Realme C67: 5000 mAh ಬ್ಯಾಟರಿ, 128GB ಸ್ಟೋರೇಜ್ ಮತ್ತು 50 MP ಕ್ಯಾಮೆರಾ, ಹೊಸ Realme ಮೊಬೈಲಿಗೆ ಜನರು ಫಿದಾ.

ರಿಯಲ್ ಮೀ ಹೊಸ 5G ಸ್ಮಾರ್ಟ್ ಫೋನ್, ಕಡಿಮೆ ಬೆಲೆ ಮತ್ತು 5000 mAh ಬ್ಯಾಟರಿ

Realme C67 5G Smartphone: ಹೊಸ ಹೊಸ ರೂಪಾಂತರದಲ್ಲಿ Realme ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಳ್ಳುತ್ತಿದೆ. ರಿಯಲ್ ಮೀ (Realme) ಕಂಪನಿಯು ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಅದರಲ್ಲೂ ಹೆಚ್ಚಾಗಿ 5G ಸ್ಮಾರ್ಟ್ ಫೋನ್ ಗಳನ್ನೂ ಜನರ ಆಯ್ಕೆಗೆ ನೀಡುತ್ತಿದೆ. ಇದೀಗ ಕಂಪನಿಯು ವಿಭಿನ್ನ ವೈಶಿಷ್ಟ್ಯಗಳಿರುವ ಆಕರ್ಷಣ ವಿನ್ಯಾಸದಲ್ಲಿ ಹೊಸ 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ನೀವು ಹೊಸ ವರ್ಷಕ್ಕೆ ಹೊಸ ಸ್ಮಾರ್ಟ್ ಫೋನ್ ಅನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಈ ಮೊಬೈಲ್ ಬೆಸ್ಟ್ ಮೊಬೈಲ್ ಎಂದು ಹೇಳಬಹುದು. ಹಾಗಾದರೆ ಹೊಸ Realme ಮೊಬೈಲ್ ಫೀಚರ್ ಬಗ್ಗೆ ತಿಳಿಯೋಣ.

Realme C67 5G Smartphone
Image Credit: Business-Standard

Realme C67 5G Smartphone
ಟೆಕ್ ವಲಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ Realme ಕಂಪನಿ ಇದೀಗ ತನ್ನ ಗ್ರಾಹಕರಿಗಾಗಿ ಹೆಚ್ಚು ಫೀಚರ್ ಇರುವಂತಹ Realme C67 5G Smartphone ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ನೀವು ನೂತನ Realme C67 5G Smartphone ಅನ್ನು December 16 ರಿಂದ ಜನಪ್ರಿಯ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಆದ Flipkart ನಲ್ಲಿ ಖರೀದಿಸಬಹುದು.

Realme C67 5G Smartphone ಖರೀದಿಯ ಮೇಲೆ ಖರೀದಿದಾರರು 2,000 ರೂ.ವರೆಗಿನ ಕೊಡುಗೆಗಳನ್ನು ಪಡೆಯುತ್ತಾರೆ. ಡಿಸೆಂಬರ್ 20 ರ ನಂತರ 1500 ರೂ.ಗೆ ಇಳಿಯಲಿದೆ. ಭಾರತೀಯ ಮಾರುಕಟ್ಟೆಯಲ್ಲಿ Realme C67 5G Smartphone ಗಳು ಎರಡು ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಎರಡು ರೂಪಾಂತರಗಳು ವಿಭಿನ್ನ ಬೆಲೆಯನ್ನು ಹೊಂದಿದೆ. Realme C67 5G Smartphone ನ ಮಾರುಕಟ್ಟೆಯ ಬೆಲೆ ಎಷ್ಟಿದೆ..? ಎನ್ನುವ ಬಗ್ಗೆ ವಿವರ ಇಲ್ಲಿದೆ.

Realme C67 5G Smartphone Price
Image Credit: Original Source

Realme C67 ಸ್ಮಾರ್ಟ್ ಫೋನ್ ನ ಮಾರುಕಟ್ಟೆಯ ಬೆಲೆ ಎಷ್ಟಿದೆ..?
Realme C67 ಸ್ಮಾರ್ಟ್ ಫೋನ್ 4GB RAM 128GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಕ್ಕೆ ರೂ. 13,999 ಆಗಿದ್ದು, 6GB RAM 128GB ಇಂಟರ್ನಲ್ ಸ್ಟೋರೇಜ್ ರೂಪಾಂತರಕ್ಕೆ ರೂ. 14,999 ಬೆಲೆಯನ್ನು ಕಂಪನಿ ನಿಗದಿಪಡಿಸಿದೆ. ಇನ್ನು ಸನ್ನಿ ಓಯಸಿಸ್ ಮತ್ತು ಡಾರ್ಕ್ ಪರ್ಪಲ್ ಬಣ್ಣದ ರೂಪಾಂತರಗಳಲ್ಲಿ ನೀವು Realme C67 ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.

Join Nadunudi News WhatsApp Group

ಇನ್ನು Realme C67 ಸ್ಮಾರ್ಟ್ ಫೋನ್ 6.72-ಇಂಚಿನ FullHD ಡಿಸ್ಪ್ಲೇಯನ್ನು ಹೊಂದಿದ್ದು, 120Hz ನ ರಿಫ್ರೆಶ್ ದರವನ್ನು ಮತ್ತು 680 nits ಗರಿಷ್ಠ ಹೊಳಪನ್ನು ನೀಡುತ್ತದೆ. ಸ್ಮಾರ್ಟ್‌ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100 SoC ನಿಂದ ಚಾಲಿತವಾಗಿದೆ ಮತ್ತು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಅನ್ನು ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದಾಗಿದೆ.

Realme C67 5G Smartphone Feature
Image Credit: Mymobileindia

5000 mAh ಬ್ಯಾಟರಿ, 128GB ಸ್ಟೋರೇಜ್ ಮತ್ತು 50 MP ಕ್ಯಾಮೆರಾ
Realme C67 5G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ನೊಂದಿಗೆ ಬರಲಿದ್ದು, 50MP ಪ್ರಾಥಮಿಕ ಸಂವೇದಕ ಮತ್ತು 2MP ಪೋರ್ಟ್ರೇಟ್ ಸಂವೇದಕವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ 5,000 mAh ಬ್ಯಾಟರಿಯನ್ನು ಹೊಂದಿದ್ದು ಅದು 33W SUPERVOOC ಚಾರ್ಜ್ ಅನ್ನು ಬೆಂಬಲಿಸುತ್ತದೆ. ಚಾರ್ಜಿಂಗ್‌ ಗಾಗಿ ಟೈಪ್-ಸಿ ಪೋರ್ಟ್ ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್‌ ನೊಂದಿಗೆ ಬರುತ್ತದೆ.

Join Nadunudi News WhatsApp Group