Renault EV: ಸಿಂಗಲ್ ಚಾರ್ಜ್ ನಲ್ಲಿ 400 Km ಮೈಲೇಜ್ ಕೊಡುತ್ತೆ ಈ ಕಾರ್, ಬೇಡಿಕೆ ಕಳೆದುಕೊಳ್ಳುವ ಭೀತಿಯಲ್ಲಿ ಸ್ವಿಫ್ಟ್ ಕಾರ್

ಬಿಡುಗಡೆಗೆ ಸಜ್ಜಾಗಿದೆ ಭರ್ಜರಿ ಮೈಲೇಜ್ ನೀಡುವ ರೆನಾಲ್ಟ್ ಇವಿ 5 ಕಾರು

Renault 5 Electric Car: ದೇಶಿಯ ಮಾರುಕಟ್ಟೆಯಲ್ಲಿ ರೆನಾಲ್ಟ್ (Renault) ಕಂಪನಿಯ ಕಾರು ಬಹಳ ಜನಪ್ರಿಯತೆಯನ್ನು ಪಡೆದಿದೆ. ಈಗ ಈ ಕಂಪನಿಯ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಲ್ಪಡಲು ಸಿದ್ಧವಾಗಿದೆ. ಜಾಗತಿಕ ಮಾರುಕಟ್ಟೆಗಾಗಿ ತನ್ನ ಹೊಸ ಇವಿ 5 ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆಗೆ ಸಜ್ಜಾಗಿದೆ.

ಹೊಸ ಇವಿ ಕಾರು ಬಿಡುಗಡೆಗೂ ಮುನ್ನ ಉತ್ಪಾದನಾ ಮಾದರಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಇದು 2024 ರ ಫೆಬ್ರವರಿ 26ರಂದು ನಡೆಯಲಿರುವ ಜಿನೆವಾ ಮೋಟಾರ್ ಶೋನಲ್ಲಿ ಅನಾವರಣಗೊಳ್ಳಲಿದೆ ಎನ್ನಲಾಗಿದೆ.

Renault 5 Electric Car
Image Credit: e-vehicleinfo

ರೆನಾಲ್ಟ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆಗೆ ಸಿದ್ದ

ರೆನಾಲ್ಟ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರು ದೇಶದ ಮಾರುಕಟ್ಟೆಗೆ ಬರಲು ತಯಾರಾಗಿದ್ದು, ಈ ಹೊಸ ಇವಿ 5 ಎಲೆಕ್ಟ್ರಿಕ್ ಕಾರು ಮಾದರಿಯು ರೆನಾಲ್ಟ್ ಕಂಪನಿಯ ಎಎಂಪಿಆರ್ ಸಣ್ಣ ಕಾರುಗಳ ಉತ್ಪಾದನಾ ಪ್ಲ್ಯಾಟ್ ಫಾರ್ಮ ಆಧರಿಸಿ ಅಭಿವೃದ್ದಿಗೊಳ್ಳುತ್ತಿದ್ದು, ಇದು 52 ಕೆವಿಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ಜೋಯ್ ಮತ್ತು ಕ್ಲಿಯೊ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲಿನ ಹಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಜೋಯ್ ಮತ್ತು ಕ್ಲಿಯೊ ಎಲೆಕ್ಟ್ರಿಕ್ ಕಾರುಗಳಂತೆ ಪವರ್ ಟ್ರೈನ್ ಪಡೆದುಕೊಳ್ಳಲಿರುವ ಹೊಸ ಇವಿ5 ಕಾರು ಮಾದರಿಯು 135 ಹಾರ್ಸ್ ಪವರ್ ಉತ್ಪದನೆಯೊಂದಿಗೆ ರೆಟ್ರೋ ವಿನ್ಯಾಸ ಹೊಂದಿದೆ.

ರೆನಾಲ್ಟ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರು ಹಲವು ಫೀಚರ್ಸ್ ಅನ್ನು ಹೊಂದಿದೆ

Join Nadunudi News WhatsApp Group

ಹೊಸ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಬಿ ಸೆಗ್ಮೆಂಟ್ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಹಲವು ಪ್ರಿಮಿಯಂ ಫೀಚರ್ಸ್ ನೀಡುತ್ತಿದ್ದು, ಇದು ಸಣ್ಣ ಗಾತ್ರದಲ್ಲೂ ಆರಾಮದಾಯಕ ಡ್ರೈವಿಂಗ್ ಒದಗಿಸುವ ಮೂಲಕ ದೂರದ ಪ್ರಯಾಣದ ಆಯಾಸವನ್ನು ಕಡಿಮೆ ಮಾಡಲಿದೆ. ಈ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಪ್ರತಿ ಚಾರ್ಜ್ ಗೆ 380 ರಿಂದ 400 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ. ಹಾಗೆಯೇ ಸುರಕ್ಷತೆಯಲ್ಲೂ ಗಮನಸೆಳೆಯಲಿರುವ ಹೊಸ ಇವಿ ಕಾರು ಮಾದರಿಯು ಕಡಿಮೆ ಬೆಲೆಯೊಂದಿಗೆ ಪೆಟ್ರೋಲ್ ಕಾರು ಮಾದರಿಗಳಿಗೆ ಅತ್ಯುತ್ತಮ ಪರ್ಯಾಯ ಆಯ್ಕೆಯಾಗಲಿದೆ.

Renault 5 Electric Car Price
Image Credit: Carsguide

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ

ಭಾರತದಲ್ಲಿ ರೆನಾಲ್ಟ್ ಕಂಪನಿಯು ಶೀಘ್ರದಲ್ಲಿ ಹೊಸ ತಲೆಮಾರಿನ ಡಸ್ಟರ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಡಸ್ಟರ್ ಎಸ್ ಯುವಿ ಬಿಡುಗಡೆಯ ನಂತರವಷ್ಟೇ ಇವಿ 5 ಕಾರು ಮಾದರಿಯನ್ನು ಬಿಡುಗಡೆ ಮಾಡುವ ನೀರಿಕ್ಷೆಗಳಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಾರು ಕಂಪನಿಗಳು ಈಗಾಗಲೇ ಹಲವಾರು ಇವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ರೆನಾಲ್ಟ್ ಹೊಸ ಇವಿ 5 ಕಾರುಗಳು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group