River Indie Ev: ನಮ್ಮ ಕರ್ನಾಟಕದಲ್ಲಿ ತಯಾರಾಗುವ ಈ ಸ್ಕೂಟರ್ ಭರ್ಜರಿ 120 Km ಮೈಲೇಜ್ ಕೊಡುತ್ತೆ, ಬೆಲೆ ಕೂಡ ಕಡಿಮೆ

ಗ್ರಾಹಕರಿಗೆ ಕಡಿಮೆ ಬೆಲೆಗೆ ಸ್ಕೂಟರ್ ನೀಡಲು ಮುಂದಾದ ಬೆಂಗಳೂರು ಮೂಲದ ಕಂಪನಿ, 120 Km ರೇಂಜ್

River Indie Ev Scooter: ಇದೀಗ ಹೆಚ್ಚುತ್ತಿದೆ ಎಲೆಕ್ಟ್ರಿಕ್(Electric) ವಾಹನಗಳ ಬೇಡಿಕೆ ಯಾಕೆಂದರೆ ಎಲೆಕ್ಟ್ರಿಕ್ ವಾಹನಗಳು ಹೊಸ ಶೈಲಿಯಲ್ಲಿ ನವೀಕರಣಗೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್‌ಅಪ್ ಕಂಪನಿಯಾದ River ತನ್ನ Indie ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಖರೀದಿಗಾಗಿ ಬುಕ್ಕಿಂಗ್ ಅನ್ನು ಮತ್ತೆ ಪ್ರಾರಂಭಿಸಿದೆ.

ಹೊಸಕೋಟೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ಉತ್ಪಾದನಾ ಘಟಕದಲ್ಲಿ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ತಯಾರಾಗುತ್ತಿದೆ. ಆಸಕ್ತ ಗ್ರಾಹಕರು 2,500 ರೂಪಾಯಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹಾಗಾದರೆ ಈ ಸ್ಕೂಟರ್ ಬೆಲೆ ಮತ್ತು ವಿಶೇಷತೆ ಏನು ಎಂದು ತಿಳಿಯೋಣ.

River Indie Ev Scooter Price And Feature
Image Credit: Carandbike

River Indie ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾಹಿತಿ

ಈ River Indie ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ IP67-ರೇಟೆಡ್ 4kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 120 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿಕೊಂಡು 5 ಗಂಟೆಗಳಲ್ಲಿ ಬ್ಯಾಟರಿಯನ್ನು 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು ಈ ಹೊಸ Indie ಎಲೆಕ್ಟ್ರಿಕ್ ಸ್ಕೂಟರ್ 8.98 ಬಿಹೆಚ್‍ಪಿ ಪವರ್ ಮತ್ತು 26 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ River Indie ಎಲೆಕ್ಟ್ರಿಕ್ ಸ್ಕೂಟರ್ 3.9 ಸೆಕೆಂಡ್‌ಗಳಲ್ಲಿ 0-40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ 90 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಬ್ಯಾಟರಿ ಮತ್ತು ಸ್ಕೂಟರ್ ಎರಡಕ್ಕೂ 5 ವರ್ಷ/50,000 ಕಿಮೀ ವಾರಂಟಿಯನ್ನು ಕಂಪನಿಯು ನೀಡಿದ್ದಾರೆ.

Join Nadunudi News WhatsApp Group

River Indie Ev Scooter Price
Image Credit: Bikewale

River Indie ಎಲೆಕ್ಟ್ರಿಕ್ ಸ್ಕೂಟರ್ ಬೆಲೆ

ಹೊಸದಾಗಿ ಬಿಡುಗಡೆಯಾದ River Indie ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.1.38 ಲಕ್ಷವಾಗಿದೆ. ಇದಲ್ಲದೆ, ಈ ಬೆಲೆಯು FAME 2 ಸಬ್ಸಿಡಿ ಮತ್ತು ಹೋಮ್ ಚಾರ್ಜರ್ ಅನ್ನು ಒಳಗೊಂಡಿದೆ. ಹೊಸಕೋಟೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ಉತ್ಪಾದನಾ ಘಟಕದಲ್ಲಿ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ತಯಾರಾಗುತ್ತಿದ್ದು, ಘಟಕದಲ್ಲಿ 120,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಮತ್ತು ವಾರ್ಷಿಕವಾಗಿ 100,000 ಯುನಿಟ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group