SRH v/s DC: SRH ವಿರುದ್ಧ ಹೀನಾಯವಾಗಿ ಸೋತ ಬಳಿಕ ಬಹಳ ನೋವಿನಿಂದ ಮಾತನಾಡಿದ ಪಂತ್, ಬೇಸರದಲ್ಲಿ ಫ್ಯಾನ್ಸ್.

SRH ವಿರುದ್ಧ ಸೋತ ನಂತರ ಬಹಳ ನೋವಿನಿಂದ ಮಾತನಾಡಿದ ರಿಷಬ್ ಪಂತ್

Rishabh Pant Latest News: ಇನ್ನು IPL ನ 35 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ ರೈಸರ್ಸ್ತಂಡ ಮುಖಾಮುಖಿಯಾಗಿದೆ. ಈ ಪಾಂಡುವೂದಲ್ಲಿ ಸನ್‌ರೈಸರ್ಸ್ ತಂಡದ ಎದುರು ಡೆಲ್ಲಿ ಕ್ಯಾಪಿಟಲ್ಸ್ ಸೋತಿದೆ. ಈವರೆಗೆ ನಡೆದ 8 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 3 ಪಂದ್ಯವನ್ನು ಗೆದ್ದಿದ್ದು, ಇನ್ನುಳಿದ 5 ಪಂದ್ಯದಲ್ಲಿ ಸೋಲನ್ನು ಕಂಡಿದೆ. ಸತತ ಸೋಲಿನ ಕಾರಣ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸನ್ ರೈಸರ್ಸ್ ವಿರುದ್ಧ ಸೋಲಿನ ಬಗ್ಗೆ ರಿಷಬ್ ಪಂತ್ ಬೇಸರ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 67 ರನ್‌ ಗಳಿಂದ ಸೋತಿದೆ. ಮೊದಲು ಬ್ಯಾಟಿಂಗ್‌ ಗೆ ಬಂದ ಸನ್‌ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್‌ ಗೆ ಚೇಸಿಂಗ್‌ ನಲ್ಲಿ ಸಫಲವಾಗಲಿಲ್ಲ. ತಂಡದ ಸೋಲಿನ ನಂತರ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಸಾಕಷ್ಟು ನಿರಾಶೆಗೊಂಡಿದ್ದಾರೆ.ಸನ್‌ ರೈಸರ್ಸ್ ವಿರುದ್ಧದ ಸೋಲಿನ ನಂತರ Rishabh Pant ದೊಡ್ಡ ವಿಷಯ ಹೇಳಿದ್ದಾರೆ.

Rishabh Pant Latest News
Image Credit: Hindustantimes

SRH ವಿರುದ್ಧ ಹೀನಾಯ ಸೋತ ಬಳಿಕ ಬಹಳ ನೋವಿನಿಂದ ಮಾತನಾಡಿದ ಪಂತ್
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಹೀನಾಯ ಸೋಲಿನ ನಂತರ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ನೋವು ವ್ಯಕ್ತಪಡಿಸಿದ್ದಾರೆ. ಬರದ ಇಬ್ಬನಿ ಬರಬಹುದು ಎಂಬ ಒಂದೇ ಒಂದು ಆಲೋಚನೆ ಇತ್ತು (ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ನಂತರ), ಆದರೆ ನಾವು ಅವರನ್ನು 220-230 ಕ್ಕೆ ಸೀಮಿತಗೊಳಿಸಿದ್ದರೆ ನಮಗೆ ಅವಕಾಶವಿದೆ ಎಂದು ಅವರು ಹೇಳಿದರು.

ಪವರ್‌ ಪ್ಲೇಯಲ್ಲಿ ವ್ಯತ್ಯಾಸವಿತ್ತು, ಅವರು 125 ರನ್ ಗಳಿಸಿದರು ಮತ್ತು ನಾವು ವೇಗವಾಗಿ ಆಡಲು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು. ಎರಡನೇ ಇನ್ನಿಂಗ್ಸ್‌ ನಲ್ಲಿ ಚೆಂಡು ಹೆಚ್ಚು ಉಳಿದುಕೊಂಡಿತು, ಅದು ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು, ಆದರೆ 260-270 ಅನ್ನು ಬೆನ್ನಟ್ಟುವ ನೀವು ಸ್ಕೋರ್ ಅನ್ನು ಕಾಪಾಡಿಕೊಳ್ಳಬೇಕು. ಆಶಾದಾಯಕವಾಗಿ ನಾವು ಆಲೋಚನೆಗಳು ಮತ್ತು ಸ್ಪಷ್ಟ ಮನಸ್ಥಿತಿಯೊಂದಿಗೆ ಬರುತ್ತೇವೆ ಎಂದು ಹೇಳಿದರು. ಪಂತ್ ನಂತರ ಫ್ರೇಸರ್-ಮೆಕ್‌ ಗುರ್ಕ್‌ ನಲ್ಲಿ ಹೇಳಿದರು, “ಅವರ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು.

Rishabh Pant IPL 2024
Image Credit: Thequint

SRH ಗಳಿಸಿದ ಒಟ್ಟು ರನ್ ಎಷ್ಟು ಗೊತ್ತಾ …?
ದೆಹಲಿಯ ಅರುಣ್ ಜೆಲ್ಲಲಿ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು. ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 32 ಎಸೆತಗಳಲ್ಲಿ 89 ರನ್ ಗಳಿಸಿದರು.

Join Nadunudi News WhatsApp Group

ಅವರ ಇನ್ನಿಂಗ್ಸ್‌ ನಲ್ಲಿ ಅವರು 11 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಹೊಡೆದರು. ಪಂದ್ಯದಲ್ಲಿ ಅವರ ಸ್ಟ್ರೈಕ್ ರೇಟ್ 278.12 ಆಗಿತ್ತು. ರನ್ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್ ಗಳಲ್ಲಿ 199 ರನ್ ಗಳಿಗೆ ಆಲೌಟ್ ಆಯಿತು. ಗೆಲುವಿನ ನಂತರ ಸನ್‌ ರೈಸರ್ಸ್ ಹೈದರಾಬಾದ್ ರ್ಯಾಂಕಿಂಗ್ ಗಣನೀಯವಾಗಿ ಸುಧಾರಿಸಿದೆ. ಹೈದರಾಬಾದ್ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Rishabh Pant Indian cricketer
Image Credit: Timesofindia

Join Nadunudi News WhatsApp Group