Redmi Watch 4: 20 ದಿನಗಳ ಕಾಲ ಚಾರ್ಜ್ ಮಾಡುವ ಅಗತ್ಯ ಇಲ್ಲ, ಅಗ್ಗದ ಬೆಲೆ ಆಕರ್ಷಕ ಸ್ಮಾರ್ಟ್ ವಾಚ್ ಲಾಂಚ್ ಮಾಡಿದ Redmi.

ಅಗ್ಗದ ಬೆಲೆ ಆಕರ್ಷಕ ಸ್ಮಾರ್ಟ್ ವಾಚ್ ಲಾಂಚ್ ಮಾಡಿದ Redmi

Redmi Watch 4 Smart Watch Launch: ಟೆಕ್ ವಲಯದಲ್ಲಿ Redmi ಬಾರಿ ಜನಪ್ರಿಯತೆ ಪಡೆದುಕೊಂಡಿದೆ. ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತ Redmi ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ.

ಸದ್ಯ ರೆಡ್ಮಿ ಕಂಪನಿಯು ಟ್ರೆಂಡ್ ಗೆ ತಕ್ಕಂತನೇ Smart Watch ನ ಮ್ಯಾನುಫ್ಯಾಕ್ಚರ್ ಮಾಡಲು ಮುಂದಾಗಿದೆ. ಇನ್ನು ರೆಡ್ಮಿ ಕಂಪನಿಯಿಂದ ಸ್ಮಾರ್ಟ್ ಫೋನ್ ಗಳ ಜೊತೆಗೆ ಸ್ಮಾರ್ಟ್ ವಾಚ್ ಕೂಡ ಪರಿಚಹಾಯವಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ರೆಡ್ಮಿ ಕಂಪನಿಯ ಈ ನೂತನ ಮಾದರಿಯ ಸ್ಮಾರ್ಟ್ ವಾಚ್ ಬಾರಿ ಸದ್ದು ಮಾಡುತ್ತಿದೆ.

Redmi Watch 4 Smart Watch Launch
Image Credit: Gadgets360

Redmi Watch 4
ಸದ್ಯ ಮಾರುಕಟ್ಟೆಯಲ್ಲಿ Redmi Watch 4 ಎಂಟ್ರಿ ಕೊಟ್ಟಿದೆ. ರೆಡ್ಮಿ ಕಂಪನಿಯ ನೂತನ ಸ್ಮಾರ್ಟ್ ವಾಚ್ ನ ವಿಶೇಷವೆಂದರೆ ಇದನ್ನು ಒಮ್ಮೆ ಚಾರ್ಜ್ ಮಾಡಿಕೊಂಡರೆ ನೀವು 20 ದಿನಗಳವರೆಗೆ ಬಳಸಿಕೊಳ್ಳಬಹುದು. ಈ ಸ್ಮಾರ್ಟ್ ವಾಚ್ ಹೈಪರ್ OS ನಲ್ಲಿ ಕಾರ್ಯನಿರ್ವಹಿಸಲಿದೆ. ಈ ವಾಚ್ ನಲ್ಲಿ 150 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ಸ್ ಗಳಿಗೆ ಪ್ರವೇಶವನ್ನು ಪಡೆಯಬಹುದು. ಇನ್ನು 470mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಹೆಚ್ಚು ದಿನದ ಬ್ಯಾಟರಿ ಬಾಳಿಕೆ ಬರಲಿದೆ.

Redmi Watch 4 ಸ್ಮಾರ್ಟ್ ವಾಚ್ ವಿಶೇಷತೆ
ಇನ್ನು Redmi Watch 4 ಸ್ಮಾರ್ಟ್ ವಾಚ್ 1.97 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 390×450 ಪಿಕ್ಸೆಲ್ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 600 ನಿಟ್‌ ಗಳ ಗರಿಷ್ಠ ಪ್ರಕಾಶಮಾನ ಮಟ್ಟವನ್ನು ನೀಡುತ್ತದೆ. ಇದಲ್ಲದೆ ಈ ಸ್ಮಾರ್ಟ್ ವಾಚ್ 5ATM ಜಲನಿರೋಧಕ ವ್ಯವಸ್ಥೆಯನ್ನು ಹೊಂದಿದೆ. ನೀವು ರೆಡ್ಮಿ ವಾಚ್ 4 ಸ್ಮಾರ್ಟ್ ವಾಚ್ ನಲ್ಲಿ Accelerometer, gyro, geomagnetic, ambient light and optical heartbeat sensors, blood oxygen tracker ಸೇರಿದಂತೆ ಹೆಚ್ಚಿನ ಫೀಚರ್ ಅನ್ನು ನೋಡಬಹುದು.

Redmi Watch 4 Smart Watch Price
Image Credit: Gizmochina

ಭರ್ಜರಿ 20 ದಿನದ ಬ್ಯಾಟರಿ ಬ್ಯಾಕಪ್ ನೀಡುವ ಈ ಸ್ಮಾರ್ಟ್ ವಾಚ್ ನ ಬೆಲೆ ಎಷ್ಟು..?
ಇನ್ನು Redmi Watch 4 ಸ್ಮಾರ್ಟ್ ವಾಚ್ ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟು ಭಾರತೀಯರ ಕೈಯಲ್ಲಿ ರಾರಾಜಿಸಲಿದೆ. ಇನ್ನು Redmi Watch 4 ಸ್ಮಾರ್ಟ್ ವಾಚ್ ನ ಚೀನಾ ಮಾರುಕಟ್ಟೆ ಬೆಲೆ CNY 499 ಆಗಿದೆ. ಅಂದರೆ ಭಾರತೀಯ ರೂ. ಗಳಲ್ಲಿ ಸರಿಸುಮಾರು 5957 ರೂ. ಆಗಿದೆ. ಕಪ್ಪು ಮತ್ತು ಸಿಲ್ವರ್ ಸ್ನೋ ವೈಟ್ ಬಣ್ಣಗಳ ಆಯ್ಕೆಯಲ್ಲಿ ನೀವು ರೆಡ್ಮಿ ವಾಚ್ 4 ಅನ್ನು ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group