RCB Update: ಸತತ ಸೋಲಿನ ನಂತರ ಬಹುದೊಡ್ಡ ನಿರ್ಧಾರ ತಗೆದುಕೊಂಡ ಕೊಹ್ಲಿ, ದೊಡ್ಡ ಬದಲಾವಣೆ.

ಮುಂದಿನ ಪಂದ್ಯಕ್ಕಾಗಿ RCB ತಂಡದ ದೊಡ್ಡ ಬದಲಾವಣೆ

Royal Challengers Bangalore Team Update: IPL 2024 ರ 17 ನೇ ಆವೃತ್ತಿ ಆರಂಭಗೊಂಡಿದ್ದು, ಎಲ್ಲಾ ಪಂದ್ಯಗಳು ರೋಚಕ ತಿರುವನ್ನು ಪಡೆಯುತ್ತಿದೆ. ಎರಡು ತಂಡಗಳ ನಡುವೆ ನಡೆಯುವ ಹಣಾಹಣಿಯಲ್ಲಿ ಒಂದು ತಂಡ ಗೆದ್ದು ಬಿಗಿದರೆ ಇನೊಂದು ತಂಡ ಸೋಲಿನ ದುಃಖದಲ್ಲಿರುತ್ತದೆ. ಮುಂದಿನ ಪಂದ್ಯದಲ್ಲಿ ಗೆಲ್ಲಬೇಕು ಎನ್ನುವ ಆಸೆಯಲ್ಲಿ ಮುಂದಿನ ಪಂದ್ಯಕ್ಕಾಗಿ ಸಿದ್ಧತೆ ನಡೆಸುತ್ತದೆ.

ಇನ್ನು ಕನ್ನಡಿಗರ ನೆಚ್ಚಿನ ಟೀಮ್ ಆಗಿರುವ RCB ಈಗಾಗಲೇ ನಡೆದ ನಾಲ್ಕು ಪಂದ್ಯದಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ ಮೂರು ಪಂದ್ಯದಲ್ಲಿ RCB ಸೋಲನ್ನು ಕಂಡಿದೆ. ಇದೀಗ ಸತತ ಸೋಲಿನ ನಂತರ ವಿರಾಟ್ ಕೊಹ್ಲಿ ಬಹುದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಕೊಹ್ಲಿ ಈ ನಿರ್ಧಾರ RCB ತಂಡಕ್ಕೆ ಹೊಸ ಬದಲಾವಣೆ ನೀಡಲಿದೆ.

Royal Challengers Bangalore
Image Credit: Indian Express

ಸತತ ಸೋಲಿನ ನಂತರ ಬಹುದೊಡ್ಡ ನಿರ್ಧಾರ ತಗೆದುಕೊಂಡ ಕೊಹ್ಲಿ
ಇನ್ನು RCB ಮೂರು ಪಂದ್ಯದಲ್ಲಿ ಸೋತ ಕಾರಣ ಟೂರ್ನಿಯ ಪಾಯಿಂಟ್‌ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ ಗಳ ಜಯ ಸಾಧಿಸಿದ ಆರ್‌ಸಿಬಿ ನಂತರ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿತು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಅವರ ಮುಂದಿನ ಪಂದ್ಯದಲ್ಲಿ RCB ಅವರು ಗೆಲುವಿನ ಹಾದಿಗೆ ಮರಳಬೇಕಾದರೆ ತಮ್ಮ ಆಡುವ XI ನಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ವಿಫಲರಾದ ಆಟಗಾರರನ್ನು ಬಿಟ್ಟು ಬೇರೆ ಆಟಗಾರರಿಗೆ ಅವಕಾಶ ನೀಡಬೇಕು.

ಮುಂದಿನ ಪಂದ್ಯಕ್ಕಾಗಿ RCB ತಂಡದ ದೊಡ್ಡ ಬದಲಾವಣೆ
•ಕಳೆದ ಪಂದ್ಯಗಳಲ್ಲಿ ಬೆಂಚ್ ಕಾಯ್ದುಕೊಂಡಿರುವ ವಿಲ್ ಜಾಕ್ಸ್ ಅವರಿಗೆ ಆರಂಭಿಕ ಸ್ಥಾನದಲ್ಲಿ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ಇನ್ನಿಂಗ್ಸ್ ತೆರೆಯಲು RCB ಅವಕಾಶ ನೀಡಬೇಕಾಗಿದೆ. ಹೀಗಾಗಿ ಕಳೆದ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕಕ್ಕೆ ಮರಳಬೇಕಿದೆ. ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು. ಬ್ಯಾಟಿಂಗ್ ನಲ್ಲಿ ಇನ್ನೂ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ಬೌಲಿಂಗ್ ನಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಾರೆ.

Royal Challengers Bangalore Team Update
Image Credit: India TV News

•ಐದನೇ ಕ್ರಮಾಂಕದಲ್ಲಿ ಅನುಜ್ ರಾವತ್ ಬದಲಿಗೆ ಸುಯೇಶ್ ಪ್ರಭುದೇಸಾಯಿ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಬೇಕು. ಹೀಗಾಗಿ ಮುಂದಿನ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ದಿನೇಶ್ ಕಾರ್ತಿಕ್ ನಿಭಾಯಿಸಬೇಕಾಗಿದೆ. ಏಳನೇ ಕ್ರಮಾಂಕದಲ್ಲಿ ಮ್ಯಾಚ್ ಫಿನಿಶರ್ ಆಗಿ ಮಹಿಪಾಲ್ ಲೊಮ್ರೋರ್‌ ಗೆ ದಾರಿ ಮಾಡಿಕೊಡುವ ಮೂಲಕ ಮಯಾಂಕ್ ದಾಗರ್ ಅವರನ್ನು ಕೈಬಿಡಬೇಕಾಗಿದೆ.

Join Nadunudi News WhatsApp Group

•ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ಮೂರು ಬದಲಾವಣೆಗಳ ಅಗತ್ಯವಿದೆ. ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡು ಲಕ್ಕಿ ಫರ್ಗ್ಯೂಸನ್ ಹಾಗೂ ಕನ್ನಡಿಗರಾದ ವೈಶಾಖ್ ವಿಜಯಕುಮಾರ್ ಅವರಿಗೆ ಅವಕಾಶ ನೀಡಬೇಕು. ಲಾಕಿ ಫರ್ಗ್ಯೂಸನ್ ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಲಿದ್ದಾರೆ. KKR ವಿರುದ್ಧದ ಪಂದ್ಯದಲ್ಲಿ ವೈಶಾಖ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕರಣ್ ಶರ್ಮಾಗೆ ಮಾತ್ರ ಸ್ಪಿನ್ನರ್ ಆಗಿ ಅವಕಾಶ ನೀಡಬೇಕು.

Royal Challengers Bangalore IPL 2024
Image Credit: Times Now News

Join Nadunudi News WhatsApp Group