Recover Deleted Contacts: ಡಿಲೀಟ್ ಆದ ಕಾಂಟೆಕ್ಟ್ ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಸಿಂಪಲ್ ಟ್ರಿಕ್

ಕಾಂಟೆಕ್ಟ್ ನಂಬರ್ ಡಿಲೀಟ್ ಆದರೆ ಸುಲಭವಾಗಿ ಪಡೆಯಬಹುದಾಗಿದೆ

Recover Deleted Contacts: ಕೆಲವು ಸಮಯಗಳ ಹಿಂದೆ ಫೋನ್ ನಂಬರ್ ಗಳನ್ನೂ ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಂಡು ಬೇಕಾದಾಗ ಬಳಸಿಕೊಳ್ಳುತ್ತಿದ್ದೆವು, ಆದ್ರೆ ಈಗ ಜನರು ತಮ್ಮ ಫೋನ್‌ಗಳಲ್ಲಿ ಕಾಂಟೆಕ್ಟ್ ಅನ್ನು ಸೇವ್ ಮಾಡಿಟ್ಟುಕೊಳ್ಳುತ್ತಾರೆ.

ಯಾರಿಗಾದರೂ ಕರೆ ಮಾಡಬೇಕು ಎಂದಿದ್ದರೆ, ಆ ನಂಬರ್ ಅನ್ನು ಡಯಲ್ ಮಾಡುವ ಬದಲು ಕಾಂಟೆಕ್ಟ್ ಲಿಸ್ಟ್ ​ಗೆ ಹೋಗಿ ಕರೆ ಮಾಡುತ್ತೇವೆ. ಸಾಮಾನ್ಯವಾಗಿ ಮೊಬೈಲ್ ನಲ್ಲಿರುವ ಎಲ್ಲ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್​ನಲ್ಲಿ ಲಭ್ಯವಿರುತ್ತವೆ. ಆದರೆ ಎಲ್ಲ ಕಾಂಟೆಕ್ಟ್ ನಂಬರ್ ಡಿಲೀಟ್ ಆದರೆ ಏನು ಮಾಡಬೇಕು ಎಂಬ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ಹೀಗಿದೆ.

Recover deleted Contacts
Image Credit: Original Source

ಕಾಂಟೆಕ್ಟ್ ನಂಬರ್ ಡಿಲೀಟ್ ಆದರೆ ಸುಲಭವಾಗಿ ಪಡೆಯಬಹುದಾಗಿದೆ

ನಮ್ಮ ಮೊಬೈಲ್ ನಲ್ಲಿ ಸೇವ್ ಆಗಿರುವ ಎಲ್ಲಾ ಕಾಂಟೆಕ್ಟ್ ನಂಬರ್ ಡಿಲೀಟ್ ಆದರೆ ಚಿಂತಿಸುವ ಅವಶ್ಯಕತೆ ಇಲ್ಲ, ಕೆಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಎಲ್ಲಾ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್​ನಲ್ಲಿ ಲಭ್ಯವಿರುತ್ತವೆ. ನೀವು ಗೂಗಲ್ ಖಾತೆಯ ಮೂಲಕ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ಅನ್ನು ಮರಳಿ ಪಡೆಯಬಹುದು. ಇದಕ್ಕಾಗಿ ಈ ಹಂತಗಳನ್ನು ಅನುಸರಿಸಬೇಕು.

ಕಾಂಟೆಕ್ಟ್ ನಂಬರ್ ಡಿಲೀಟ್ ಆದರೆ ಹೀಗೆ ಮಾಡಿ

Join Nadunudi News WhatsApp Group

ನಿಮ್ಮ ಫೋನ್‌ನಲ್ಲಿ ಗೂಗಲ್ ಕಾಂಟೆಕ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಫೋನ್ ನಂಬರ್ ಸೇವ್ ಮಾಡಲು Google ID ಯೊಂದಿಗೆ ಈ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ.ಈಗ ಕೆಳಭಾಗದಲ್ಲಿರುವ ಫಿಕ್ಸ್ & ಮ್ಯಾನೇಜ್ ಐಕಾನ್ ಮೇಲೆ ಟ್ಯಾಪ್ ಮಾಡಿ.ಈಗ ನೀವು ಕಾಂಟೆಕ್ಟ್ ನಂಬರ್ ಆಮದು ಮಾಡಲು, ರಫ್ತು ಮಾಡಲು ಮತ್ತು ಮರುಸ್ಥಾಪಿಸಲು ಆಯ್ಕೆಗಳನ್ನು ಪಡೆಯುತ್ತೀರಿ. ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ. ಈಗ ಡಿಲೀಟ್ ಆದ ಎಲ್ಲಾ ಕಾಂಟೆಕ್ಟ್ ಫೋನ್‌ಗೆ ಹಿಂತಿರುಗುತ್ತವೆ. ಫೋನ್ ಬ್ಯಾಕಪ್‌ನಿಂದ ಮೊಬೈಲ್ ನಂಬರ್ ಮರಳಿ ಪಡೆಯಬಹುದು.

Restore Deleted Contacts on Your Phone
Image Credit: Cellularnews

ಫೋನ್ ಅನ್ನು ಬ್ಯಾಕಪ್ ಮಾಡಿದರೆ, ಡಿಲೀಟ್ ಆದ ಸಂಪರ್ಕ ಸಂಖ್ಯೆಗಳನ್ನು ಮರುಪಡೆಯಬಹುದು

ಮೊದಲು ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ. ಬ್ಯಾಕಪ್ ಮತ್ತು ರಿ-ಸ್ಟೋರ್ ಆಯ್ಕೆಗೆ ಹೋಗಿ. ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ. ಕಾಂಟೆಕ್ಸ್ ಆಯ್ಕೆಯನ್ನು ಆರಿಸಿ. ನಿಮ್ಮ ಡಿಲೀಟ್ ಆದ ಕಾಂಟೆಕ್ಟ್ ನಂಬರ್ ರಿ-ಸ್ಟೋರ್ ಮಾಡಲು ಬಯಸುತ್ತೀರಾ ಅಥವಾ ಬೇಡವೇ ಎಂದು ಕೇಳುವ ಸಂದೇಶವನ್ನು ನೀವು ನೋಡಬಹುದು. ನೀವು ಹೌದು ಎಂದು ಬಯಸಿದರೆ, ನಂತರ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ ನಿಮ್ಮ ನಂಬರ್ ಅನ್ನು ಮರಳಿ ಪಡೆಯಿರಿ.

Join Nadunudi News WhatsApp Group