Holi Rules: ಜೇಬಿನಲ್ಲಿ ಹಣ ಇಟ್ಟುಕೊಂಡು ಹೋಳಿ ಬಣ್ಣ ಹಚ್ಚಿಕೊಳ್ಳುವವರಿಗೆ RBI ನಿಂದ ಹೊಸ ರೂಲ್ಸ್, RBI ಆದೇಶ

ಬಣ್ಣ ಬಿದ್ದಿರುವ ನೋಟುಗಳ ಚಲಾವಣೆಯ ಬಗ್ಗೆ RBI ಏನು ಹೇಳುತ್ತದೆ..?

RBI Update On Colour Notes: Reserve Bank Of India ದೇಶದಲ್ಲಿ ಅನೇಕ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಾ ಇರುತ್ತದೆ. ಅದರಲ್ಲೂ RBI ಮೇ 2023 ರಲ್ಲಿ ದೇಶದಲ್ಲಿ 2000 ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ನೋಟುಗಳ ವಿಚಾರವಾಗಿ ಹೊಸ ಹೊಸ ಅಪ್ಡೇಟ್ ನೀಡುತ್ತಿದೆ. ಸದ್ಯ RBI ದೊಡ್ಡ ನೋಟುಗಳ ವಿಷಯವಾಗಿ ಜನಸಾಮಾನ್ಯರಿಗೆ ಬಿಗ್ ಅಪ್ಡೇಟ್ ನೀಡಿದೆ.

ಇನ್ನು ದೇಶದಲ್ಲಿ ಮಾರ್ಚ್ 25 ರಿಂದ ಹೋಳಿ ಹಬ್ಬದ ಆಚರಣೆ ಜೋರಾಗಿಯೇ ನಡೆಯುತ್ತದೆ. ಹೋಳಿ ಸಂಭ್ರಮದಲ್ಲಿ ಎಲ್ಲರು ಕೂಡ ಬಣ್ಣವನ್ನು ಹಚ್ಚಿಕೊಂಡು ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು RBI ಹೋಳಿ ಆಚರಣೆ ಮಾಡುವವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಹೌದು. ನೀವು ಹೋಳಿ ಆಡುವಾಗ ಈ ತಪ್ಪನ್ನು ಮಾಡಿದರೆ ನಷ್ಟ ಅನುಭವಿಸುವ ಸಾಧ್ಯತೆ ಇದೆ.

RBI New Regulations On Holi
Image Credit: News24online

ಹೋಳಿ ಆಚರಣೆ ಮಾಡುವವರಿಗೆ RBI ನಿಂದ ಮಹತ್ವದ ಮಾಹಿತಿ
ಸಾಮಾನ್ಯವಾಗಿ ಹೋಳಿ ಹಬ್ಬವನ್ನು ಆಚರಿಸುವಾಗ ಮೈತುಂಬ ಬಣ್ಣ ಮಾಡಿಕೊಳ್ಳುವುದು ಸಾಮಾನ್ಯ. ಹಾಗೆಯೆ ನೀವು ನಿಮ್ಮ ಮೈಯಿಗೆ ಬಣ್ಣವನ್ನು ಬಳಿದುಕೊಳ್ಳುವ ಮುನ್ನ ಜಾಗರೂಕರಾಗಿರಿ. ಕಾರಣ ನಿಮ್ಮ ಬಳಿ ಇರುವ ನೋಟಿಗೆ ಬಣ್ಣ ತಾಗಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಬಣ್ಣ ಬಿದ್ದಂತಹ ನೋಟುಗಳು ಚಲಾವಣೆ ಆಗುವುದಿಲ್ಲ. ಕೆಲವು ಅಂಗಡಿಯವರು ನೋಟುಗಳಿಗೆ ಬಣ್ಣ ಬಿದ್ದಿದ್ದರೆ ಅಂತಹ ನೋಟುಗಳನ್ನು ತಗೆದುಕೊಳ್ಳಲು ನಿರಾಕರಿಸುತ್ತಾರೆ. ಈ ಸಮಯದಲ್ಲಿ ನೀವು RBI ನಿಯಮವನ್ನು ತಿಳಿದುಕೊಂಡಿರುವುದು ಮುಖ್ಯ. ಬಣ್ಣ ಬಿದ್ದಿರುವ ನೋಟುಗಳ ಚಲಾವಣೆಯ ಬಗ್ಗೆ RBI ಏನು ಹೇಳುತ್ತದೆ..? ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

RBI Update On Colour Notes
Image Credit: TV9hindi

ಬಣ್ಣ ಬಿದ್ದಿರುವ ನೋಟುಗಳ ಚಲಾವಣೆಯ ಬಗ್ಗೆ RBI ಏನು ಹೇಳುತ್ತದೆ..?
RBI ನಿಯಮದ ಪ್ರಕಾರ ಯಾವುದೇ ಅಂಗಡಿಯವರು ಬಣ್ಣ ಬಿದ್ದಿರುವ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸುವಂತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳ ಪ್ರಕಾರ, ಮಡಿಸಿದ ಮತ್ತು ಹಳೆಯ ನೋಟುಗಳನ್ನು ದೇಶಾದ್ಯಂತ ಎಲ್ಲಾ ಬ್ಯಾಂಕ್‌ ಗಳಲ್ಲಿ ಬದಲಾಯಿಸಬಹುದು. ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

Join Nadunudi News WhatsApp Group

ಯಾವುದೇ ಹರಿದ ನೋಟು ಬ್ಯಾಂಕ್‌ ನಲ್ಲಿ ವಿನಿಮಯಗೊಂಡಾಗ, ನೋಟಿನ ಸ್ಥಿತಿಯ ಆಧಾರದ ಮೇಲೆ ಮರುಪಾವತಿ ಮಾಡಲಾಗುತ್ತದೆ. ಉದಾಹರಣೆಗೆ, 200 ರೂಪಾಯಿ ನೋಟು ಹರಿದು 78 ಚದರ ಸೆಂಟಿಮೀಟರ್ (ಸೆಂ) ಇದ್ದರೆ, ಬ್ಯಾಂಕ್ ಅದರ ಸಂಪೂರ್ಣ ಮರುಪಾವತಿಯನ್ನು ನೀಡುತ್ತದೆ, ಆದರೆ ಕೇವಲ 39 ಚದರ ಸೆಂಟಿಮೀಟರ್ (ಸೆಂ) ನೋಟು ಉಳಿದಿದ್ದರೆ, ಅರ್ಧದಷ್ಟು ಮಾತ್ರ ಮರುಪಾವತಿಯಾಗುತ್ತದೆ ಎನ್ನುವುದು ನಿಮಗೆ ತಿಳಿಯಿರಲಿ.

RBI About Holi Colored Notes
Image Credit: Hindustan Times

Join Nadunudi News WhatsApp Group