Loan Due: ಬ್ಯಾಂಕ್ ಸಾಲ ಕಟ್ಟಲು ಕಷ್ಟಪಡುತ್ತಿರುವವರಿಗೆ ಹೊಸ ನಿಯಮ, ರಾತ್ರೋರಾತ್ರಿ RBI ದೇಶ.

ಬ್ಯಾಂಕ್ ಸಾಲ ಮಾಡುವ ಎಲ್ಲರಿಗೂ ಹೊಸ ನಿಯಮ ಹೊರಡಿಸಿದ RBI.

RBI New Order Loan Repayment: RBI ಈಗಾಗಲೇ ಸಾಲದ ದಂಡದ ನಿಯಮ ಮತ್ತು ಸಾಲದ ಮರುಪಾವತಿಯ ನಿಯಮದಲ್ಲಿ ಬದಲಾವಣೆಯನ್ನು ತಂದಿದೆ. ಸಾಲಗಾರರಿಗೆ ಹೆಚ್ಚಿನ ಬಡ್ಡಿಯನ್ನು ದಂಡದ ರೂಪದಲ್ಲಿ ವಿಧಿಸಬಾರದು ಎಂದು RBI ಘೋಷಿಸಿತ್ತು. ದಂಡದ ನಿಯಮದ ಬದಲಾವಣೆಯ ಜೊತೆಗೆ ಸಾಲ ಮರುಪಾವತಿಯ ಬಗ್ಗೆ ಕೂಡ ಮಹತ್ವದ ಆದೇಶವನ್ನು ಹೊರಡಿಸಿತ್ತು. ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು.

ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ. RBI ಆದೇಶದ ಪ್ರಕಾರ ಬ್ಯಾಂಕುಗಳು ಗ್ರಾಹಕರೊಂದಿಗೆ ವಹಿವಾಟನ್ನು ನಡೆಸುತ್ತಿವೆ. Bank ನಲ್ಲಿ ಸಾಲ ಪಡೆದವರು ಇನ್ನುಮುಂದೆ ಹೆಚ್ಚು ಚಿಂತಿಸುವ ಅಗತ್ಯ ಇರುವುದಿಲ್ಲ.

RBI latest update
Image Credit: Informalnewz

ಸಾಲಗಾರರಿಗೆ RBI ಆದೇಶ
RBI ಸಾಲಗಾರರಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುತ್ತಿದೆ. ಇನ್ನು ಸಾಲಗಾರರು RBI ನ ಯಾವುದೇ ಸೌಲಭ್ಯವನ್ನು ಕೂಡ ದುರುಪಯೋಗ ಪಡಿಸಿಕೊಳ್ಳುವಂತಿಲ್ಲ. ಬ್ಯಾಂಕ್ ನಲ್ಲಿ ಸಾಲ ಪಡೆದ ನಂತರ ಕಾಲ ಕಾಲಕ್ಕೆ ಸಾಲದ ಮರುಪಾವತಿ ಕಡ್ಡಾಯವಾಗಿದೆ. ಸಾಲಗಾರರು ಸಾಲ ಮರುಪಾವತಿಯಲ್ಲಿ ಯಾವುದೇ ರೀತಿಯ ಮೋಸವನ್ನು ಕೂಡ ಮಾಡಬಾರದು. RBI ಸಾಲ ಮರುಪಾವತಿ ಮಾಡದೆ ಇರುವವರಿಗೆ ಹೊಸ ಆದೇಶ ಹೊರಡಿಸಿದೆ.

ನಿಗದಿತ ಸಮಯದೊಳಗೆ ಸಾಲದ ಮರುಪಾವತಿ ಅಗತ್ಯ
ಉದ್ದೇಶಪೂರ್ವಕವಾಗಿ ಸಾಲವನ್ನು ಮರುಪಾವತಿ ಮಾಡದ ಯಾವುದೇ ಸಾಲದಾತರನ್ನು ಪ್ರತ್ಯೇಕ ವರ್ಗಕ್ಕೆ ವಿಂಗಡಿಸಲಾಗುವುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಸಾಲಗಾರರ ವಿರುದ್ಧ ಯಾವುದೇ ತಾರತಮ್ಯ ಮಾಡಬಾರದು ಎನ್ನುವ ಉದ್ದೇಶದಿಂದ RBI ಈ ಸುತ್ತೋಲೆ ಹೊರಡಿಸಿದೆ.

Loan Repayment
Image Credit: Other Source

ಸಾಲಗಾರನು ನಿಗದಿತ ಸಮಯದೊಳಗೆ ಉದ್ದೇಶಪೂರ್ವಕವಾಗಿ ಸಾಲವನ್ನು ಮರುಪಾವತಿ ಮಾಡದಿದ್ದರೆ ಅಂತವರ ಹೆಸರನ್ನು ಡಿಫಾಲ್ಟರ್ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಡಿಫಾಲ್ಟರ್ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಸಾಲಗಾರನು ಬ್ಯಾಂಕ್‌ ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ. ಸಾಲಗಾರನು ಒಪ್ಪಂದದ ಮೊತ್ತವನ್ನು ಸಹ ಪಾವತಿಸಬೇಕಾಗುತ್ತದೆ.

Join Nadunudi News WhatsApp Group

ಡಿಫಾಲ್ಟರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರು ಕೂಡ ನೀವು ಸಾಲವನ್ನು ಪಡೆಯಬಹುದು
ನೀವು ಉದ್ದೇಶಪೂರ್ವಕವಾಗಿ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡದಿದ್ದರೂ ಸಹ, ನೀವು ಇನ್ನೂ ಹೊಸ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ Reserve Bank Of India ಮಾರ್ಗಸೂಚಿ ಹೊರಡಿಸಿದೆ. ಬ್ಯಾಂಕ್‌ ಗಳು ಅಂತಹ ಸಾಲಗಾರರನ್ನು ಗುರುತಿಸಬೇಕು ಮತ್ತು ಅವರೊಂದಿಗೆ ಸೆಟಲ್‌ ಮೆಂಟ್ ಮಾಡಬೇಕು ಎಂದು RBI ಹೇಳಿದೆ.

RBI New Order Loan Repayment
Image Credit: Informalnewz

ಈ ಇತ್ಯರ್ಥದ 12 ತಿಂಗಳ ನಂತರ ಬ್ಯಾಂಕ್‌ ಗಳು ಸಾಲಗಾರರಿಗೆ ಸಾಲವನ್ನು ನೀಡಬಹುದು. ಆದಾಗ್ಯೂ, ಬ್ಯಾಂಕ್ ಮಂಡಳಿಯು ಬಯಸಿದಲ್ಲಿ, ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಬಹುದು. ನೀವು ಡಿಫಾಲ್ಟರ್ ಆಗುವುದನ್ನು ತಪ್ಪಿಸಲು RBI ‘ಮೊರಟೋರಿಯಂ’ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಅಡಿಯಲ್ಲಿ ಬ್ಯಾಂಕ್ ನಿಮ್ಮನ್ನು ಸ್ವಲ್ಪ ಸಮಯದವರೆಗೆ ಸುಸ್ತಿದಾರರ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಾಗುತ್ತದೆ.

Join Nadunudi News WhatsApp Group