Paytm New Rule: Paytm ಬಳಸುವವರಿಗೆ ಬಿಗ್ ಅಪ್ಡೇಟ್, ಇನ್ಮುಂದೆ ಪೆಟಿಎಂ ಬಳಸುವವರಿಗೆ ಈ ಸೇವೆ ಲಭ್ಯವಿಲ್ಲ.

ಪೆಟಿಎಂ ಬಳಕೆದಾರರು ಇನ್ನುಮುಂದೆ ಈ ಸೌಲಭ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ.

RBI New Rule On Paytm Payment: ದೇಶದಲ್ಲಿ ವಿವಿಧ UPI ಅಪ್ಲಿಕೇಶನ್ ಗಳು ಗ್ರಾಹಕರಿಗೆ ಆನ್ಲೈನ್ ಪಾವತಿ ಸೇವೆಯನ್ನು ನೀಡುತ್ತಿದೆ. ದೇಹದ ವಿವಿಧ ಬ್ಯಾಂಕ್ ಗಳು UPI ಅಪ್ಲಿಕೇಶನ್ ನೊಂದಿಗೆ ಸಹಭಾಗಿತ್ವ ಪಡೆದುಕೊಂಡಿದೆ.

ಸದ್ಯ RBI ಯುಪಿಐ ಪಾವತಿ ಅಪ್ಲಿಕೇಶನ್ ಗಳಲ್ಲಿ ಒಂದಾದ Paytm ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಪೆಟಿಎಂ ಬಳಕೆದಾರರು ಇನ್ನುಮುಂದೆ ಈ ಸೌಲಭ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ.

RBI new Rule On Paytm Payment
Image Credit: Hindustantimes

Paytm ಬಳಸುವವರಿಗೆ ಬಿಗ್ ಅಪ್ಡೇಟ್
Paytm ಪೇಮೆಂಟ್ಸ್ ಬ್ಯಾಂಕ್ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ, RBI ಫೆಬ್ರವರಿ 29, 2024 ರ ನಂತರ ಯಾವುದೇ ಗ್ರಾಹಕ ಖಾತೆ, ಪ್ರಿಪೇಯ್ಡ್ ಉಪಕರಣ, ವ್ಯಾಲೆಟ್ ಮತ್ತು ಫಾಸ್ಟ್ಯಾಗ್ ಇತ್ಯಾದಿಗಳಲ್ಲಿ ಠೇವಣಿಗಳನ್ನು ಸ್ವೀಕರಿಸುವುದನ್ನು ಅಥವಾ ಟಾಪ್-ಅಪ್ ಮಾಡುವುದನ್ನು ನಿಲ್ಲಿಸಿದೆ. ಬಾಹ್ಯ ಲೆಕ್ಕ ಪರಿಶೋಧಕರ ಸಮಗ್ರ ಸಿಸ್ಟಮ್ ಆಡಿಟ್ ವರದಿ ಮತ್ತು ಅನುಸರಣೆ ಪರಿಶೀಲನೆ ವರದಿಯ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ವಿರುದ್ಧ RBI ಈ ಕ್ರಮ ಕೈಗೊಂಡಿದೆ.

ಇನ್ಮುಂದೆ ಪೆಟಿಎಂ ಬಳಸುವವರಿಗೆ ಈ ಸೇವೆ ಲಭ್ಯವಿಲ್ಲ
ಫೆಬ್ರವರಿ 29, 2024 ರ ನಂತರ ಯಾವುದೇ ಗ್ರಾಹಕ ಖಾತೆ, ಪ್ರಿಪೇಯ್ಡ್ ಮಾಧ್ಯಮ, ವ್ಯಾಲೆಟ್, ಫಾಸ್ಟ್ಯಾಗ್, NCMC ಕಾರ್ಡ್ ಇತ್ಯಾದಿಗಳಲ್ಲಿ ಯಾವುದೇ ಠೇವಣಿ ಅಥವಾ ಕ್ರೆಡಿಟ್ ವಹಿವಾಟು ಅಥವಾ ಟಾಪ್ ಅಪ್ ಅನ್ನು ಅನುಮತಿಸಲಾಗುವುದಿಲ್ಲ. ಆದಾಗ್ಯೂ, ಯಾವುದೇ ಬಡ್ಡಿ, ಕ್ಯಾಶ್‌ ಬ್ಯಾಕ್ ಅಥವಾ ಮರುಪಾವತಿಗಳನ್ನು ಕ್ರೆಡಿಟ್ ಮಾಡಲಾಗುವುದಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

Paytm Payment Latest Update
Image Credit: Munsifdaily

ಇದರೊಂದಿಗೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ತಮ್ಮ ಉಳಿತಾಯ ಬ್ಯಾಂಕ್ ಖಾತೆ, ಚಾಲ್ತಿ ಖಾತೆ, ಪ್ರಿಪೇಯ್ಡ್ ಮಾಧ್ಯಮ, ಫಾಸ್ಟ್ಯಾಗ್, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಸೇರಿದಂತೆ ಯಾವುದೇ ನಿರ್ಬಂಧವಿಲ್ಲದೆ ತಮ್ಮ ಖಾತೆಗಳಿಂದ ಬಾಕಿ ಹಣವನ್ನು ಹಿಂಪಡೆಯಲು ಅಥವಾ ಬಳಸಲು ಅನುಮತಿಸಲಾಗುವುದು ಎಂದು ಆರ್‌ಬಿಐ ಹೇಳಿದೆ.

Join Nadunudi News WhatsApp Group

Join Nadunudi News WhatsApp Group