Cylinder Colour: LPG ಸಿಲಿಂಡರ್ ಬಣ್ಣ ಕೆಂಪು ಬಣ್ಣದಲ್ಲಿ ಯಾಕೆ ಇರುತ್ತದೆ…? ಸಾಕಷ್ಟು ಜನರಿಗೆ ತಿಳಿದಿಲ್ಲ

LPG Gas Cylinder ಕೆಂಪು ಬಣ್ಣ ಹೊಂದಿರಲು ಕಾರಣವೇನು...? ತಿಳಿಯಿರಿ

Reason Behind The Gas Cylinder Red Colour: ಪ್ರಸ್ತುತ ಹೆಚ್ಚಿನ ಜನರ ಮನೆಗಳಲ್ಲಿ Gas Cylinder ಅನ್ನು ಬಳಸಲಾಗುತ್ತದೆ. ಜನರು ಸುಲಭ ವಿಧಾನದ ಮೂಲಕ ಅಡುಗೆ ಮಾಡಲು Gas Cylinder ಅನ್ನು ಬಳಸುತ್ತಿದ್ದಾರೆ. ಇನ್ನು ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗಾಗಿ PM Ujjwala ಯೋಜನೆಯಡಿ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಿದೆ.

ಇದರಿಂದಾಗಿ ಗ್ಯಾಸ್ ಸಿಲಿಂಡರ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಇನ್ನು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿದ್ದರು ಕೂಡ ಅನೇಕರಿಗೆ Gas Cylinder ಗಳ ಬಗೆ ಹೆಚ್ಚಿನ ವಿಷ್ಯ ತಿಳಿದಿರುವುದಿಲ್ಲ. ಇದೀಗ ನಾವು ನಿಮಗೆ ಗ್ಯಾಸ್ ಸಿಲಿಂಡರ್ ಬಗ್ಗೆ ತಿಳಿದಿರದ ಒಂದು ಆಸಕ್ತಿದಾಯಕ ವಿಚಾರವನ್ನು ಹೇಳಲಿದ್ದೇವೆ.

Reason Behind The Gas Cylinder Red Colour
Image Credit: Informalnewz

LPG Gas Cylinder ಕೆಂಪು ಬಣ್ಣ ಹೊಂದಿರುವುದು ಏಕೆ..?
ಸಾಮಾನ್ಯವಾಗಿ ದಿನನಿತ್ಯ ಬಳಕೆಯ LPG Gas Cylinder ಬಣ್ಣವು ಕೆಂಪು ಬಣ್ಣವನ್ನು ಹೊಂದಿರುವುದು ಎಲ್ಲರಿಗು ತಿಳಿದೇ ಇದೆ. ಈ ಗ್ಯಾಸ್ ಸಿಲಿಂಡರ್ ಬಣ್ಣವು ಏಕೆ ಕೆಂಪು ಬಣ್ಣದಾಗಿರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಕೆಂಪು ಬಣ್ಣದಲ್ಲಿರಲು ಒಂದು ಕಾರಣವಿದೆ. “ಕೆಂಪು ಬಣ್ಣ ಎಂದರೆ ಅದು ಅಪಾಯದ ಸಂಕೇತವಾಗಿದೆ. ಗ್ಯಾಸ್ ಸಿಲಿಂಡರ್‌ ಗಳು ಅಪಾಯಕಾರಿ. ಎಲ್ಪಿಜಿ ಸಿಲಿಂಡರ್ ದಹನಕಾರಿ ಅನಿಲವನ್ನು ಹೊಂದಿರುತ್ತದೆ.

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕಂಪನಿಯು ಸಿಲಿಂಡರ್‌ ಗೆ ಕೆಂಪು ಬಣ್ಣವನ್ನು ನೀಡುತ್ತದೆ. ಕೆಂಪು ಬಣ್ಣವನ್ನು ಎಚ್ಚರಿಕೆಯ ಸಂಕೇತವಾಗಿ ಬಳಸಲಾಗುತ್ತದೆ. ಈ ಕಾರಣಕ್ಕಾಗಿ ಸಿಲಿಂಡರ್ ಅಪಾಯಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಗ್ರಾಹಕರ ಸುರಕ್ಷತೆಗಾಗಿ ಗ್ಯಾಸ್ ಸಿಲಿಂಡರ್‌ ಗಳಿಗೆ ಕೆಂಪು ಬಣ್ಣ ಬಳಿಯಲಾಗಿದೆ. ಕೆಂಪು ಅಪಾಯದ ಸಂಕೇತವಾಗಿದೆ, ಆದ್ದರಿಂದ ದೂರದಿಂದಲೂ ಕೆಂಪು ಬಣ್ಣವನ್ನು ಗುರುತಿಸುವುದು ಸುಲಭ”. ಸಿಲಿಂಡರ್ ಕೆಂಪು ಬಣ್ಣವನ್ನು ಬಳಿಯಲು ಇದು ಕಾರಣವೆಂದು ಹೇಳಲಾಗುತ್ತದೆ.

What is the reason why LPG Gas Cylinder has red color?
Image Credit: Tv9 Marathi

ಗ್ಯಾಸ್ ಸಿಲಿಂಡರ್ ಗೋಳಾಕಾರದಲ್ಲಿರಲು ಕಾರಣವೇನು…?
ಸಿಲಿಂಡರ್ ಗೋಳಾಕಾರದಲ್ಲಿರಲು ಮುಖ್ಯ ಕಾರಣವೆಂದರೆ ಅದರೊಳಗಿನ ಅನಿಲದ ಮೇಲೆ ರಚಿಸಲಾದ ಒತ್ತಡ. ದುಂಡಗಿನ ಆಕಾರವು ಸಿಲಿಂಡರ್ ನಲ್ಲಿನ ಅನಿಲವನ್ನು ಒತ್ತಡ ಮತ್ತು ಸಂಕುಚಿತಗೊಳಿಸುವುದನ್ನು ಸುಲಭಗೊಳಿಸುತ್ತದೆ. ಅಲ್ಲದೆ ದುಂಡಾಕಾರವು ಸಿಲಿಂಡರ್ ಅನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಸಾಗಿಸಲು ಸುಲಭಗೊಳಿಸುತ್ತದೆ. ಈ ಕಾರಣಗಳಿಗಾಗಿ ಸಿಲಿಂಡರ್ ಆಕಾರವು ಗೋಳಾಕಾರವಾಗಿರುತ್ತದೆ.

Join Nadunudi News WhatsApp Group

Join Nadunudi News WhatsApp Group