Fixed Deposit: FD ಯಲ್ಲಿ ಹೂಡಿಕೆ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್, ಹೊಸ ರೂಲ್ಸ್ ಜಾರಿಗೆ ತಂದ RBI

FD ಯಲ್ಲಿ ಹೂಡಿಕೆ ಮಾಡಿದವರಿಗೆ RBI ಹೊಸ ನಿಯಮ.

RBI New Rule For Fixed Deposit: ದೇಶದ ಬ್ಯಾಂಕ್ ಗಳು ಗ್ರಾಹಕರಿಗೆ Fixed Deposit ಖಾತೆಯನ್ನು ತೆರೆಯಲು ಅವಕಾಶವನ್ನು ನೀಡುತ್ತದೆ. FD ಯಲ್ಲಿ ಹೂಡಿಕೆ ಮಾಡುವುದರಿಂದ ಜನರು ಹೆಚ್ಚಿನ ಲಾಭವನ್ನು ಪಡೆಯಬಹುದು. FD ಯಲ್ಲಿನ ಹೂಡಿಕೆಯು ಅಪಾಯಮುಕ್ತವಾಗಿದ್ದು, ಜನರು ಹೆಚ್ಚಿನ ಲಾಭವನ್ನು ಗಳಿಸಬಹುದು.

ಸದ್ಯ ಬ್ಯಾಂಕ್ ನಲ್ಲಿ FD ಇಟ್ಟವರಿಗೆ RBI ಹೊಸ ನಿಯಮವನ್ನು ಪರಿಚಯಿಸಿದೆ. RBI ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು ಬ್ಯಾಂಕ್ ನಲ್ಲಿ FD ಖಾತೆ ಹೊಂದಿರುವವರು ಈ ನಿಯಮವನ್ನು ತಿಳಿಯುವುದು ಅಗತ್ಯ. ಸದ್ಯ FD ಖಾತೆ ಇದ್ದವರಿಗೆ RBI ಹೊರಡಿಸಿರುವ ಹೊಸ ನಿಯಮ ಯಾವುದು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

FD Rules Update
Image Credit: Rightsofemployees

FD ಯಲ್ಲಿ ಹೂಡಿಕೆ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್
ಈ ಹಿಂದೆ FD ನಿಯಮಗಳು ಅಕಾಲಿಕ ಪಾವತಿ ಆಯ್ಕೆಯಿಲ್ಲದ ಟರ್ಮ್ ಡೆಪಾಸಿಟ್ ಗಳನ್ನೂ ನೀಡುವ ಸ್ವಾತಂತ್ರ್ಯವನ್ನು ಬ್ಯಾಂಕ್ ಗಳು ಹೊಂದಿರಬೇಕೆಂದಿತ್ತು. 15 ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಡೆಪಾಸಿಟ್ ಗಳಿಂದ ಎಲ್ಲ ಅವಧಿಯ ಡೆಪಾಸಿಟ್ ಗಳನ್ನೂ ಅಕಾಲಿಕವಾಗಿ ವಿತ್ ಡ್ರೌ ಸೌಲಭ್ಯ ಹೊಂದಿರುವ ನಿಯಮವಿತ್ತು. ಸದ್ಯ RBI ಈ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. FD ಹಣದ ವಿಥ್ಡ್ರಾ ಮತ್ತು ಹೂಡಿಕೆಯ ನಿಯಮದಲ್ಲಿ ಈಗ RBI ದೊಡ್ಡ ಬದಲಾವಣೆಯನ್ನ ಜಾರಿಗೆ ತಂದಿದ್ದು ಇದು FD ಹೂಡಿಕೆ ಮಾಡುವವರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

ಹೊಸ ರೂಲ್ಸ್ ಜಾರಿಗೆ ತಂದ RBI
ಬ್ಯಾಂಕುಗಳು ಎರಡು ರೀತಿಯ ಅವಧಿ ಅಥವಾ ಸ್ಥಿರ ಠೇವಣಿಗಳನ್ನು ಹೊಂದಿವೆ. ಅವುಗಳಲ್ಲಿ ಒಂದು Callable ಇನ್ನೊಂದು Non -Callable. ನೀವು Callable ಠೇವಣಿಗಳ ಮೇಲೆ ಅಕಾಲಿಕವಾಗಿ ಎಫ್‌ ಡಿ ಹಿಂಪಡೆಯಬಹುದು. ಆದರೆ Non -Callable ಠೇವಣಿಗಳಲ್ಲಿ ಹಿಂಪಡೆಯುವ ಆಯ್ಕೆ ಹೊಂದಿರುವುದಿಲ್ಲ.

RBI New Rule For Fixed Deposit
Image Credit: The Quint

ಇದೀಗ RBI ಹೊಸ ನಿಯಮದ ಪ್ರಕಾರ, Non -Callable Fixed Deposit ಗಳನ್ನು ನೀಡುವ ಕನಿಷ್ಠ ಮೊತ್ತವನ್ನು ಒಂದು ಕೋಟಿ ರೂ. ಹೆಚ್ಚಿಸಲು RBI ನಿರ್ಧರಿಸಿದೆ. Non -Callable TD ಗಳನ್ನೂ ನೀಡುವ ಕನಿಷ್ಠ ಮೊತ್ತವನ್ನು 15 ಲಕ್ಷ ರೂ. ನಿಂದ ಒಂದು ಕೋಟಿ ರೂ. ಗೆ ಹೆಚ್ಚಿಸುವ ಬಗ್ಗೆ RBI ನಿರ್ಧರಿಸಿದೆ. ಅಂದರೆ, ಒಂದು ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಡೆಪಾಸಿಟ್ ಗಳು ಅಕಾಲಿಕ ವಿಥ್ ಡ್ರಾ ಸೌಲಭ್ಯ ಹೊಂದಿರುತ್ತದೆ ಎಂದು RBI ಆದೇಶ ಹೊರಡಿಸಿದೆ. ಈ ಬಗ್ಗೆ RBI October 26 ರಂದು ಅಧಿಕೃತ ಅಧಿಸೂಚನೆ ಹೂರಡಿಸಿದೆ.

Join Nadunudi News WhatsApp Group

Join Nadunudi News WhatsApp Group