Renault Discount: ಹೊಸ ವರ್ಷಕ್ಕೆ ಕಾರ್ ಖರೀದಿಸುವ ಆಸೆ ಇದ್ದವರಿಗೆ ಬಂಪರ್ ಆಫರ್, ಈ ಕಾರಿನ ಮೇಲೆ 65000 ರೂ ಡಿಸ್ಕೌಂಟ್

ರೆನಾಲ್ಟ್ ಈ ಮಾದರಿಯ ಕಾರ್ ಖರೀದಿಗೆ 65,000 ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.

Renault Car Discount Offer: ಭಾರತೀಯ ಆಟೋ ವಲಯದಲ್ಲಿ ಕಾರ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜನರು ಹೆಚ್ಚು ಹೆಚ್ಚು ಕಾರ್ ಗಳನ್ನೂ ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ. ಕುಟುಂಬದ ಪ್ರಯಾಣಕ್ಕೆ ಕಾರ್ ಹೆಚ್ಚು ಉತ್ತಮವಾಗಿರುತ್ತದೆ. ಇನ್ನು ಮಾರುಕಟ್ಟೆಯ್ಲಲಿ ವಿವಿಧ ಕಾರ್ ತಯಾರಕ ಕಂಪನಿಗಳು ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. ಸದ್ಯ Renault ಕಂಪನಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು.

ಇದೀಗ ನೀವು ಹೊಸ ಕಾರ್ ಖರೀದಿಯ ಬಗ್ಗೆ ಯೋಜನೆ ಹೂಡಿದ್ದಾರೆ ನಿಮಗೀಗ ರೆನಾಲ್ಟ್ ಕಂಪನಿ ಭರ್ಜರಿ ಆಫರ್ ಅನ್ನು ನೀಡುತ್ತಿದೆ. ನೀವು ಕಂಪನಿ ನೀಡುತ್ತಿರುವ ಆಫರ್ ಅನ್ನು ಬಳಸಿಕೊಂಡು ಅಗ್ಗದ ಬೆಲೆಯಲ್ಲಿ ಕಾರ್ ಗಳನ್ನೂ ಖರೀದಿಸಬಹುದಾಗಿದೆ. ಇದೀಗ ನಾವು Renault ಕಂಪನಿ ತನ್ನ ಯಾವ ಯಾವ ಮಾದರಿಯ ಖರೀದಿಗೆ ಯಾವ ಯಾವ ರೀತಿಯ ಆಫರ್ ಅನ್ನು ನೀಡಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Renault Kwid Offer
Image Credit: Original Source

ರೆನಾಲ್ಟ್ ಈ ಕಾರುಗಳ ಖರೀದಿಗೆ 65000 ವರೆಗೆ ರಿಯಾಯಿತಿ ಲಭ್ಯ
•Renault Kwid Offer
ಮಾರುಕಟ್ಟೆಯಲ್ಲಿ Renault Kwid ರೂ. 4 70 ಲಕ್ಷದಿಂದ ರೂ. 6 .45 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಕಾರ್ ಖರೀದಿಯಲ್ಲಿ ನೀವು ರೂ.50,000 ವರೆಗೆ ರಿಯಾಯಿತಿಯನ್ನು ಪಡೆಯುವುದರ ಜೊತೆಗೆ ರೂ.20,000 ನಗದು ರಿಯಾಯಿತಿ, ರೂ.20,000 ವಿನಿಮಯ ಬೋನಸ್ ಮತ್ತು ರೂ.10,000 ಲಾಯಲ್ಟಿ ಬೋನಸ್ ರಿಯಾಯಿತಿಯನ್ನು ಪಡೆಯಬಹುದು.

Renault Triber Offer
Image Credit: Carwale

•Renault Triber Offer
ಜನಪ್ರಿಯ ರೆನಾಲ್ಟ್ ಟ್ರೈಬರ್ ಸಹ ಆಕರ್ಷಕ ರಿಯಾಯಿತಿಯನ್ನು ಒಳಗೊಂಡಿದೆ. ನೀವು ರೂ.50,000 ವರೆಗಿನ ಒಟ್ಟು ರಿಯಾಯಿತಿ ಪ್ರಯೋಜನವನ್ನು ಪಡೆಯಬಹುದು. ಇದರ ಜೊತೆಗೆ ರೂ.20,000 ನಗದು ರಿಯಾಯಿತಿ, ರೂ.20,000 ವಿನಿಮಯ ಬೋನಸ್ ಮತ್ತು ರೂ.10,000 ಲಾಯಲ್ಟಿ ಬೋನಸ್ ಅನ್ನು ಒಳಗೊಂಡಿದೆ. ಈ ಕಾರು ರೂ.6.33 ಲಕ್ಷದಿಂದ ರೂ.8.97 ಲಕ್ಷದ ಎಕ್ಸ್ ಶೋ ರೂಂ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ.

Renault Kiger Offer
Image Credit: Cardekho

•Renault Kiger Offer
ರೆನಾಲ್ಟ್ ಕಿಗರ್ ಕೂಡ ಬಾರಿ ದೊಡ್ಡ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ರೂ. 65,000 ವರೆಗೆ ಒಟ್ಟು ರಿಯಾಯಿತಿ ಕೊಡುಗೆಯನ್ನು ನೀವು ಪಡೆಯಬಹುದು. ಇದು ರೂ.25,000 ನಗದು ರಿಯಾಯಿತಿ, ರೂ.20,000 ವಿನಿಮಯ ಬೋನಸ್ ಮತ್ತು ರೂ. 20,000 ಲಾಯಲ್ಟಿ ಬೋನಸ್‌ ಗಳನ್ನು ಒಳಗೊಂಡಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 6.50 ಲಕ್ಷದಿಂದ 11.23 ಲಕ್ಷ ರೂ. ಆಗಿದ್ದು ರಿಯಾಯಿತಿಯ ಜೊತೆಗೆ ಅತಿ ಅಗ್ಗದ ಬೆಲೆಯಲ್ಲಿ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group