RCB Playoff: ಇನ್ನೂ ಇದೆ ಪ್ಲೇ ಆಫ್ ಚಾನ್ಸ್, ಮೈದಾನದಲ್ಲಿ ಈ ಒಂದು ಪವಾಡ ನಡೆದರೆ RCB ಪ್ಲೇ ಆಫ್ ಪ್ರವೇಶ ಖಚಿತ.

ಮೈದಾನದಲ್ಲಿ ಈ ಒಂದು ಪವಾಡ ನಡೆದರೆ RCB ಪ್ಲೇ ಆಫ್ ಪ್ರವೇಶ ಖಚಿತ

RCB Playoff Update: Indian Premier League (ಐಪಿಎಲ್ 2024) ಸೀಸನ್ 17 ರಲ್ಲಿ Royal Challengers Bangalore ಸತತ ಸೋಲಿನಿಂದ ತತ್ತರಿಸಿದೆ. ಆಡಿದ 8 ಪಂದ್ಯಗಳಲ್ಲಿ ಆರ್‌ಸಿಬಿ ಕೇವಲ 1 ಪಂದ್ಯ ಗೆದ್ದಿದೆ. ಅಲ್ಲದೆ 7 ಸೋಲಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ತಂಡ ಪ್ಲೇಆಫ್ ರೇಸ್‌ ನಿಂದ ಹೊರಗುಳಿಯದಿರುವುದು ವಿಶೇಷ. ಈ ಬಾರಿಯ IPL ನಲ್ಲಿ ಆರಂಭದಲ್ಲಿಯೇ ಸೋತ RCB ಅಂಕಪಟ್ಟಿಯಲ್ಲಿ ಕಡಿಮೆ ಸ್ಥಾನದಲ್ಲಿದೆ.

ಈ ಬಾರಿ RCB ಕಪ್ ಪಡೆಯಲು ಸಾಧ್ಯವಿಲ್ಲ ಎಂದು ಬೇಸರದಲ್ಲಿದ್ದ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಹೊರಬಿದ್ದಿದೆ. RCB ಪ್ಲೇ ಆಫ್ ಪ್ರವೇಶ ಮಾಡಲು ಇನ್ನೂ ಒಂದು ಅವಕಾಶವಿದೆ. ಹೊಸ ರೀತಿಯ ಪ್ಲಾನ್ ಮಾಡಿ ಕಣಕ್ಕಿಳಿದರೆ RCB ಈ ಬಾರಿ ಪ್ಲೇ ಆಫ್ ಗೆ ಹೋಗಬಹುದು.

RCB Playoff Update
Image Credit: Timesnownews

ಮೈದಾನದಲ್ಲಿ ಈ ಒಂದು ಪವಾಡ ನಡೆದರೆ RCB ಪ್ಲೇ ಆಫ್ ಪ್ರವೇಶ ಖಚಿತ
ಅಂದರೆ ಉಳಿದ 6 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಫಾಫ್ ತಂಡ ಪ್ಲೇಆಫ್ ಪ್ರವೇಶಿಸುವ ಅವಕಾಶ ಸೃಷ್ಟಿಸಿಕೊಳ್ಳಬಹುದು. ಹೀಗಾಗಿ ಇನ್ನೂ ಕೆಲವು ಪಂದ್ಯಗಳಲ್ಲಿ ಆರ್‌ಸಿಬಿ ಯ ಪ್ಲೇಆಫ್‌ ಆಸೆ ಜೀವಂತವಾಗಿರಲಿದೆ. IPL 2024 ಟೂರ್ನಿಯಲ್ಲಿ RCB ತಂಡ ಈಗ ಕೊನೆಯ ಸ್ಥಾನದಲ್ಲಿದೆ. ಹಾಗಾದರೆ ಈ ಹಂತದಲ್ಲಿ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗಲಿದೆಯೇ…? RCB ಪ್ಲೇಆಫ್‌ ಗೆ ಅರ್ಹತೆ ಪಡೆಯಲು ಇನ್ನೂ ಎಷ್ಟು ಗೆಲುವುಗಳು ಬೇಕು..? ಎನ್ನುವುದು ಈಗ ಸದ್ಯದ ಪ್ರಶ್ನೆಯಾಗಿದೆ.

ಇದು ಕನ್ನಡದ ಪ್ರಸಿದ್ಧ ಕ್ರಿಕೆಟ್ ತಜ್ಞರು ಮತ್ತು ಮಾಜಿ ಆಟಗಾರರ ನಡುವಿನ ಮಹತ್ವದ ಸಂಭಾಷಣೆಯನ್ನು ಆಧರಿಸಿದೆ. 2024 ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಕಪ್ ಗೆಲ್ಲುವ ಅವಕಾಶ ಇನ್ನೂ ಇದೆ. ಆದರೆ ಆರ್‌ಸಿಬಿ ತಂಡ 6 ಪಂದ್ಯಗಳಲ್ಲಿ 6ರಲ್ಲಿ ಗೆಲ್ಲಲೇಬೇಕಿದೆ. ಇಷ್ಟೇ ಅಲ್ಲ, ರಾಜಸ್ಥಾನ್ ರಾಯಲ್ಸ್ ಹಾಗೂ ಕೆಕೆಆರ್ ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಕೇವಲ 2 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆ ನಂತರ ಲಕ್ನೋ ಕೇವಲ ಒಂದು ಪಂದ್ಯವನ್ನು ಗೆಲ್ಲಬೇಕಾಗಿದೆ. ಆಗ ಮಾತ್ರ ಆರ್‌ಸಿಬಿ ತಂಡಕ್ಕೆ ಮುಂದಿನ ಹಂತ ತಲುಪುವ ಅವಕಾಶ ಸಿಗಲಿದೆ.

RCB Latest Update
Image Credit: m9

Join Nadunudi News WhatsApp Group

Join Nadunudi News WhatsApp Group