2000 Notes: 2000 ರೂ ನೋಟುಗಳ ಮೇಲೆ ದಿಡೀರ್ ಇನ್ನೊಂದು ಬಿಗ್ ಅಪ್ಡೇಟ್, RBI ನಿಂದ ಘೋಷಣೆ.

2000 ರೂ ನೋಟುಗಳ ಮೇಲೆ ದಿಡೀರ್ ಇನ್ನೊಂದು ಬಿಗ್ ಅಪ್ಡೇಟ್

RBI New Update Regarding 2000 Note: 2006 ರಲ್ಲಿನ ನೋಟ್ ಬ್ಯಾನ್ ನ ಬಳಿಕ ಮೇ 2023 ರಲ್ಲಿ 2000 ರೂ. ನೋಟುಗಳನ್ನು RBI ಚಲಾವಣೆಯಿಂದ ಹಿಂತೆಗೆದುಕೊಂಡಿದೆ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ನೋಟ್ ಬದಲಾವಣೆಗೆ ಬ್ಯಾಂಕುಗಳಲ್ಲಿ ಅವಕಾಶವನ್ನು ನೀಡಿತ್ತು.

ಇನ್ನು ಅಕ್ಟೋಬರ್ 7 ರವರೆಗೆ ನೋಟುಗಳನ್ನು ಬ್ಯಾಂಕ್ ನಲ್ಲಿ ಜನರು ವಿನಿಮಯ ಮಾಡಿಕೊಳ್ಳುತ್ತಿದ್ದರು. ಸದ್ಯ 2000 ರೂ. ನೋಟ್ ಬ್ಯಾನ್ ಆಗಿ ಸಾಕಷ್ಟು ಸಮಯ ಕಳೆದಿದೆ. ಸದ್ಯ ಇಂದು RBI 2000 ನೋಟಿನ ವಿಚಾರವಾಗಿ ಮಹತ್ವದ ಮಾಹಿತಿಯನ್ನು ನೀಡಿದೆ.

RBI New Update Regarding 2000 Note
Image Credit: India TV News

2000 ರೂ ನೋಟುಗಳ ಮೇಲೆ ದಿಡೀರ್ ಇನ್ನೊಂದು ಬಿಗ್ ಅಪ್ಡೇಟ್
2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರದ ನಂತರ, ಇಲ್ಲಿಯವರೆಗೆ ಒಟ್ಟು 2000 ರೂಪಾಯಿ ನೋಟುಗಳಲ್ಲಿ 97.62 ಪ್ರತಿಶತವು ಭಾರತೀಯ ರಿಸರ್ವ್ ಬ್ಯಾಂಕ್‌ ಗೆ ಮರಳಿದೆ.ಪತ್ರಿಕಾ ಪ್ರಕಟಣೆಯಲ್ಲಿ ಇಂದು RBI ಈ ಬಗ್ಗೆ  ಮಾಹಿತಿ ನೀಡಿದೆ. ಮೇ 19, 2023 ರಂದು RBI ದೇಶದಿಂದ ರೂ. 2000 ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿತ್ತು.

ಮೇ 19, 2023 ರಂದು 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿವೆ ಎಂದು ಇಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಆರ್‌ಬಿಐ ಹೇಳಿದೆ. ಈಗ ಫೆಬ್ರವರಿ 29, 2024 ರ ಹೊತ್ತಿಗೆ, ಈ ಅಂಕಿ ಅಂಶವು 8470 ಕೋಟಿ ರೂ.ಗೆ ಇಳಿದಿದೆ. ಅಂದರೆ 2000 ರೂಗಳ ಒಟ್ಟು ನೋಟುಗಳಲ್ಲಿ, 97.62 ಪ್ರತಿಶತವು RBI ಗೆ ಮರಳಿದೆ.

2000 Note Latest Update
Image Credit: NDTV

2000 ರೂಪಾಯಿ ನೋಟುಗಳನ್ನು ಇನ್ನು RBI  ವಾಪಸ್ ತೆಗೆದುಕೊಳ್ಳುತ್ತಿದೆ
ದೇಶದಲ್ಲಿ 2000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಉಳಿಯುತ್ತವೆ ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.  ಅಂದರೆ ಈಗ RBI ಈ ನೋಟುಗಳನ್ನು ಚಲಾವಣೆಯಿಂದ ಹೊರಕ್ಕೆ ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ. ನವೆಂಬರ್ 8, 2016 ರಂದು 500 ಮತ್ತು 1000 ರೂ. ನೋಟುಗಳನ್ನು ಮಾಡಿದಂತೆ 2000 ರೂ ನೋಟುಗಳನ್ನು ಸಂಪೂರ್ಣವಾಗಿ ಅಮಾನ್ಯೀಕರಣದ ವ್ಯಾಪ್ತಿಗೆ ತರಲಾಗಿಲ್ಲ ಎಂದು RBI ಹೇಳಿದೆ. ರಿಸರ್ವ್ ಬ್ಯಾಂಕ್ ಮೇ 19, 2023 ರಿಂದ ಬ್ಯಾಂಕ್‌ ಗಳಲ್ಲಿ 2000 ರೂ ನೋಟುಗಳನ್ನು ಬದಲಾಯಿಸುವ ಸೌಲಭ್ಯವನ್ನು ನೀಡಿತ್ತು.

Join Nadunudi News WhatsApp Group

ಈ ಸಮಯದಲ್ಲಿ ಅನೇಕ ಜನರು 2000 ರೂ. ನೋಟುಗಳನ್ನು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, RBI  ಅಕ್ಟೋಬರ್ 7 ರವರೆಗೆ ಗಡುವನ್ನು ವಿಸ್ತರಿಸಿತ್ತು. ಈ ಗಡುವಿನ ನಂತರ ಅಕ್ಟೋಬರ್ 09, 2023 ರಿಂದ, RBI 19 ವಿತರಣಾ ಕಚೇರಿಗಳು ಜನರಿಂದ 2000 ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತಿವೆ. ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ 2000 ರೂ. ನೋಟನ್ನು ಜಮಾ ಮಾಡಲು ದೇಶದ ಯಾವುದೇ ಅಂಚೆ ಕಚೇರಿಯಿಂದ ಆರ್‌ಬಿಐ ನ ಯಾವುದೇ ವಿತರಣಾ ಕಚೇರಿಗೆ ಇಂಡಿಯಾ ಪೋಸ್ಟ್ ಮೂಲಕ ನೋಟುಗಳನ್ನು ಕಳುಹಿಸಬಹುದಾಗಿದೆ.

Join Nadunudi News WhatsApp Group