RBI Rules: ದೇಶದ ಎಲ್ಲಾ ಬ್ಯಾಂಕುಗಳಿಗೂ RBI ನಿಂದ ಮಹತ್ವದ ಆದೇಶ, ಇಂದಿನಿಂದ ಹೊಸ ನಿಯಮ ಜಾರಿಗೆ.

ದೇಶದ ಎಲ್ಲಾವೂ ಬ್ಯಾಂಕುಗಳಿಗೂ ಹೊಸ ನಿಯಮವನ್ನ ಜಾರಿಗೊಳಿಸಿದ RBI

Reserve Bank Of India News Rules: ಪ್ರತಿ ತಿಂಗಳ ಆರಂಭದಲ್ಲಿ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದೇಶಿಯ ಎಲ್ಲ ಬ್ಯಾಂಕುಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮ ಯಾವುದು, ಏನು ಬದಲಾವಣೆ ಆಗಲಿದೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ (Shaktikant Das) ಅವರು ಮೊದಲ ವಾಣಿಜ್ಯ ಬ್ಯಾಂಕುಗಳು ಸೆಂಟ್ರಲ್ ಬ್ಯಾಂಕ್ ನ ಹೊಸ ಡೇಟಾ ಸಿಸ್ಟಮ್ CIMS ನಲ್ಲಿ ತಮ್ಮ ಡೇಟಾವನ್ನು ಕಳುಹಿಸಲು ಪ್ರಾರಂಭಿಸುತ್ತವೆ ಎಂದು ಹೇಳಿದರು. ಇದರ ನಂತರ ನಗರ ಸಹಕಾರಿ ಬ್ಯಾಂಕ್ ಗಳು ಮತ್ತು ಏನ್ ಬಿ ಎಫ್ ಸಿ ಕಂಪನಿಗಳು ಸಹ ಅದರ ಭಾಗವಾಗುತ್ತದೆ ಎಂದು ಹೇಳಿದ್ದಾರೆ.

RBI has implemented new rules for all banks in the country
Image Credit: boomlive

ಗವರ್ನರ್ ಶಕ್ತಿಕಾಂತ್ ದಾಸ್ ಹೊಸ ಮಾಹಿತಿ
ಆರ್ ಬಿ ಐ ನ ಪ್ರಧಾನ ಕಚೇರಿಯಲ್ಲಿ ನಡೆದ 17 ನೇ ಅಂಕಿಅಂಶದ ಸೆಮಿನಾರ್ ನಲ್ಲಿ ಕೇಂದ್ರಕೃತ ಮಾಹಿತಿ ನಿರ್ವಹಣಾ ವ್ಯವಸ್ಥೆ ಅನ್ನು ಉದ್ಘಾಟಿಸಿದ ಶಕ್ತಿಕಾಂತ್ ದಾಸ್ ಅವರು ವಾಣಿಜ್ಯ ಬ್ಯಾಂಕ್ ಗಳು ಆರ್ ಬಿ ಐ ನ ಈ ಮುಂದಿನ ಪೀಳಿಗೆಯ ಡೇಟಾ ಸಿಸ್ಟಮ್ ನ ಮಾಹಿತಿಯನ್ನು ಕಳುಹಿಸಲು ಪ್ರಾರಂಭಿಸುತ್ತವೆ ಎಂದು ಹೇಳಿದರು.

ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಈ ವ್ಯವಸ್ಥೆಯಲ್ಲಿ ತಮ್ಮ ಡೇಟಾವನ್ನು ನೋಂದಾಯಿಸಲು ಪ್ರಾರಂಭಿಸುತ್ತವೆ ಎಂದು ಆರ್ ಬಿ ಐ ಗವರ್ನರ್ ಹೇಳಿದರು. CIMS ಅನ್ನು ಸಕ್ರಿಯಗೊಳಿಸಿದ ನಂತರ ಬಿಡುಗಡೆಯಾದ ಮೊದಲ ವಾರದ ವರದಿಯು ಕೇಂದ್ರೀಯ ಬ್ಯಾಂಕ್‌ ನ ಸ್ವಂತ ಕಾರ್ಯಾಚರಣೆಗಳು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿನ ಬೆಳವಣಿಗೆಗಳ ಮೇಲೆ ಕೇಂದ್ರೀಕರಿಸಿದೆ ಎಂದು ಆರ್‌ ಬಿ ಐ ಗವರ್ನರ್ ಹೇಳಿದ್ದಾರೆ.

RBI has implemented new rules on bank statistics
Image Credit: abplive

ಜೂನ್ 23 ರಂದು ಕೊನೆಗೊಳ್ಳುವ ವಾರದ ವರೆಗೆ ಅದರ ಅಂಕಿಅಂಶಗಳನ್ನು ಈ ವ್ಯವಸ್ಥೆಯಲ್ಲಿ ದಾಖಲಿಸಲಾಗಿದೆ. ಶಕ್ತಿಕಾಂತ್ ದಾಸ್ ಅವರು ಈ ಹೊಸ ವ್ಯವಸ್ಥೆಯು ಸಾರ್ವಜನಿಕ ಬಳಕೆಗಾಗಿ ಹೆಚ್ಚಿನ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತದೆ ಎಂದು ಹೇಳಿದ್ದಾರೆ.

Join Nadunudi News WhatsApp Group

ನಿಯಂತ್ರಿತ ಘಟಕಗಳು ತಮ್ಮ ಹಿಂದಿನ ಡೇಟಾಗೆ ಪ್ರವೇಶವನ್ನು ಹೊಂದುತ್ತವೆ ಮತ್ತು CIMS ನಲ್ಲಿ ಗುಣಮಟ್ಟದ ನಿಯತಾಂಕಗಳ ಮೇಲೆ ಅದೇ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಹೊಸ ಡೇಟಾ ವ್ಯವಸ್ಥೆಗೆ ಇನ್ನೂ ಕೆಲವು ಹೊಸ ಸೌಲಭ್ಯಗಳನ್ನು ಸೇರಿಸಲಾಗುವುದು ಎಂದು ದಾಸ್ ಹೇಳಿದರು. ಇದು ಇಮೇಲ್ ಆಧಾರಿತ ವರದಿ ಮಾಡುವ ಸೌಲಭ್ಯವನ್ನು ಸಹ ಒಳಗೊಂಡಿದೆ.

Join Nadunudi News WhatsApp Group