Father’s Property: ಅಪ್ಪನ ಮನೆಯ ಆಸ್ತಿಯಲ್ಲಿ ಮಕ್ಕಳಿಗೆ ಎಷ್ಟು ಪಾಲಿದೆ, ಅಪ್ಪನ ಆಸ್ತಿಯ ಬಗ್ಗೆ ಕೋರ್ಟ್ ಮಹತ್ವದ ತೀರ್ಪು.

ತಂದೆಯ ಮನೆಯ ಆಸ್ತಿಯಲ್ಲಿ ಮಕ್ಕಳಿಗೆ ಎಷ್ಟು ಪಾಲಿದೆ ಅನ್ನುವುದರ ಬಗ್ಗೆ ಕೋರ್ಟ್ ತೀರ್ಪು ನೀಡಿದೆ.

Children’s Property Right In Father’s Property: ತಂದೆಯ ಆಸ್ತಿಯ (Father’s Property)  ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹಲವು ಆದೇಶವನ್ನು ಹೊರಡಿಸಿದೆ. ಈ ಹಿಂದೆ ತಂದೆಯ ಆಸ್ತಿ ಹಂಚಿಕೆಯಲ್ಲಿ ಮಗಳಿಗೆ ಯಾವುದೇ ರೀತಿಯ ಪಾಲುದಾರಿಕೆ ಸಿಗುತ್ತಿರಲಿಲ್ಲ.

ಹೆಣ್ಣುಮಕ್ಕಳು ಕುಟುಂಬದಲ್ಲಿ ಕೇವಲ ಸದಸ್ಯರಾಗಿದ್ದು ಆಸ್ತಿಯಲ್ಲಿ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಆದರೆ ಪ್ರಸ್ತುತ ತಂದೆಯ ಆಸ್ತಿಯ ಹಂಚಿಕೆಯ ಕುರಿತು ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ.

The court has ruled on the children's share in the property of the father's house.
Image Credit: Webuyhouse

ತಂದೆಯ ಮನೆಯ ಆಸ್ತಿಯಲ್ಲಿ ಮಕ್ಕಳಿಗೆ ಎಷ್ಟು ಪಾಲಿದೆ
ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣು ಮಕ್ಕಳಿಗೆ ಆಸ್ತಿಯ ಪಾಲುದಾರಿಕೆ ನೀಡಲು ಸಾಕಷ್ಟು ತಿದ್ದುಪಡಿಗಳನ್ನು ತರಲಾಗಿದೆ. 2005 ರಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕನ್ನು ತರಲು ಕಾಯ್ದೆಯನ್ನು ತರಲಾಯಿತು.

ತಂದೆಯ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಕ್ಕು ಇದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ತಂದೆಯ ಆಸ್ತಿಯಲ್ಲಿ ಮಗ ಎಷ್ಟು ಹಕ್ಕನ್ನು ಹೊಂದಿರುತ್ತಾನೋ ಅಷ್ಟೇ ಹಕ್ಕನ್ನು ಮಗಳು ಕೂಡ ಹೊಂದಿರುತ್ತಾಳೆ. ಮಗ ಮತ್ತು ಮಗಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಂಚಿಕೆ ಆಗಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ.

The court has ruled on the children's share in the property of the father's house.
Image Credit: Mashvisor

ಹೆಣ್ಣುಮಕ್ಕಳಿಗೆ ಗಂಡನ ಆಸ್ತಿಯಲ್ಲಿ ಎಷ್ಟು ಹಕ್ಕಿದೆ
ಇನ್ನು ಹೆಣ್ಣುಮಗು ಮದುವೆಯಾದ ಬಳಿಕ ತನ್ನ ಗಂಡನ ಮನೆಯನ್ನು ಸೇರುತ್ತಾಳೆ. ಗಂಡನ ಮನೆಯಲ್ಲಿ ಹೆಣ್ಣಿಗೆ ಮದುವೆಯಾದ ಬಳಿಕ ಸ್ವಲ್ಪ ಮಟ್ಟಿನ ಹಕ್ಕು ಇರುತ್ತದೆ. ಸೊಸೆಗೆ ಮಾವನ ಮನೆಯ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ಅತ್ತೆ ಮತ್ತು ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕಿರುವುದಿಲ್ಲ ಅವಳ ಗಂಡನ ಆಸ್ತಿಯಲ್ಲಿ ಮಾತ್ರ ಹಕ್ಕಿರುತ್ತದೆ. ಮಾವನ ಮನೆಯಲ್ಲಿ ತನ್ನ ಗಂಡನ ಮರಣದ ನಂತರ ಸೊಸೆಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆ.

Join Nadunudi News WhatsApp Group

The court has ruled on the children's share in the property of the father's house.
Image Credit: Livemint

ತಂದೆಯ ಮರಣದ ನಂತರ ಹಿಂದೂ ಉತ್ತರಾಧಿಕಾರ ಕಾಯಿದೆಯು, ಪುರುಷನ ವಾರಸುದಾರರನ್ನು ನಾಲ್ಕು ವರ್ಗಗಳಾಗಿ ವರ್ಗಿಕರಿಸುತ್ತದೆ ಮತ್ತು ಪಿತ್ರಾರ್ಜಿತ ಆಸ್ತಿಯು ಮೊದಲನೆಯ ವರ್ಗ 1 ವಾರಸುದಾರರಿಗೆ ತಲುಪುತ್ತದೆ. ಆಸ್ತಿ ಹಂಚಿಕೆಯಲ್ಲಿ ಪುತ್ರಿಯರು ಮತ್ತು ಪುತ್ರರು ಸೇರಿರುತ್ತಾರೆ. ಹೆಣ್ಣು ಮಕ್ಕಳು ತಮ್ಮ ಹೆತ್ತವರ ಸ್ವಯಂ ಸ್ವಾದೀನ ಆಸ್ತಿಯನ್ನು ಉತ್ತರಾಧಿಕಾರಿಯಾಗಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

Join Nadunudi News WhatsApp Group