Rishabh Pant: ಧೋನಿ ವಿಷಯವಾಗಿ ಕೋಣೆಯಲ್ಲಿ ಗಳಗಳನೆ ಕಣ್ಣೀರು ಹಾಕಿದ ರಿಷಬ್ ಪಂತ್, ಇದು ನ್ಯಾಯಾನಾ…?

ಧೋನಿ ವಿಷಯವಾಗಿ ಕೋಣೆಯಲ್ಲಿ ಗಳಗಳನೆ ಕಣ್ಣೀರು ಹಾಕಿದ ರಿಷಬ್ ಪಂತ್

Rishabh Pant About M.S Dhoni: ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ Rishabh Pant ಯಾರಿಗೆ ತಾನೇ ತಿಳಿದಿಲ್ಲ. ಇವ್ರು ಟೀಮ್ ಇಂಡಿಯಾದಲ್ಲಿ ಸಾಕಷ್ಟು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇನ್ನು ಡಿಸೇಂಬರ್ 2022 ರಲ್ಲಿ ರಿಷಬ್ ಪಂತ್ ಅವರಿಗೆ ರಸ್ತೆ ಅವಘಡ ಸಂಭವಿಸಿದ್ದು, ಇದರಿಂದಾಗಿ ಇನ್ನು ಕೂಡ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

ಇನ್ನು ಮಹೇಂದ್ರ ಸಿಂಗ್ ಧೋನಿ ಅವರು ಧೀರ್ಘಕಾಲದವರೆಗೆ ರಿಷಬ್ ಪಂತ್ ಅವರಿಗೆ ಮಾರ್ಗದರ್ಶಕರಾಗಿದ್ದರು. ಸದ್ಯ ರಿಷಬ್ ಪಂತ್ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಪಂತ್ ಅವರನ್ನು ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಹೋಲಿಕೆ ಮಾಡಿದಾಗ ಯಾವ ರೀತಿ ಅನುಭವ ಆಗುತ್ತಿತ್ತು ಎನ್ನುವ ಬಗ್ಗೆ ಪಂತ್ ಮಾಹಿತಿ ಹಂಚಿಕೊಂಡಿದ್ದಾರೆ.

Rishabh Pant About M.S Dhoni
Image Credit: Jagran

‘ಕೋಣೆಗೆ ಹೋಗಿ ತುಂಬಾ ಅಳುತ್ತಿದ್ದೆ’
ನಾನು ತುಂಬಾ ಕೆಟ್ಟ ಭಾವನೆ ಹೊಂದಿದ್ದೆ. ನಾನು 20 ರಿಂದ 21 ವರ್ಷವಿದ್ದಾಗ ಕೋಣೆಗೆ ಹೋಗಿ ಅಳುತ್ತಿದ್ದೆ. ನಾನು ಉಸಿರಾಡಲು ಸಾಧ್ಯವಾಗದಷ್ಟು ಉದ್ವಿಗ್ನನಾಗಿದ್ದೆ. ಈಗ ಏನು ಮಾಡಬೇಕು ಎಂದು ಯೋಚಿಸುವ ಒತ್ತಡವಿತ್ತು. ಮೊಹಾಲಿಯಲ್ಲಿ ನಾನು ಸ್ಟಂಪಿಂಗ್ ಅವಕಾಶವನ್ನು ಕಳೆದುಕೊಂಡಾಗ ಪ್ರೇಕ್ಷಕರು ಧೋನಿ ಧೋನಿ ಎಂದು ಜೈಕಾರ ಹಾಕಲು ಪ್ರಾರಂಭಿಸಿದರು.

MS ಜೊತೆಗಿನ ನನ್ನ ಸಂಬಂಧವನ್ನು ನನಗೆ ವಿವರಿಸಲು ಸಾಧ್ಯವಾಗುವುದಿಲ್ಲ. ಎಲ್ಲವನ್ನೂ ಹಂಚಿಕೊಳ್ಳುವ ವ್ಯಕ್ತಿ ಇದ್ದರೆ ಅದು ಧೋನಿ ಮಾತ್ರ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಬೇರೆಯವರೊಂದಿಗೆ ಮಾತನಾಡಲಾಗದ ವಿಷಯಗಳ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ. ಈಗಲೂ ಅವರೊಂದಿಗೆ ಅದೇ ಸಂಬಂಧವನ್ನು ಹೊಂದಿದ್ದೇನೆ.

Rishabh Pant And M.S Dhoni
Image Credit: Cricbom

‘ಅವರಿಗೂ ನನಗು ಹೋಲಿಕೆ ಬೇಡ’
ಧೋನಿ ಅವರ ಜೊತೆಗಿನ ಹೋಲಿಕೆಯ ಬಗ್ಗೆ ಕೂಡ ಪಂತ್ ತಮ್ಮ ಮನದಾಳದ ಮಾತನ್ನು ಆಡಿದ್ದಾರೆ. “ಅವರ ಜೊತೆ ಹೋಲಿಕೆ ಯಾಕೆ ಅಂತ ಅರ್ಥವಾಗಲಿಲ್ಲ, ನಾನು ತಂಡಕ್ಕೆ ಸೇರಿಕೊಂಡೆ. ಜನರು ಪರ್ಯಾಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಒಬ್ಬ ಯುವಕನಿಗೆ  ಏಕೆ ಅಂತಹ ಪ್ರಶ್ನೆಗಳನ್ನು ಕೇಳಲಾಯಿತು..? ಈ ಹೋಲಿಕೆ ಏಕೆ ನಡೆಯುತ್ತಿದೆ, ಇದು ಆಗಬಾರದಿತ್ತು. ಒಬ್ಬರು ಐದು ಪಂದ್ಯವನ್ನು ಆಡಿದ್ದಾರೆ. ಇನ್ನೊಬ್ಬರು 500 ಪಂದ್ಯಗಳನ್ನು ಆಡಿದ್ದಾರೆ. ಅಂತಹ ದೀರ್ಘ ಪ್ರಯಾಣವನ್ನು ಹೊಂದಿರುವ ಯಾರೊಂದಿಗಾದರೂ ಹೋಲಿಕೆ ಅರ್ಥಹೀನವಾಗಿದೆ.” ಅವರುರಿಷಬ್ ಪ್ಯಾಂಟ್ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group