UPI Updates: UPI ಮೂಲಕ ಹಣ ಕಳುಹಿಸುವವರಿಗೆ RBI ನಿಂದ ಹೊಸ ನಿಯಮ, 4 ಘಂಟೆ ಕಾಯಬೇಕು.

UPI ಪೇಮೆಂಟ್ ಗೆ ಸಂಬಂಧಿಸಿದಂತೆ RBI ನ ಹೊಸ ನಿಯಮ.

RBI New Rule On UPI Payment: ದೇಶದಲ್ಲಿ UPI ಎಷ್ಟು ಅಗತ್ಯವಾಗಿದೆ ಎನ್ನುವುದು ಎಲ್ಲರಿಗು ತಿಳಿದೇ ಇದೆ. ಸದ್ಯ ಜನರು UPI ವಹಿವಾಟಿನ ಮೇಲೆ ಅವಲಂಬಿತವಾಗಿದ್ದಾರೆ. ನಗದು ಹಣದ ಮೂಲಕ ಹಣಕಾಸಿನ ವಹಿವಾಟು ನಡೆಯುತ್ತಿಲ್ಲ ಎನ್ನಬಹುದು. ಯಾವುದೇ ಸಣ್ಣ ಮೊತ್ತವನ್ನು ಕೂಡ ಪಾವತಿ ಮಾಡಬೇಕಿದ್ದರೂ UPI ಮೂಲಕವೇ ಪಾವತಿ ನಡೆಯುತ್ತಿದೆ.

ಇನ್ನು ದೇಶದಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ವಂಚನೆ ಕೂಡ ಹೆಚ್ಚು ಹೆಚ್ಚು ನಡೆಯುತ್ತಿದೆ. UPI ಮೂಲಕ ಕೂಡ ಹೆಚ್ಚಿನ ವಂಚನೆ ನಡೆಯುತ್ತಿದೆ. ಸದ್ಯ ಕೇಂದ್ರ ಸರ್ಕಾರ UPI ಮೂಲಕ ನಡೆಯುವ ವಂಚನೆಗೆ ಬ್ರೇಕ್ ಹಾಕಲು ಮಹತ್ವದ ನಿರ್ಧಾರ ಕೈಗೊಂಡಿದೆ.

RBI New Rule On UPI Payment
Image Credit: Fisdom

UPI ಪಾವತಿಯಲ್ಲಿ RBI ಮಹತ್ವದ ಬದಲಾವಣೆ
UPI ಮೂಲಕ ಪಾವತಿ ಮಾಡಿದ ಹಣವನ್ನು 4 ಗಂಟೆಗಳಲ್ಲಿ ಹಿಂಪಡೆಯಲು RBI ಹೊಸ ನಿಯಮವನ್ನು ರೂಪಿಸುತ್ತಿದೆ. ಈ ಮೂಲಕ ಹೆಚ್ಚುತ್ತಿರುವ ವಂಚನೆಗೆ ಬ್ರೇಕ್ ಹಾಕಲು RBI ನಿರ್ಧರಿಸಿದೆ. ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಮೊದಲ ವಹಿವಾಟಿನಲ್ಲಿ ಸರ್ಕಾರವು ಕೆಲವು ಬದಲಾವಣೆ ತರಲು ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ ನಿರ್ಧಿಷ್ಟ ಮೊತ್ತಕ್ಕಿಂತ ಹೆಚ್ಚಿನ ವಹಿವಾಟುಗಳು ಕನಿಷ್ಠ ಕಾಲಮಿತಿ ವಿಧಿಸುವ ಯೋಜನೆ ಹೂಡಲಾಗಿದೆ.

UPI ಮೂಲಕ ಇಂತಿಷ್ಟು ಹಣ ವರ್ಗಾವಣೆ ಮಾಡಲು ಮಾತ್ರ ಸಾಧ್ಯ
2,000 ಕ್ಕೂ ಹೆಚ್ಚು ವಹಿವಾಟುಗಳು ಇದ್ದಾಗ, ಇಬ್ಬರು ಬಳಕೆದಾರರ ನಡುವಿನ ಮೊದಲ ವಹಿವಾಟು ಪೂರ್ಣಗೊಳ್ಳಲು 4-ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 4 ಗಂಟೆಗಳ ಪ್ರಕ್ರಿಯೆಯನ್ನು ಸೇರಿಸುವುದರಿಂದ ಡಿಜಿಟಲ್ ಪಾವತಿಗಳಲ್ಲಿ ಕೆಲವು ಅಡಚಣೆ ಉಂಟಾಗಬಹುದು ಎಂಬ ಅಂಶದ ದೃಷ್ಟಿಯಿಂದ ಈ ಸಂದರ್ಭದಲ್ಲಿ ಗ್ರಾಹಕರು ತ್ವರಿತ ಪಾವತಿ ಸೇವೆ (IMPS), ಏಕೀಕೃತ ಪಾವತಿ ಇಂಟರ್ಫೇಸ್ (UPI) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ಮೂಲಕ ಪಾವತಿಗಳನ್ನು ಮಾಡಲು ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು.

UPI Payment Latest Update
Image Credit: Voices

UPI ಪೇಮೆಂಟ್ 4 ಗಂಟೆಗಳಲ್ಲಿ ಪಡೆಯಲು RBI ಹೊಸ ನಿಯಮ
ಮೊದಲ ಬಾರಿಗೆ 2,000 ರೂ. ಗಿಂತ ಹೆಚ್ಚಿನ ವರ್ಗಾವಣೆಯನ್ನು ಸ್ವೀಕರಿಸುವವರ ಖಾತೆಗೆ ತಕ್ಷಣವೇ ಕಳುಹಿಸಲಾಗುವುದಿಲ್ಲ. ಇದಕ್ಕಾಗಿ 4 ಗಂಟೆಗಳ ಕಾಲಾವಕಾಶ ನೀಡಲಾಗುವುದು. ಬಳಕೆದಾರರು ಆನ್‌ ಲೈನ್ ವಹಿವಾಟುಗಳಿಗಾಗಿ ಹೊಸ UPI ಖಾತೆಯನ್ನು ರಚಿಸಿದರೆ, ಅವರು 24 ಗಂಟೆಗಳ ಒಳಗೆ ಗರಿಷ್ಠ 5,000 ರೂ. ವರೆಗೆ ಮೊದಲ ವಹಿವಾಟು ಮಾಡಬಹುದು. ಅದೇ ರೀತಿ, ಇದು ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (NEFT) ಗೂ ಅನ್ವಯಿಸುತ್ತದೆ. ಮೊದಲ ಬಾರಿಗೆ ಖಾತೆಯನ್ನು ರಚಿಸಿದರೆ 24 ಗಂಟೆಗಳ ಒಳಗೆ 50,000 ರೂ. ವಹಿವಾಟು ನಡೆಸಬಹುದು. NEFT ಸಂದರ್ಭದಲ್ಲಿ ಮೊದಲ 24 ಗಂಟೆಗಳಲ್ಲಿ ಗರಿಷ್ಟ 50,000 ರೂ. ಗಳನ್ನೂ ಕಳುಹಿಸಬಹುದು.

Join Nadunudi News WhatsApp Group

Join Nadunudi News WhatsApp Group