RBI Loan Rule: ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಹೊಸ ರೂಲ್ಸ್, EMI ಮಾಡುವ ಮುನ್ನ ನಿಯಮ ತಿಳಿದುಕೊಳ್ಳಿ.

ಬ್ಯಾಂಕ್ ನೀಡುವ ಅಸುರಕ್ಷಿತ ಸಾಲಕ್ಕೆ ಸಂಬಂಧಿಸಿದಂತೆ RBI ಮಹತ್ವದ ನಿರ್ಧಾರ

RBI New Rule For Unsecured Loan: ಹಣಕಾಸಿನ ಅಗತ್ಯಕ್ಕೆ ಸಾಲದ ಮೊರೆ ಹೋಗುವುದು ಸಾಮಾನ್ಯ. ಹೆಚ್ಚಾಗಿ ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು Unsecured Loan ಗಳಾದ ವೈವೈಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ (Credit Card) ಸಾಲಗಳನ್ನು ಪಡೆಯುವ ಜನರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಅಸುರಕ್ಷಿತ ಸಾಲಗಳು ನೀಡುವುದರಿಂದ ಮುಂದೆ ಎದುರಾಗಲಿರುವ ಸಮಸ್ಯೆಯನ್ನು ಬ್ಯಾಂಕ್ ಎದುರಿಸಬೇಕಾಗುತ್ತದೆ.

ಇದರಿಂದ ಬ್ಯಾಂಕ್ ಗೆ ಹೆಚ್ಚಿನ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. RBI ಬ್ಯಾಂಕ್ ಗಳಿಗೆ ಸಾಲಕ್ಕೆ ಸಂಬಂಧಿಸಿದಂತೆ ಹೊಸ ಹೊಸ ನಿಯಮವನ್ನು ವಿದಿಸುತ್ತಿದ್ದಂತೆ, ಬ್ಯಾಂಕ್ ಗಳು RBI ನ ಪ್ರತಿ ನಿಯಮವನ್ನು ತನ್ನ ಸಾಲದ ನಿಯಮದಲ್ಲಿ ಅಳವಡಿಸಿಕೊಳ್ಳುತ್ತಿದೆ. ಸದ್ಯ RBI ಬ್ಯಾಂಕ್ ನೀಡುವ ಅಸುರಕ್ಷಿತ ಸಾಲಕ್ಕೆ ಸಂಬಂಧಿತ ಮಹತ್ವದ ನಿರ್ಧಾರ ಕೈಗೊಂಡಿದೆ. RBI ಹೊಸ ನಿಯಮದ ಅನುಸಾರ ಇನ್ನುಮುಂದೆ ಬ್ಯಾಂಕ್ ನಲ್ಲಿ ಅಸುರಕ್ಷಿತ ಸಾಲವನ್ನು ಪಡೆಯಬೇಕಿದೆ.

RBI New Rule For Unsecured Loan
Image Credit: Informal News

ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಇನ್ನೊಂದು ಘೋಷಣೆ
RBI ಕಳೆದ ವಾರದಲ್ಲಿ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಯಾಂಕ್‌ ಗಳು ಮತ್ತು NBFC ಗಳು ತಮ್ಮ ಅಸುರಕ್ಷಿತ ಸಾಲ ಪೋರ್ಟ್‌ ಫೋಲಿಯೊಗಳಿಗೆ ಹೆಚ್ಚಿನ ಬಂಡವಾಳವನ್ನು ಮೀಸಲಿಡಬೇಕು ಎಂದು RBI ಘೋಷಿಸಿದೆ. ಈ ಅಗತ್ಯವು ಹಿಂದಿನ ಆದೇಶಕ್ಕಿಂತ 25% ಹೆಚ್ಚಾಗಿದೆ.

ಉದಾಹರಣೆಗೆ, ಬ್ಯಾಂಕ್ ರೂ. 5 ಲಕ್ಷದ ವೈಯಕ್ತಿಕ ಸಾಲವನ್ನು ನೀಡಿದರೆ ಈ ಹಿಂದೆ ಅದೇ ಮೊತ್ತವನ್ನು ಬಂಡವಾಳವಾಗಿ ಮೀಸಲಿಡಬೇಕಿತ್ತು. ಆದರೆ ಪ್ರಸ್ತುತ RBI ಹೊಸ ನಿಯಮದ ಪ್ರಕಾರ, ಮೊದಲಿಗಿಂತ ಶೇ. 25 ರಷ್ಟು ಹೆಚ್ಚು ಅಂದರೆ ರೂ. 6.25 ಲಕ್ಷ ಮಂಜೂರು ಮಾಡಬೇಕಿದೆ. ಅಸುರಕ್ಷಿತ ಸಾಲಗಳಲ್ಲಿನ ಈ ಹೆಚ್ಚಳವು ಹೆಚ್ಚಿನ ಡೀಫಾಲ್ಟ್ ದರಗಳಿಗೆ ಮತ್ತು ಸಕಾಲಿಕ ಪಾವತಿಗಳಲ್ಲಿ ಕಡಿತಕ್ಕೆ ಕಾರಣವಾಗಿದೆ. ಈ ಅಪಾಯಗಳನ್ನು ಕಡಿಮೆಗೊಳಿಸಲು RBI ನಿಯಮಗಳನ್ನು ಬಿಗಿಗೊಳಿಸಿದೆ.

RBI Loan Rule
Image Credit: Haribhoomi

EMI ಮಾಡುವ ಮುನ್ನ ನಿಯಮ ತಿಳಿದುಕೊಳ್ಳಿ
RBI ಹೊಸ ಮಾರ್ಗಸೂಚಿ ಪ್ರಕಾರ, ಬ್ಯಾಂಕ್‌ ಗಳು ಮತ್ತು ಎನ್‌ ಬಿಎಫ್‌ ಸಿಗಳು ಅಸುರಕ್ಷಿತ ಸಾಲಗಳಿಗೆ ಹೆಚ್ಚಿನ ಬಂಡವಾಳವನ್ನು ಕಾಯ್ದಿರಿಸಬೇಕಾಗುತ್ತದೆ. ಇದು ಅಂತಹ ಸಾಲಗಳಿಗೆ ಕಡಿಮೆ ಹಣದ ಲಭ್ಯತೆಯ ಬಗ್ಗೆ ತಿಳಿಸುತ್ತದೆ. ಬ್ಯಾಂಕ್‌ ಗಳು ಮತ್ತು ಎನ್‌ ಬಿಎಫ್‌ ಸಿಗಳು ಸಾಲ ಮಂಜೂರಾತಿಗಾಗಿ ಕಟ್ಟುನಿಟ್ಟಿನ ಮಾನದಂಡಗಳನ್ನು ಸಹ ಪರಿಚಯಿಸಿದೆ. ಇದರಿಂದಾಗಿ ಗ್ರಾಹಕರಿಗೆ ಇನ್ನುಮುಂದೆ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲ ಪಡೆಯುವುದು ಕಷ್ಟವಾಗಬಹುದು. RBI ಅಸುರಕ್ಷಿತ ಸಾಲಗಳ ಅಪಾಯವನ್ನು ಕಡಿಮೆ ಮಾಡಲು ಈ ನಿರ್ಧಾರ ಕೈಗೊಂಡಿದೆ.

Join Nadunudi News WhatsApp Group

Join Nadunudi News WhatsApp Group