Kantara 2 Updates: ಕಾಂತಾರ 2 ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ನೀಡಿದ ನಟ ರಿಷಬ್ ಶೆಟ್ಟಿ.

ಕಾಂತಾರ 2 ಚಿತ್ರದ ಕತೆ ಬಹಳ ಅದ್ದೂರಿಯಾಗಿ ತಯಾರಾಗುತ್ತಿದೆ ಎಂದು ನಟ ರಿಷಬ್ ಶೆಟ್ಟಿ ಅವರು ಕಾಂತಾರ 2 ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

Rishab Shetty About Kantara 2 Movie: ನಟ ರಿಷಬ್ ಶೆಟ್ಟಿ (Rishab Shetty) ಮತ್ತು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನಿನ್ನೆ ಜೊತೆಯಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ಇವರಿಬ್ಬರನ್ನು ಜೊತೆಯಾಗಿ ನೋಡಿದ ತಕ್ಷಣ ರಿಷಬ್ ಶೆಟ್ಟಿ ಬಿಜೆಪಿಗೆ ಬರಲಿದ್ದಾರೆ ಎಂದು ಚರ್ಚೆ ಆಗಿತ್ತು. ಆದರೆ ನಮ್ಮಿಬ್ಬರ ಭೇಟಿ ಆಕಸ್ಮಿಕ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. ನಾನು ದೇವಸ್ಥಾನಕ್ಕೆ ಹೋಗುವ ಮೊದಲೇ ರಿಷಬ್ ಶೆಟ್ಟಿ ಬಂದಿದ್ದರು. ನಂತರ ಇಬ್ಬರು ಒಟ್ಟಿಗೆ ಸೇರಿ ಪೂಜೆ ಸಲ್ಲಿಸಿದ್ದೇವೆ ಎಂದಿದ್ದಾರೆ.

Rishab Shetty About Kantara 2 Movie
Image Source: India Today

ಕಾಂತಾರ 2 ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ ನಟ ರಿಷಬ್ ಶೆಟ್ಟಿ
ಇದೀಗ ರಿಷಬ್ ಶೆಟ್ಟಿ ಸಹ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ಕಾಂತಾರ 2 ಸಿನಿಮಾದ ಬಗ್ಗೆ ಅಪ್ಡೇಟ್ ಒಂದು ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಹೋದಾಗ ಸಿಎಂ ಭೇಟಿಯಾಯಿತು, ರಾಜಕೀಯಕ್ಕೆ ಬಣ್ಣ ಬೇಡ. ಕಾಂತಾರ ಬರವಣಿಗೆಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದೇನೆ. ನಿಮ್ಮೆಲರ ಪ್ರೀತಿ, ಆಶೀರ್ವಾದ ಇರಲಿ ಎಂದು ನಟ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

Rishab Shetty About Kantara 2 Movie
Image Source: Koimoi

ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ
ನಟ ರಿಷಬ್ ಶೆಟ್ಟಿ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ಮೊದಲೇ ಸ್ಪಷ್ಟನೆ ನೀಡಿದರು. ಆದರೆ ನಿನ್ನೆ ಸಿಎಂ ಮತ್ತು ಅವರ ಆಕಸ್ಮಿಕ ಭೇಟಿಯಿಂದ ಹಲವು ಚರ್ಚೆಗಳು ಶುರುವಾದವು. ಇದಕ್ಕೆ ಸಿಎಂ ಬೊಮ್ಮಾಯಿ ಮತ್ತು ರಿಷಬ್ ಶೆಟ್ಟಿ ಇಬ್ಬರು ಸಹ ಸ್ಪಷ್ಟನೆ ನೀಡಿದ್ದಾರೆ.

Rishab Shetty About Kantara 2 Movie
Image Source: India Today

ಕಾಂತಾರ 2 ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ ರಿಷಬ್ ಶೆಟ್ಟಿ

Join Nadunudi News WhatsApp Group

ನಟ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದ್ದಾರೆ. ಕಾಂತಾರ ಸಿನಿಮಾದ ಶೂಟಿಂಗ್ ನಲ್ಲಿ ನಟ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಅವರು ರಾಜಕೀಯದ ಬಗ್ಗೆ ಯೋಚನೆ ಮಾಡಲ್ಲ ಎಂದು ತಿಳಿದುಕೊಳ್ಳಬಹುದು.

Rishab Shetty About Kantara 2 Movie
Image Source: ANI News

Join Nadunudi News WhatsApp Group