Rent Agreement: ಮನೆಯನ್ನ ಬಾಡಿಗೆಗೆ ಕೊಡುವವರಿಗೆ ಜಾರಿಗೆ ಬಂತು ಹೊಸ ರೂಲ್ಸ್, ಬಾಡಿಗೆ ನಿಯಮ ಬದಲಾವಣೆ

ಮನೆಯನ್ನ ಬಾಡಿಗೆಗೆ ಕೊಡುವವರಿಗೆ ಹೊಸ ರೂಲ್ಸ್

Rent Agreement  Rule: ದೇಶದಲ್ಲಿ ಅದೆಷ್ಟೋ ಜನರು ಬಾಡಿಗೆ ಮನೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋದವರು ತಮ್ಮ ಊರಿನಲ್ಲಿರುವ ಸ್ವಂತ ಮನೆಯನ್ನು ತೊರೆದು ಹೊರ ಊರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವುದು ಅನಿವಾರ್ಯವಾಗಿರುತ್ತದೆ.

ಇನ್ನು ಮನೆಯನ್ನು ಬಾಡಿಗೆಗೆ ತಗೆದುಕೊಳ್ಳುವುದು ಸುಲಭ. ಆದರೆ ಮನೆಯನ್ನು ಬಾಡಿಗೆಗೆ ಪಡೆಯುವ ಮುನ್ನ ಮನೆ ಬಾಡಿಗೆಯ ಕಾನೂನಿನ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ.

Rent Agreement Rule
Image Credit: Housing

ಮನೆಯನ್ನ ಬಾಡಿಗೆಗೆ ಕೊಡುವವರಿಗೆ ಜಾರಿಗೆ ಬಂತು ಹೊಸ ರೂಲ್ಸ್
ಸಾಮಾನ್ಯವಾಗಿ ಬಾಡಿಗೆದಾರರು ಮನೆಯನ್ನು ಬಾಡಿಗೆ ಪಡೆಯುವ ಮುನ್ನ ಮನೆಯನ್ನು ಬಾಡಿಗೆ ನೀಡುತ್ತಿರುವವರು ವಿಧಿಸುವಂತಹ ನಿಯಮವನ್ನು ಅನುಸರಿಸಬೇಕಾಗುತ್ತದೆ. ಬಾಡಿಗೆ ನೀಡುವವರು ಮುಖ್ಯವಾಗಿ ಬಾಡಿಗೆ ಒಪ್ಪಂದವನ್ನು ಮಾಡುತ್ತಾರೆ. ಮನೆ ಬಾಡಿಗೆ ಪಡೆಯಲು Rent Agreement ಬಹಳ ಮುಖ್ಯವಾಗಿರುತ್ತದೆ. ಬಾಡಿಗೆದಾರರು ಹಾಗೂ ಮನೆ ಮಾಲೀಕರು ತಮ್ಮ ನಡುವೆ ಯಾವುದೇ ಒಪ್ಪಂದವನ್ನು ಮಾಡಿಕೊಂಡರು ಕೂಡ ಅದು ಲಿಖಿತ ರೂಪದಲ್ಲಿ ಇರುವುದು ಅಗತ್ಯ.

ಬಾಡಿಗೆದಾರ ಎಷ್ಟು ಸಮಯ ಮನೆಯಲ್ಲಿ ವಾಸಿಸಬಹುದು..? ಮನೆಯ ಬಾಡಿಗೆಯೆಷ್ಟು..? ಮುಂಗಡ ಹಣ ಎಷ್ಟು ಪಾವತಿಸಬೇಕು..? ಕರೆಂಟ್ ಬಿಲ್, ವಾಟರ್ ಬಿಲ್ ಸೇರಿದಂತೆ ಮನೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಮಾಹಿತಿ ತಿಳಿದುಕೊಂಡಿರುವುದು ಅಗತ್ಯ. ಈ ಎಲ್ಲ ವಿಷಯಗಳ ಬಗ್ಗೆ ಬಾಡಿಗೆದಾರ ಹಾಗೂ ಮನೆ ಮಾಲೀಕ ಮಾತುಕತೆ ನಡೆಸಿಕೊಂಡಿರಬೇಕು.

Rent Agreement Rules In India
Image Credit: Nobroker

ಮನೆ ಬಾಡಿಗೆ ಪಡೆಯಲು ಬಾಡಿಗೆ ಒಪ್ಪಂದ ಕಡ್ಡಾಯ
ಯಾರೇ ಆಗಲಿ ಮನೆ ಬಾಡಿಗೆಗೆ ಪಡೆಯುವ ಮುನ್ನ ಬಾಡಿಗೆ ಒಪ್ಪಂದವನ್ನು ಮಾಡಿಸಿಕೊಳ್ಳುವುದನ್ನು ಮರೆಯಬಾರದು. ದೇಶದಲ್ಲಿ ಬಾಡಿಗೆ ಒಪ್ಪಂದಗಳಿಗೆ ಕಾನೂನಿನಲ್ಲಿ ಸರಿಯಾದ ನಿಯಮಗಳನ್ನು ಮಾಡಲಾಗಿದೆ. ಭಾರತೀಯ ನೋಂದಣಿ ಕಾಯಿದೆ, 1908 ರ ಸೆಕ್ಷನ್ 17 (ಡಿ) ಅಡಿಯಲ್ಲಿ ಬಾಡಿಗೆ ಒಪ್ಪಂದವನ್ನು ಮಾಡುವುದು ಅವಶ್ಯಕ.

Join Nadunudi News WhatsApp Group

ಆದಾಗ್ಯೂ, ಈ ಒಪ್ಪಂದವನ್ನು ಕನಿಷ್ಠ ಒಂದು ವರ್ಷಕ್ಕೆ ಮಾಡಬೇಕಾಗಿದೆ ಮತ್ತು ಬಾಡಿಗೆ ಒಪ್ಪಂದ ಅಥವಾ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸುವ ಅಗತ್ಯವಿಲ್ಲ. ಒಂದು ವರ್ಷಕ್ಕಿಂತ ಕಡಿಮೆ ಅವಧಿ ಅಂದರೆ ನಿಮ್ಮ ಜಮೀನುದಾರರು 11 ತಿಂಗಳವರೆಗೆ ಮಾತ್ರ ಬಾಡಿಗೆ ಒಪ್ಪಂದವನ್ನು ಮಾಡಬಹುದು. ಬಾಡಿಗೆ ಒಪ್ಪಂದ್ವನ್ನು ಮಾಡಿಕೊಳ್ಳುವುದರಿಂದ ಮುಂದೆ ಎದುರಾಗುವ ಸಮಸ್ಯೆಗಳಿಂದ ನೀವು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

Join Nadunudi News WhatsApp Group