Renault New: ದೊಡ್ಡ ಕುಟುಂಬಕ್ಕೆ ಇಲ್ಲಿದೆ ದೊಡ್ಡ ಕಾರ್, ಕಡಿಮೆ ಬೆಲೆ ಮತ್ತು ಕಡಿಮೆ EMI.

ದೊಡ್ಡ ಕುಟುಂಬಕ್ಕಾಗಿ ಬಂತು ದೊಡ್ಡ ಕಾರ್, ಬೆಲೆ ಕೂಡ ಕಡಿಮೆ

Renault Triber EMI Details: ದೇಶಿಯ ಮರುಕಟ್ಟೆಯಲ್ಲಿ 7 Seater MUV ವಿಭಾಗದಲ್ಲಿ ಹತ್ತು ಹಲವು ಮಾದರಿಯ ಕಾರ್ ಗಳು ಪರಿಚಯವಾಗಯುತ್ತಿದೆ. ದೊಡ್ಡ ಕುಟುಂಬದ ಪ್ರಯಾಣಕ್ಕಾಗಿ ಜನರು ಹೆಚ್ಚಾಗಿ 7 ಸೀಟರ್ ವಾಹನಗಳನ್ನು ಖರೀದಿಸಲು ಬಯಸುತ್ತಾರೆ. ನೀವು 7 ಆಸನಗಳಿರುವ ಕಾರ್ ಅನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ. ಹೌದು, ರೆನಾಲ್ಟ್ ಟ್ರೈಬರ್ ರೂಪಾಂತರವನ್ನು ನೀವು ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಸಬಹುದು.

ನೀವು ಕಡಿಮೆ ಬಜೆಟ್ ಹೊಂದಿದ್ದು, ಹೆಚ್ಚು ಮೈಲೇಜ್ ನೀಡುವ ವಾಹನಕ್ಕಾಗಿ ಹುಡುಕುತ್ತಿದ್ದರೆ Renault Triber ನಿಮಗೆ ಬೆಸ್ಟ್ ಆಯ್ಕೆ ಆಗಲಿದೆ. ರೆನಾಲ್ಟ್ ಟ್ರೈಬರ್ ಶಕ್ತಿಶಾಲಿ ಫೀಚರ್ ಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸುತ್ತಿದೆ. ಕಂಪನಿಯು ಈ ಜನಪ್ರಿಯ್ ಮಾದರಿಯ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ಸಹ ಬಿಡುಗಡೆ ಮಾಡಿದೆ.

Renault Triber EMI Details
Image Credit: Bookmycar

ದೊಡ್ಡ ಕುಟುಂಬಕ್ಕೆ ಇಲ್ಲಿದೆ ದೊಡ್ಡ ಕಾರ್
ರೆನಾಲ್ಟ್ ಟ್ರೈಬರ್ ಎಲ್‌ಇಡಿ ಹೆಡ್‌ ಲ್ಯಾಂಪ್‌ ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ ಗಳು, 17-ಇಂಚಿನ ಅಲಾಯ್ ವೀಲ್‌ಗಳು, ಸ್ಟೀರಿಂಗ್ ಮತ್ತು ಆಡಿಯೊ ಕಂಟ್ರೋಲ್‌ಗಳೊಂದಿಗೆ 8-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್, ಸ್ಮಾರ್ಟ್‌ ಫೋನ್ ಕಂಟ್ರೋಲ್ ಮತ್ತು ಎಲ್‌ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ನಂತಹ ಅನೇಕ ಅತ್ಯಾಧುನಿಕ ಫೀಚರ್ ಅನ್ನು ಹೊಂದಿದೆ. ಕಾರು ಬಲವಾದ ಎಂಜಿನ್ ಅನ್ನು ಸಹ ಹೊಂದಿದ್ದು ಹೆಚ್ಚು ಮೈಲೇಜ್ ಅನ್ನು ಕೂಡ ನೀಡಲಿದೆ. ದೊಡ್ಡ ಕುಟುಂಬಕ್ಕೆ ಈ ಕಾರ್ ಉತ್ತಮವಾಗಿರಲಿದೆ.

ರೆನಾಲ್ಟ್ ಟ್ರೈಬರ್ 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ನಿಂದ ಚಾಲಿತವಾಗಲಿದ್ದು, 96 ನ್ಯೂಟನ್ ಮೀಟರ್ ಟಾರ್ಕ್ ಮತ್ತು 72 ಪಿಎಸ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಗ್ರಾಹಕರು 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್ ಆಯ್ಕೆಯನ್ನು ಪಡೆಯಬಹದು. ಕಾರು ತನ್ನ ಶಕ್ತಿಶಾಲಿ ಎಂಜಿನ್‌ ನಿಂದಾಗಿ ಪ್ರತಿ ಲೀಟರ್‌ ಗೆ 20 ಕಿಮೀ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

Renault Triber Price In India
Image Credit: Livemint

ಕಡಿಮೆ ಬೆಲೆ ಮತ್ತು ಕಡಿಮೆ EMI
ಬೆಂಗಳೂರಿನಲ್ಲಿ ರೆನಾಲ್ಟ್ ಟ್ರೈಬರ್‌ ನ ಮೂಲ ಮಾದರಿ RXE ಗೆ ರೂ.7.22 ಲಕ್ಷ, RXL ಗೆ ರೂ.8.17 ಲಕ್ಷ, ಹೆಚ್ಚು ಮಾರಾಟವಾಗುವ RXT ರೂ. 9.13 ಲಕ್ಷ, RXZ ರೂ.9.87 ಲಕ್ಷ. , RXZ ಡ್ಯುಯಲ್ ಝೋನ್‌ ಗೆ ರೂ.10.14 ಲಕ್ಷ ಮತ್ತು ಟಾಪ್-ಎಂಡ್ ಮಾಡೆಲ್‌ ಗೆ ರೂ.10.14 ಲಕ್ಷ (ಗರಿಷ್ಠ ಆವೃತ್ತಿ) RXZ ಈಸಿ-ಆರ್ ಎಎಮ್‌ಟಿ ಡ್ಯುಯಲ್ ಟೋನ್ ರೂ.10.76 ಲಕ್ಷ ಆನ್ ರೋಡ್ ಬೆಲೆ ನಿಗದಿಪಡಿಸಲಾಗಿದೆ.

Join Nadunudi News WhatsApp Group

ಆದಾಗ್ಯೂ, ನೀವು Renault Triber ಖರೀದಿಗೆ ಹಣದ ಬಗ್ಗೆ ಯೋಚಿಸುವ ಅಗತ್ಯ ಇಲ್ಲ. ಕಾರಣ ಕಂಪನಿಯು ಈ ಮಾದರಿಯನ್ನು EMI ನೀಡಲು ಮುಂದಾಗಿದೆ. ನೀವು ಈ ಕಾರನ್ನು ರೂ. 72,000 ಡೌನ್ ಪಾವತಿಯೊಂದಿಗೆ ಖರೀದಿಸಿದರೆ ನೀವು 5 ವರ್ಷಗಳ ಅವಧಿಗೆ 9.8% ಬಡ್ಡಿದರದಲ್ಲಿ ರೂ.13,738 ರ ಮಾಸಿಕ EMI ಅನ್ನು ಪಾವತಿಸಬೇಕಾಗುತ್ತದೆ.

Renault Triber Features Update
Image Credit: Cartrade

Join Nadunudi News WhatsApp Group