Electricity Bill Hike: ರಾಜ್ಯದಲ್ಲಿ ವಿದ್ಯುತ್ ದರ ದಿಡೀರನೆ ಏರಿಕೆ ಆಗಲು ಕಾರಣಗಳು ಏನು, ನಿಮಗಿದು ತಿಳಿದಿರಲಿ.

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಆಗುತ್ತಿರುವುದು ಏಕೆ ಅನ್ನುವುದರ ಬಗ್ಗೆ ತಿಳಿದುಕೊಳ್ಳಿ.

Reason For Electricity Bill Hike: ರಾಜ್ಯದ ಮಹಿಳೆಯರು ಈಗಾಗಲೇ ಶಕ್ತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇನ್ನು ರಾಜ್ಯ ಸರ್ಕಾರ ನಾಲ್ಕು ಯೋಜನೆಗಳ ಅನುಷ್ಠಾನದ ಕುರಿತು ಸಿದ್ಧತೆ ನಡೆಸುತ್ತಿದೆ.

ಇನ್ನು ಗೃಹ ಜ್ಯೋತಿ (Gruha Jyothi) ಯೋಜನೆಯ ಕುರಿತು ಸಾಕಷ್ಟು ಅಪ್ಡೇಟ್ ಗಳು ಹರಡುತ್ತಿದೆ. ಉಚಿತ ವಿದ್ಯುತ್ ಬೆನ್ನಲ್ಲೇ ಈಗಾಗಲೇ ಜನತೆ ವಿದ್ಯುತ್ ದರದ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. 

Find out what is the reason behind the high electricity bill in the state.
Image Credit: currentaffairs.adda247

ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ
ಏಪ್ರಿಲ್ ತಿಂಗಳಿನಲ್ಲೇ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಳ ಮಾಡಿ ಕೆ ಇ ಆರ್ ಸಿ ಆದೇಶ ಹೊರಡಿಸಿತ್ತು. ಆದರೆ ಕರ್ನಾಟಕ ರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಈ ಆದೇಶ ತಡೆ ಹಿಡಿಯಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮುಂದಿನ ತಿಂಗಳಿನಿಂದಲೇ ಹೊಸ ಪರಿಷ್ಕೃತ ದರ ಜಾರಿ ಆಗಲಿದೆ. ಕಾಂಗ್ರೆಸ್ ಗೃಹಜ್ಯೋತಿಯ ಲಾಭ ಪಡೆಯುವ ಮುನ್ನವೇ ವಿದ್ಯುತ್ ಬಿಲ್ ಡಬಲ್ ಬಂದಿರುವುದರಿಂದ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ.

ವಿದ್ಯುತ್ ದರ ಹೆಚ್ಚಳಕ್ಕೆ ಕಾರಣ
ಎರಡು ತಿಂಗಳ ಹೆಚ್ಚುವರಿ ಬಿಲ್ ಜೂನ್ ನಲ್ಲಿ ಸೇರಿಸಲಾಗಿದೆ. ಈ ಮೊದಲು ನಾಲ್ಕು ಸ್ಲಾಬ್ ಗಳಿದ್ದವು. ಈ ನಾಲ್ಕು ಸ್ಲಾಬ್ ಗಳನ್ನೂ ಕೆಇಆರ್ ಸಿ ಎರಡು ಸ್ಲಾಬ್ ಗಳನ್ನಾಗಿ ಬದಲಿಸಿದೆ. ಹಳೆ ಸ್ಲಾಬ್ ಅನ್ವಯ 0 ದಿಂದ 50 ಯುನಿಟ್ ರೂ. 4.15 ,50 ರಿಂದ 100 ವರೆಗೆ ₹ 5.60 , 100 ರಿಂದ 200 ಯುನಿಟ್ ವರೆಗೆ ₹ 7.15 ಹಾಗೂ 250 ಯುನಿಟ್ ಗೂ ಹೆಚ್ಚು ಇದ್ದರೆ ₹8 .20 ನಿಗದಿಪಡಿಸಲಾಗಿದೆ.

Our household electricity bill is fixed based on the electricity we use.
Image Credit: businesstoday

ಇನ್ನು ಹೊಸ ಸ್ಲಾಬ್ ಅನ್ವಯ 0 ರಿಂದ 100 ಯುನಿಟ್ ₹4.75 , 101 ಯುನಿಟ್ ಗೆ ಮೇಲ್ಪಟ್ಟು ಎಷ್ಟೇ ಬಳಕೆ ಮಾಡಿದರು ಪ್ರತಿ ಯುನಿಟ್ ಗೆ ₹7 ನಿಗದಿಪಡಿಸಲಾಗಿದೆ. ಎಫ್ ಪಿಪಿಸಿಎ ಅನ್ನು ಡಿಸೇಂಬರ್ ನಿಂದಲೇ ವಸೂಲಿ ಮಾಡುವಂತೆ ಎಸ್ಕಾಂಗಳಿಗೆ ಸೂಚನೆ ನೀಡಲಾಗಿದೆ. ವಿಧಾನಸಭಾ ಚುನಾವಣಾ ಕಾರಣ ಇದು ಮುಂದೂಡಲ್ಪಟ್ಟಿದ್ದು ಮಾರ್ಚ್ ನಿಂದ ದರವನ್ನು ಹೆಚ್ಚಿಸಲಾಗಿದೆ. ಈ ಕಾರಣದಿಂದ ಮೂರು ತಿಂಗಳ ಹೆಚ್ಚುವರಿ ಶುಲ್ಕ ಜೂನ್ ತಿಂಗಳಿನಲ್ಲಿ ಸೇರಿಕೊಂಡಿದೆ.

Join Nadunudi News WhatsApp Group

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
*ಗೂಗಲ್ ಪ್ಲೇ ಸ್ಟೋರ್ ನಲಿ ಸೇವಾ ಸಿಂಧು ಪೋರ್ಟಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

*ಬಾಡಿಗೆದಾರರು ಕನಿಷ್ಠ ಮೂರು ದಾಖಲೆಗಳನ್ನು ನೀಡಬೇಕು.

Know the reasons behind daily electricity bill increase in the state
Image Credit: thenewsminute

*ಆಧಾರ್ ಕಾರ್ಡು, ಬಾಡಿಗೆ ಕರಾರು ಪತ್ರ ಹಾಗೂ ಪ್ರತಿ ತಿಂಗಳು ಕಟ್ಟುವ ವಿದ್ಯುತ್ ಸ್ಥಾವರದ ಐಡಿ ನಂಬರ್ ಇರುವ ಬಿಲ್ ಅನ್ನು ನೀಡಬೇಕು.

*ಅಪ್ಲಿಕೇಶನ್ ನಲ್ಲಿ ಲಾಗಿನ್ opt in ಆಯ್ಕೆ ಮಾಡಿ ಧಾಖಲೆಗಳನ್ನು ಅಪ್ಲೋಡ್ ಮಾಡಬೇಕು.

*ಇನ್ನು ಬಾಡಿಗೆದಾರರು ಮನೆ ಬದಲಾಯಿಸಿದ ಪ್ರತಿ ಸಾರಿ opt in ಲಾಗ್ ಔಟ್ ಮಾಡಿ ಮತ್ತೆ ಹೊಸದಾಗಿ ಲಾಗಿನ್ ಮಾಡಬೇಕು.

Join Nadunudi News WhatsApp Group