Jio Annual Plan: 365 ದಿನಗಳ ಕಾಲ ಅನಿಯಮಿತ ಕರೆ ಮತ್ತು ಡೇಟಾ, Jio ಗ್ರಾಹಕರಿಗೆ ಇನ್ನೊಂದು ಪ್ಲ್ಯಾನ್

ಜಿಯೋ ಬಳಕೆದಾರರಿಗಾಗಿ ಕಡಿಮೆ ಬೆಲೆಗೆ ವಾರ್ಷಿಕ ರಿಚಾರ್ಜ್ ಪ್ಲಾನ್ ಲಭ್ಯ

Reliance Jio 4498 Annual Recharge Plan: ಭಾರತದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡುತ್ತಿರುತ್ತದೆ. ಪ್ರಸ್ತುತ ಜಿಯೋದ ಗ್ರಾಹಕರು ಮಾಸಿಕ, ತ್ರೈಮಾಸಿಕ, ವಾರ್ಷಿಕ ರಿಚಾರ್ಜ್ ಪ್ಲಾನ್ ಗಳ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಇದೀಗ ಜಿಯೋ ತನ್ನ ಗ್ರಾಹಕರಿಗೆ ಮಾಸಿಕ ರೀಚಾರ್ಜ್‌ನಿಂದ ಬೇಸರಗೊಂಡಿರುವವರಿಗೆ ಬೆಸ್ಟ್ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯು 12 ತಿಂಗಳ ಅಂದರೆ ಪೂರ್ತಿ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದೀಗ ನಾವು ಈ ರಿಚಾರ್ಜ್ ಪ್ಲಾನ್ ನ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.

Reliance Jio 4498 Annual Recharge Plan
Image Credit: Times Now News

ಜಿಯೋ ಬಳಕೆದಾರರಿಗಾಗಿ ಕಡಿಮೆ ಬೆಲೆಗೆ ವಾರ್ಷಿಕ ರಿಚಾರ್ಜ್ ಪ್ಲಾನ್ ಲಭ್ಯ
ಈ ಯೋಜನೆ 12 ತಿಂಗಳು ಅಂದರೆ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. 4498 ವಾರ್ಷಿಕ ರಿಚಾರ್ಜ್ ಪ್ಲಾನ್ ನಲ್ಲಿ 78GB ಡೇಟಾವನ್ನು ಬಳಕೆಮಾಡಬಹುದಾಗಿದೆ. 12 ತಿಂಗಳ ವರೆಗೆ 78GB ಡೇಟಾವನ್ನು ಪಡೆಯಬಹುದು. ಈ ಯೋಜನೆಯಲ್ಲಿ 78GB ಡೇಟಾದ ಜೊತೆಗೆ ಗ್ರಾಹಕರು 14 OTT ಪ್ಲಾಟ್ ಫಾರ್ಮ್ ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಜಿಯೋದ ಈ ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ನೀಡಲಾಗುತ್ತದೆ. ಅಂದರೆ ನೀವು Jio ನ 5G ನೆಟ್‌ ವರ್ಕ್‌ ನಲ್ಲಿದ್ದರೆ ಈ ಯೋಜನೆಯೊಂದಿಗೆ ನೀವು ಅನಿಯಮಿತ 5G ಡೇಟಾವನ್ನು ಬಳಸಬಹುದು. ಜಿಯೋದ ಈ ಯೋಜನೆಯಲ್ಲಿ ಗ್ರಾಹಕರಿಗೆ 78GB ಉಚಿತ ಡೇಟಾವನ್ನು ಸಹ ನೀಡಲಾಗುತ್ತದೆ. MyJio ಅಪ್ಲಿಕೇಶನ್‌ ನಲ್ಲಿ ಗ್ರಾಹಕರು 6GB ಮಾದರಿಗೆ 13 ವೋಚರ್‌ ಗಳನ್ನು ಪಡೆಯುತ್ತಾರೆ. ಉಚಿತ ಡೇಟಾವನ್ನು ಪಡೆಯಲು ಅದನ್ನು ರಿಡೀಮ್ ಮಾಡಿಕೊಳ್ಳಬಹುದು.

Reliance Jio Annual Recharge Plan
Image Credit: Telecomtalk

14 OTT ಅಪ್ಲಿಕೇಶನ್ ಫ್ರೀ
ಜಿಯೋದ ವಾರ್ಷಿಕ ರೀಚಾರ್ಜ್ ಪ್ಯಾಕ್ ಅನಿಯಮಿತ ಧ್ವನಿ ಕರೆಗಳೊಂದಿಗೆ ಬರುತ್ತದೆ. ಗ್ರಾಹಕರು ದೇಶಾದ್ಯಂತ ಯಾವುದೇ ನೆಟ್‌ ವರ್ಕ್‌ ಗೆ ಹಣವನ್ನು ಪಾವತಿಸದೆ ಅನಿಯಮಿತ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು. ಈ ರೀಚಾರ್ಜ್ ಯೋಜನೆಯು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಅಂದರೆ ಗ್ರಾಹಕರು ಈ ಯೋಜನೆಯಲ್ಲಿ ಒಟ್ಟು 730GB ಡೇಟಾವನ್ನು ಕಳೆಯಬಹುದು.

Join Nadunudi News WhatsApp Group

ಪ್ರತಿದಿನ ಲಭ್ಯವಿರುವ ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವನ್ನು 64Kbps ಕಡಿಮೆಗೊಳಿಸಲಾಗುತ್ತದೆ. ಇದರೊಂದಿಗೆ ಪ್ರೈಮ್ ವಿಡಿಯೋ ಮೊಬೈಲ್, ಡಿಸ್ನಿ ಹಾಟ್‌ ಸ್ಟಾರ್, ಸೋನಿ LIV, ZEE5, JioCinema Premium, EpicOn, Lionsgate Play, Discovery, Docube, Jio TV, Jio Cloud, Sun NXT, Hoichoi, Chaupal, Planet Marathi, Kancha Lanka, ಕಂಟೆಂಟ್ ಸೇರಿದಂತೆ 14 OTT ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು.

Jio Annual Plan
Image Credit: Informalnewz

Join Nadunudi News WhatsApp Group