Revolt EV: ಸಿಂಗಲ್ ಚಾರ್ಜ್ ನಲ್ಲಿ 150 Km ಮೈಲೇಜ್, ಅಗ್ಗದ ಬೆಲೆಯ ಈ ಎಲೆಕ್ಟ್ರಿಕ್ ಬೈಕ್ ದಾಖಲೆಯ booking

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ  ನೂತನ ರಿವೋಲ್ಟ್ ಎಲೆಕ್ಟ್ರಿಕ್

Revolt RV400 BRZ Electric Bike:  ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯ ಏರಿಕೆ ಒಂದು ವಿಧದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಎಂದರೆ ತಪ್ಪಾಗಲಾರದು. ಕಾರ್, ಬೈಕ್ ಖರೀದಿಗೆ ಬಜೆಟ್ ಹೊಂದಿಸಿ ಖರೀದಿಸಿದರು ಕೂಡ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕುವುದೇ ದೊಡ್ಡ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ.

Revolt RV400 BRZ Electric Bike
Image Credit: Bike Wale

ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಲಾಂಚ್
ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ  ತಯಾರಾಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತವೆ. ಇದೀಗ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಾಕ ಕಂಪನಿಯದ Revolt Motors ತನ್ನ ನೂತನ ಮಾದರಿಯ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಭರ್ಜರಿ ಮೈಲೇಜ್ ನೀಡುವ ರಿವೋಲ್ಟ್ ನ ಈ ಬೈಕ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ  ನೂತನ ರಿವೋಲ್ಟ್ ಎಲೆಕ್ಟ್ರಿಕ್
ಇದೀಗ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿರುವ  ರಿವೋಲ್ಟ್ ಕಂಪನಿ RV400 Electric Bike ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ನೂತನ ಮಾದರಿಯ ಬೈಕ್ ವಿಭಿನ್ನ ವಿನ್ಯಾಸವನ್ನು ಹೊಂದಿದ್ದು ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ. ಸದ್ಯ ಕಂಪನಿಯು RV400 ಬೈಕ್ ನ ಹೊಸ ರೂಪಾಂತರ RV400 BRZ ಅನ್ನು ಬಿಡುಗಡೆ ಮಾಡಿದೆ. ನೂತನ ಮಾದರಿಯು ಮಾರುಕಟ್ಟೆಯಲ್ಲಿ ರೂ. 1 .34 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. ಲೂನಾರ್ ಗ್ರೀನ್, ಪೆಸಿಫಿಕ್ ಬ್ಲೂ, ಡಾರ್ಕ್ ಸಿಲ್ವರ್, ರೆಬೆಲ್ ರೆಡ್ ಬಣ್ಣಗಳ ಆಯ್ಕೆಯಲ್ಲಿ ನೀವು ಈ ಎಲೆಕ್ಟ್ರಿಕ್ ಮಾದರಿಯನ್ನು ಖರೀದಿಸಬಹುದು.

Revolt RV400 BRZ Electric Bike Price In India
Image Credit: Bike Wale

ಸಿಂಗಲ್ ಚಾರ್ಜ್ ನಲ್ಲಿ 150km ರೇಂಜ್
ಈ ರಿವೋಲ್ಟ್ RV400 BRZ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ 72V 3.24 KWh ಲಿಥಿಯಂ – ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆಯುತ್ತದೆ. ಇನ್ನಿ Eco , Normal , Sport ಎನ್ನುವ ಮೂರು ರೈಡಿಂಗ್ ಮಾಡ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ ನಲ್ಲಿ ಕ್ರಮವಾಗಿ 150 ಕಿಮೀ, 100 ಕಿಮೀ ಮತ್ತು 80 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ನೀವು ಈ ಎಲೆಕ್ಟ್ರಿಕ್ ಬೈಕ್ ಅನ್ನು ಕೇವಲ 3 ರಿಂದ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು ಗಂಟೆಗೆ ಗರಿಷ್ಟ 85 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಸೈಡ್-ಸ್ಟ್ಯಾಂಡ್ ಕಟ್-ಆಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನ ಜೊತೆಗೆ ಹತ್ತು ಹಲವು ವಿಶೇಷ ಫೀಚರ್ ಅನ್ನು ನೀವು ನೋಡಬಹುದು.

Join Nadunudi News WhatsApp Group

Join Nadunudi News WhatsApp Group