Kwid EV: ಬಜೆಟ್ ಬೆಲೆಗೆ ಬಂತು ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್, ಸಿಂಗಲ್ ಚಾರ್ಜ್ ನಲ್ಲಿ 300 ಕಿಲೋಮೀಟರ್ ಮೈಲೇಜ್.

ಬಜೆಟ್ ಬೆಲೆಗೆ ರೆನಾಲ್ಟ್ ಕಾರ್ ಲಾಂಚ್, ಸಿಂಗಲ್ ಚಾರ್ಜ್ ನಲ್ಲಿ 300 Km ಮೈಲೇಜ್

Renault Kwid Electric Car:  ಭಾರತೀಯ ಆಟೋ ವಲಯದಲ್ಲಿ ಹೊಸ ಹೊಸ ಮಾದರಿಯ ಕಾರ್ ಗಳು ಆಗಾಗ ಪರಿಚಯವಾಗುತ್ತಿದೆ. ಈಗಂತೂ ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳಿಗಿಂತ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಗಳು ಪರಿಚಯವಾಗುತ್ತಿದೆ. 

ಸದ್ಯ Renault ಕಂಪನಿ ಎಲೆಕ್ಟ್ರಿಕ್ ಮಾದರಿಗಳಿಗೆ ಠಕ್ಕರ್ ನೀಡಲು ಅತಿ ಅಗ್ಗದ ಬೆಲೆಯಲ್ಲಿ ತನ್ನ ನೂತನ ಮಾದರಿಯನ್ನು ಪರಿಚಯಿಸಿದೆ. ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ನೀಡುವ ಕಾರ್ ಇದಾಗಿದ್ದು ಮಾರುಕಟ್ಟೆಯಲ್ಲಿ ಸಂಚಲ ಮೂಡಿಸುವಲ್ಲಿ ಯಾವುದೇ ಸಂದೇಹವಿಲ್ಲ.

Renault Kwid Offer
Image Credit: Original Source

ಬಜೆಟ್ ಬೆಲೆಗೆ ಬಂತು  Renault Kwid Electric Car
ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಮಾದರಿಗಳಿಗೆ ಸವಾಲು ಹಾಕಲು ರೆನಾಲ್ಟ್ ಕಂಪನಿಯು ಭರ್ಜರಿ ಫೀಚರ್ ನೊಂದಿಗೆ ತನ್ನ Kwid ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಿದೆ. ಪರಿಚಿತ ಕ್ವಿಡ್ ಆರ್ಕಿಟೆಕ್ಚರ್ ಅನ್ನು ಆಧರಿಸಿ Kwid EV ತಯಾರಿಸಲಾಗಿದೆ.  Kwid EV ಯಲ್ಲಿ ಬಂಪರ್‌ ಗಳು, ಲೈಟ್‌ ಗಳು ಮತ್ತು ಗ್ರಿಲ್‌ ಗಳಲ್ಲಿ ಬದಲಾವಣೆಗಳೊಂದಿಗೆ ಹೊಸ ಲುಕ್ ಅನ್ನು ಕಾಣಬಹುದು.

ಈಗಾಗಲೇ ಚೀನಾ ಮತ್ತು ಯುರೋಪ್‌ ನಲ್ಲಿ ಡೇಸಿಯಾ ಮತ್ತು ಡಾಂಗ್‌ ಫೆಂಗ್‌ ನಂತಹ ವಿವಿಧ ಹೆಸರುಗಳಲ್ಲಿ ಅಲೆಗಳನ್ನು ಸೃಷ್ಟಿಸುತ್ತಿರುವ ಕ್ವಿಡ್ ಇವಿ ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಎಂಟ್ರಿ ಕೊಡಲಿದೆ. ವಿಶಾಲವಾದ ಒಳಾಂಗಣ ಮತ್ತು ಕ್ರಾಸ್ ಓವರ್ ವಿನ್ಯಾಸದೊಂದಿಗೆ ವಿಭಿನ್ನವಾಗಿ ಕಾಣಲಿದೆ. ಕ್ವಿಡ್ ಮಾದರಿಯಲ್ಲಿ Internal Combustion Engine (ICE) ನಿಂದ EV ಗೆ ರೆನಾಲ್ಟ್ ಪರಿವರ್ತನೆಯು ಗಣನೀಯ ಮಾರ್ಪಾಡುಗಳನ್ನು ನೋಡಬಹುದು.

Renault Kwid 2023 price
Image Credit: Livehindustan

ಸಿಂಗಲ್ ಚಾರ್ಜ್ ನಲ್ಲಿ 300 ಕಿಲೋಮೀಟರ್ ಮೈಲೇಜ್
ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ನ Tiago EV, ಸಿಟ್ರೊಯೆನ್ eC3 ಮತ್ತು MG ಯ ಕಾಮೆಟ್‌ ನೊಂದಿಗೆ  Kwid EV ನೇರ ಸ್ಪರ್ಧೆಗಿಳಿಯಲಿದೆ. ಈ EV ಯಲ್ಲಿ ಬಲಿಷ್ಠ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. Renault Kwid Electric Car ನಲ್ಲಿ ನೀವು 26 .8kWh ಬ್ಯಾಟರಿ ಬ್ಯಾಕಪ್ ಅನ್ನು ನೋಡಬಹುದು. ಇದು 44hp ಮತ್ತು 125Nm ಟಾರ್ಕ್ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಬ್ಯಾಟರಿಯು ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 300km ಮೈಲೇಜ್ ನೀಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

Join Nadunudi News WhatsApp Group

Join Nadunudi News WhatsApp Group