Loan EMI: ಮನೆಸಾಲ ಮಾಡುವವರಿಗೆ RBI ನಿಂದ ಹೊಸ ರೂಲ್ಸ್ , 50 ಲಕ್ಷ ರೂ ಸಾಲ ಮಾಡಿ 30 ಲಕ್ಷ ರೂ ಉಳಿಸಿ.

ಈ ವಿಧಾನದ ಮೂಲಕ ಗೃಹಸಾಲ ಮಾಡಿದರೆ ಕಡಿಮೆ ಬಡ್ಡಿ ಪಾವತಿಸಬಹುದು.

Loan EMI Rules: ದೇಶದ ಪ್ರತಿಷ್ಠಿತ ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ಸೌಲಭ್ಯವನ್ನು ನೀಡುತ್ತಿವೆ. ಸದ್ಯ Reserve Bank Of India ಇತ್ತೀಚಿಗೆ ಗ್ರಾಹಕರಿಗೆ ಅನುಕೂಲವಾಗಲು ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. RBI ನಿಯಮಾನುಸಾರ ಬ್ಯಾಂಕುಗಳು ಗ್ರಾಹಕರ ಜೊತೆ ವ್ಯವಹಾರ ಮಾಡಬೇಕಿದೆ. ಸಾಮಾನ್ಯವಾಗಿ Bank ನಲ್ಲಿ Loan ಅನ್ನು ಹೆಚ್ಚಿನ ಜನರು ಪಡೆಯುತ್ತಾರೆ. ಇತ್ತೀಚಿಗೆ RBI ಸಾಲಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ.

RBI launched another scheme for borrowers
Image Credit: Original Source

ಸಾಲದ ನಿಯಮಗಳಲ್ಲಿ RBI ಮಹತ್ವದ ಬದಲಾವಣೆ
ಈ ಹಿಂದೆ ಬ್ಯಾಂಕ್ ಸಾಲಗಾರರಿಗೆ ವಿಧಿಸುವ ದಂಡದಲ್ಲಿ ಆರ್ ಬಿಐ ಹೊಸ ನಿಯಮವನ್ನು ಜಾರಿಗೊಳಿಸಿತ್ತು. Reserve Bank Of India ಸಾಲದ ಖಾತೆಗೆ ಸಂಬಂಧಿಸಿದ ದಂಡವನ್ನು ಹೆಚ್ಚು ವಿಧಿಸಬಾರದು ಎಂದು ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು ಎನ್ನುವ ಮಾರ್ಗಸೂಚಿಯ್ನು ಇತ್ತೀಚಿಗೆ ಹೊರಡಿಸಿತ್ತು.

RBI ನ ಈ ಎಲ್ಲ ಹೊಸ ನಿಯಮಗಳು ದೇಶದ ಸಾಲಗಲಾರರಿಗೆ ಸಾಲದ ಹೊರೆಯನ್ನು ಕಡಿಮೆ ಮಾಡಿದೆ. ಇನ್ನು RBI ನ ಹೊಸ ನಿಯಮದಿಂದಾಗಿ ಸಾಲಗಾರರಿಗೆ ಹೆಚ್ಚಿನ ಉಳಿತಾಯ ಆಗಲಿದೆ. ಸಾಲವನ್ನು ಪಡೆಯುವಾಗ RBI ನಿಯಮವನ್ನು ಅನುಸರಿಸಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇನ್ನು ಅನೇಕ ಬ್ಯಾಂಕುಗಳು ತನ್ನ EMI ಹೆಚ್ಚಿಸುವ ಬದಲಾಗಿ ಸಾಲದ ಅವಧಿಯನ್ನು ವಿಸ್ತರಿಸಿದೆ. ಸಾಲದ ಅವಧಿ ಹೆಚ್ಚಾದಂತೆ ಮಾಸಿಕ ಪಾವತಿ ಹೆಚ್ಚಾಗುತ್ತದೆ.

RBI has introduced another new rule regarding bank loans
Image Credit: theprint

50 ಲಕ್ಷ ಸಾಲದ ಬಡ್ಡಿಯಲ್ಲಿ 30 ಲಕ್ಷ ಉಳಿಸಿ
*ನೀವು ಶೇ. 7 ರ ಬಡ್ಡಿದರದಲ್ಲಿ 20 ವರ್ಷಗಳ ವರೆಗೆ ಗೃಹ ಸಾಲವನ್ನು ಪಡೆದರೆ EMI ರೂ, 38765 ಪಾವತಿಸಬೇಕಾಗುತ್ತದೆ. ನೀವು ಬ್ಯಾಂಕುಗಳಿಗೆ 43.07 ಲಕ್ಷ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

*ಇನ್ನು ಮೂರು ವರ್ಷಗಳಲ್ಲಿ 10.12 ಲಕ್ಷ ರೂ.ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಉಳಿದ 17 ವರ್ಷಕ್ಕೆ 46.16 ಲಕ್ಷ ಬಡ್ಡಿ ಬಾಕಿ ಇರುತ್ತದೆ.

Join Nadunudi News WhatsApp Group

*ಇನ್ನು ಮೂರು ವರ್ಷಗಳ ನಂತರ ಬಡ್ಡಿದರವು ಶೇ. 9.25 ಕ್ಕೆ ಏರಿದರೆ ನೀವು ಸಾಲದ ಅವಧಿಯನ್ನ ಹೆಚ್ಚಿಸದೆ EMI ಹೆಚ್ಚಿಸುತ್ತೀರಿ. ಆದ್ದರಿಂದ ನಿಮ್ಮ ಸಾಲದ ಕಂತು 44,978 ಆಗಿರುತ್ತದೆ. 45.58 ಲಕ್ಷಗಳನ್ನು 17 ವರ್ಷಗಳಲ್ಲಿ ಪಾವತಿಸಬೇಕು. ಅಂದರೆ 20 ವರ್ಷಗಳಲ್ಲಿ ಒಟ್ಟು 55.7 ಲಕ್ಷ ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ.

*ಈ ರೀತಿ ಮಾಡಿದರೆ ಸಾಲದ ಅವಧಿಯು 26 ವರ್ಷಗಳಿಗಿಂತ ಹೆಚ್ಚಾಗುತ್ತದೆ. ಮೂರು ವರ್ಷಗಳ ಬಡ್ಡಿಯನ್ನು ಪಾವತಿಸಿದ ನಂತರ ನೀವು ಒಟ್ಟು ರೂ. 78.4 ಲಕ್ಷ ಬಡ್ಡಿ ಪಾವತಿಸಬೇಕಾಗುತ್ತದೆ.

*EMI ಹೆಚ್ಚಿಸದೆ ಸಾಲದ ಅವಧಿಯನ್ನು ವಿಸ್ತರಿಸಿದರೆ 50 ಲಕ್ಷ ಸಾಲಕ್ಕೆ 88.52 ಲಕ್ಷ ಸಾಲವನ್ನು ಕಟ್ಟಬೇಕಾಗುತ್ತದೆ. ಒಂದು ವೇಳೆ ನೀವು EMI ಹೆಚ್ಚಿಸಿದರೆ 55.7 ಲಕ್ಷ ಬಡ್ಡಿಯನ್ನು ಕಟ್ಟುವ ಮೂಲಕ 33 ಲಕ್ಷ ರೂ. ಗಳನ್ನೂ ಉಳಿಸಬಹುದಾಗಿದೆ. ನಿಮ್ಮ ಸಾಲದ ಬಡ್ಡಿ ನೀವು ಕಟ್ಟುವ EMI ಮೇಲೆ ನಿರ್ಧಾರ ಆಗುತ್ತದೆ. ಬ್ಯಾಂಕುಗಳಿಗೆ ಕಡಿಮೆ ಬಡ್ಡಿ ಪಾವತಿ ಮಾಡಬೇಕು ಅಂದರೆ ನೀವು ಹೆಚ್ಚು EMI ಪಾವತಿ ಮಾಡುವುದು ಉತ್ತಮ.

Join Nadunudi News WhatsApp Group