂದ ಇನ್ನೊಂದು ಪಿಂಚಣಿ ಯೋಜನೆ ಜಾರಿಗೆ.

RBI ನಿಂದ ಇನ್ನೊಂದು ಪಿಂಚಣಿ ಯೋಜನೆ ಜಾರಿಗೆ.

RBI Floating Bond Scheme: ಈಗಿನ ಕಾಲದಲ್ಲಿ ಜನರು ಹೂಡಿಕೆಯ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಹೌದು ತಮ್ಮ ಮುಂದಿನ ಭವಿಷ್ಯದ ಉದ್ದೇಶದಿಂದ ಜನರು ಹೂಡಿಕೆ ಮಾಡಲು ಬಯಸುತ್ತಿದ್ದು ಸದ್ಯ ಹೂಡಿಕೆ ಮಾಡುವ ಜನರಿಗೆ ಬ್ಯಾಂಕ್ ಮತ್ತು ಅಂಚೆ ಕಚೇರಿಗಳು ಸಾಕಷ್ಟು ಸೇವೆಯನ್ನ ಒದಗಿಸಿಕೊಂಡು ಬಂದಿದೆ ಎಂದು ಹೇಳಬಹುದು.

ಇನ್ನು ಜನರು ತಮ್ಮ ವೃದ್ದಾಪ್ಯದ ಸಮಯದಲ್ಲಿ ಹೆಚ್ಚು ಹೆಚ್ಚು ಪಿಂಚಣಿ ಹಣ ಸಿಗಲಿ ಅನ್ನುವ ಕಾರಣಕ್ಕೆ ವಿವಿಧ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ. ಇದರ ನಡುವೆ ಈಗ ಜನರಿಗೆ ಉತ್ತಮ ಪಿಂಚಣಿ ಯೋಜನೆಯೊಂದನ್ನ RBI ಪರಿಚಯಿಸಿದ್ದು ಜನರು ಈ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 33 ಸಾವಿರ ರೂಪಾಯಿಯ ತನಕ ಪಿಂಚಣಿ ಹಾನ ಪಡೆದುಕೊಳ್ಳಬಹುದು.

RBI Floating bond pension scheme 2023
Image Credit: Informalnewz

ದೇಶದಲ್ಲಿ ಜಾರಿಯಲ್ಲಿ ಇದೆ ಹಲವು ಪಿಂಚಣಿ ಯೋಜನೆ
ಹೌದು ದೇಶದಲ್ಲಿ ಈಗಾಗಲೇ ಕೇಂದ್ರ ಸರ್ಕಾರ, ಖಾಸಗಿ ಸಂಸ್ಥೆ ಮತ್ತು ಮತ್ತು ವಿವಿಧ ಬ್ಯಾಂಕುಗಳಲ್ಲಿ ಸಾಕಷ್ಟು ಪಿಂಚಣಿ ಯೋಜನೆ ಜಾರಿಯಲ್ಲಿ ಇರುವುದನ್ನ ನಾವು ಗಮನಿಸಬಹುದು. ಸದ್ಯ ಈಗ ಇನ್ನೊಂದು ಹೊಸ ಪಿಂಚಣಿ ಯೋಜನೆಯನ್ನ ಈಗ RBI ಪರಿಚಯಿಸಿದ್ದು ಈ ಪಿಂಚಣಿ ಯೋಜನೆ ಜನರಿಗೆ ಸಾಕಷ್ಟು ಲಾಭವನ್ನ ತಂದುಕೊಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

RBI ಪ್ಲೋಟಿಂಗ್ ಬಾಂಡ್ ಸ್ಕೀಮ್ RBI Floating Bond Scheme
ಹೌದು RBI ನ ಪ್ಲೋಟಿಂಗ್ ಬಾಂಡ್ ಗಳು (RBI Floating Bond) ಜನರಿಗೆ ಉತ್ತಮಾವಾದ ಪಿಂಚಣಿ ನೀಡುತ್ತದೆ ಎಂದು ಹೇಳಬಹುದು. ಅಟಲ್ ಪೆನ್ಷನ್ ಮತ್ತು ಸರಳ್ ಪೆನ್ಷನ್ ಸ್ಕೀಮ್ ಗಳಿಗೆ ಹೋಲಿಕೆ ಮಾಡಿದರೆ RBI ಪ್ಲೋಟಿಂಗ್ ಬಾಂಡ್ ಸ್ಕೀಮ್ ಜನರ ಹಣಕ್ಕೆ ಉತ್ತಮವಾದ ಬಡ್ಡಿಯಲ್ಲಿ ನೀಡುತ್ತದೆ. RBI ಪ್ಲೋಟಿಂಗ್ ಬಾಂಡ್ ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿದರವನ್ನ ಪರಿಷ್ಕರಣೆ ಮಾಡುತ್ತದೆ. ಈ ಪ್ಲೋಟಿಂಗ್ ಬಾಂಡ್ ಸ್ಕೀಮ್ ನಲ್ಲಿ ಜನರಿಗೆ ತೆರಿಗೆ ತೆರಿಗೆ ಲಾಭ ಕೂಡ ಇದ್ದು ನೀವು ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತದ ಪಿಂಚಣಿ ಹಣವನ್ನ ಪಡೆಯಬಹುದು.

RBI Floating Bond Scheme
Image Credit: Goodreturns

33 ಸಾವಿರ ರೂಪಿಯಾನ್ ಪಿಂಚಣಿ ಪ್ರತಿ ತಿಂಗಳು
RBI ಪ್ಲೋಟಿಂಗ್ ಬಾಂಡ್ ಸ್ಕೀಮ್ ನಲ್ಲಿ ಪ್ರತಿ ತಿಂಗಳು 33 ಸಾವಿರ ರೂ ಪಿಂಚಣಿ ಹಣ ಪಡೆಯಬಹುದು. ಈ ಸ್ಕೀಮ್ ನಲ್ಲಿ ನಿಮ್ಮ ಹಣಕ್ಕೆ ಶೇಕಡಾ 7 ರಷ್ಟು ಬಡ್ಡಿಯನ್ನು ಕೊಡಲಾಗುತ್ತದೆ. ಈ ಬಾಂಡ್ ನಲ್ಲಿ ವ್ಯಕ್ತಿ 54 ಲಕ್ಷ ರೂ ಹೂಡಿಕೆ ಮಾಡಿದರೆ ಅವಧಿ ಮುಕ್ತಾಯದ ನಂತರ ಅರ್ಧ ವಾರ್ಷಿಕವಾಗಿ 2 ಲಕ್ಷ ರೂ ಲಾಭವನ್ನ ಪಡೆಯುತ್ತಾನೆ ಎಂದು ಹೇಳಬಹುದು. ಇನ್ನು ಲೆಕ್ಕಾಚಾರದ ಪ್ರಕಾರ ಈ ಯೋಜನೆಯಲ್ಲಿ ವ್ಯಕ್ತಿಯೊಬ್ಬ ಇಷ್ಟು ಹಣವನ್ನ ಹೂಡಿಕೆ ಮಾಡಿದರೆ ವೃದ್ದಾಪ್ಯದ ಸಮಯದಲ್ಲಿ ಪ್ರತಿ ತಿಂಗಳು 33 ಸಾವಿರ ರೂ ಪಿಂಚಣಿ ಹಣ ಪಡೆದುಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group