Home Loan Pay: ಸಮಯಕ್ಕೆ ಸರಿಯಾಗಿ ಹೋಂ ಲೋನ್ ಕಟ್ಟಲು ಕಷ್ಟವಾಗುತ್ತಿದೆಯಾ…? ಹಾಗಾದರೆ RBI ಹೊಸ ನಿಯಮ ತಿಳಿದುಕೊಳ್ಳಿ.

RBI ನಿಯಮಾನುಸಾರ ನಡೆದರೆ ನಿಮಗೆ ಸಾಲದ ಮರುಪಾವತಿ ಸುಲಭವಾಗಲಿದೆ

RBI Rule On Loan: ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಜನರಿಗೆ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸು ಮಾಡಿಕೊಳ್ಳಲು ಗೃಹ ಸಾಲವನ್ನು ನೀಡುತ್ತಿದೆ. ಸಾಕಷ್ಟು ಜನರು ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ಪಡೆಯುತ್ತಿದ್ದಾರೆ. ಬ್ಯಾಂಕ್ ಸಾಲವನ್ನು ನೀಡುವ ಮುನ್ನ ಸಾಕಷ್ಟು ನಿಯಮವನ್ನು ಅಳವಡಿಸಿರುತ್ತದೆ.

ಬ್ಯಾಂಕ್ ನಲ್ಲಿ ಸಾಲ ಪಡೆದವರು ಬ್ಯಾಂಕ್ ನಿಯಮಾನುಸಾರ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಇನ್ನು ಅದೆಷ್ಟೋ ಜನರು ಗೃಹಸಾಲ ಕಟ್ಟಲು ಬಹಳ ಕಷ್ಟಪಡುತ್ತಿದ್ದಾರೆ ಎಂದು ಹೇಳಬಹುದು. ಗೃಹಸಾಲ ಕಟ್ಟಲು ಕಷ್ಟಪಡುತ್ತಿರುವವರಿಗೆ RBI ನಿಂದ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು. RBI ಈ ನಿಯಮ ಗೃಹಸಾಲ ಮಾಡಿದವರ ಸಂತಕ್ಕೆ ಕೂಡ ಕಾರಣವಾಗಿದೆ.

RBI Rule On Loan
Image Credit: Informal news

ಸಮಯಕ್ಕೆ ಸರಿಯಾಗಿ ಹೋಂ ಲೋನ್ ಕಟ್ಟಲು ಕಷ್ಟವಾಗುತ್ತಿದೆಯಾ…?
ಸಾಮಾನ್ಯವಾಗಿ ಸಾಲ ಪಡೆದುಕೊಳ್ಳುವುದು ಸುಲಭ. ಆದರೆ ಸಮಯಕ್ಕೆ ಸರಿಯಾಗಿ ಸಾಲದ ಮರುಪಾವತಿ ಕೆಲವೊಮ್ಮೆ ಕಷ್ಟವಾಗುತ್ತದೆ. ಜೀವನ ನಿರ್ವಹಣೆಯ ಜೊತೆಗೆ ಮಾಸಿಕ ಕಂತುಗಳು ಕೆಲವೊಮ್ಮೆ ಜನರಿಗೆ ಹೊರೆಯಾಗುತ್ತದೆ. ಬ್ಯಾಂಕ್ ಗಳು ಸಾಲ ಕೊಡುವ ಮುನ್ನ ಸಾಲ ಮರುಪಾವತಿಯ ಬಗ್ಗೆ ಎಚ್ಚರಿಸಿರುತ್ತದೆ. ನಿಗದಿತ ಸಮಯದೊಳಗೆ ಸಾಲ ಮರುಪಾವತಿ ಮಾಡುವುದು ಸಾಲಗಾರರ ಹೊಣೆಯಾಗಿರುತ್ತದೆ.

ಸಾಲ ಮರುಪಾವತಿ ಸಾಧ್ಯವಾಗದ ಸಮಯದಲ್ಲಿ ಬ್ಯಾಂಕ್ ಅಂತವರಿಗೆ ದಂಡವನ್ನು ವಿಧಿಸುತ್ತದೆ ಎನ್ನುವುದು ತಿಳಿದಿರುವುದೇ. ಇನ್ನು ಸಮಯಕ್ಕೆ ಸರಿಯಾಗಿ ಹೋಂ ಲೋನ್ ಕಟ್ಟಲು ಕಷ್ಟವಾಗುತ್ತಿದೆಯಾ…? ಹಾಗಾದರೆ ನೀವು ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ RBI ಇದಕ್ಕಾಗಿ ಹೊಸ ನಿಯಮವನ್ನು ರೂಪಿಸಿದೆ. ನೀವು RBI ನಿಯಮಾನುಸಾರ ನಡೆದರೆ ನಿಮಗೆ ಸಾಲದ ಮರುಪಾವತಿ ಸುಲಭವಾಗಲಿದೆ.

Loan rules latest Update
Image Credit: Informal News

ಸಾಲ ಮರುಪಾವತಿ ಮಾಡಲು RBI ಹೊಸ ನಿಯಮ ತಿಳಿದುಕೊಳ್ಳಿ
CIBIL Score ಜನರ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಗಳ ವೆಚ್ಚವನ್ನು ಪರಿಶೀಲಿಸುತ್ತದೆ. ಕ್ರೆಡಿಟ್ ಕಾರ್ಡ್ ವೆಚ್ಚದಲ್ಲಿ ಹೆಚ್ಚಳವಾಗಿದೆ ಮತ್ತು ವೈಯಕ್ತಿಕ ಸಾಲಗಳು ಸಹ ಕರೋನಾ ಅವಧಿಯ ಹಿಂದಿನ ಮಟ್ಟಕ್ಕೆ ಇಳಿದಿವೆ. ಕೆಲವೆಡೆ ಆ ಅಂಕಿಯನ್ನೂ ದಾಟಿದೆ ಎನ್ನುವುದು ಇತ್ತೀಚಿನ ವರದಿಯಿಂದ ಬಂದ ಮಾಹಿತಿಯಾಗಿದೆ. RBI ನಿಯಮಗಳ ಪ್ರಕಾರ, ತಮ್ಮ ಸಾಲದ EMI ಅನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗದವರು ಅಥವಾ ಕೆಲವು ಕಾರಣಗಳಿಂದ ನಿಗದಿತ ಮೊತ್ತವನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಅವರು ಪುನರ್ರಚನೆಯ ಆಯ್ಕೆಯನ್ನು ಪರಿಗಣಿಸಬಹುದು.

Join Nadunudi News WhatsApp Group

ಅಂದರೆ, ಒಬ್ಬ ವ್ಯಕ್ತಿಯ ಇಎಂಐ 50 ಸಾವಿರ ರೂ. ಆದ್ದರಿಂದ ಅವರು ಬಯಸಿದರೆ, ಅವರು ಈ ಮೊತ್ತವನ್ನು ಪುನರ್ರಚಿಸಬಹುದು ಮತ್ತು ಸಾಲದ ಅವಧಿಯನ್ನು ಬದಲಾಯಿಸಬಹುದು, ಇದರಿಂದಾಗಿ ಅವರ EMIಅನ್ನು 50 ಸಾವಿರದಿಂದ 25 ಸಾವಿರಕ್ಕೆ ಇಳಿಸಬಹುದು. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಯಾರಾದರೂ ಇದನ್ನು ಮಾಡಿದರೆ, ಅದು ಅವರಿಗೆ EMI ಯ ಒತ್ತಡದಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ ಮತ್ತು ಅವನು ತನ್ನನ್ನು ಲೋನ್ ಡಿಫಾಲ್ಟರ್ ಎಂಬ ಟ್ಯಾಗ್‌ ನಿಂದ ರಕ್ಷಿಸುತ್ತಾನೆ.

Join Nadunudi News WhatsApp Group