Royal Enfield: 1986 ಸೈಕಲ್ ಗಿಂತ ಕಡಿಮೆ ಬೆಲೆಗೆ ಸಿಗುತ್ತಿತ್ತು ಬುಲೆಟ್ 350 , ವೈರಲ್ ಆಗಿದೆ ಅಂದಿನ ಬಿಲ್.

1986 ರಲ್ಲಿ ಎನ್‌ಫೀಲ್ಡ್ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು...?

Royal Enfield 1986 Bill Virul: ರಾಯಲ್ ಎನ್‌ಫೀಲ್ಡ್ ತನ್ನ ಕ್ಲಾಸಿಕ್ ಲುಕ್ ನಿಂದಾಗಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದೆ. ಯುವಕರ ಹಾರ್ಟ್ ಫೆವರೇಟ್ ಬೈಕ್ ಎಂದರೆ ಅದು Royal Enfield. ರಾಯಲ್ ಎನ್‌ಫೀಲ್ಡ್ ಬೈಕ್‌ ಗಳ ವಿಶಿಷ್ಟ ಮತ್ತು ಅದ್ಭುತ ವಿನ್ಯಾಸವು ಯುವಕರಲ್ಲಿ ಕ್ರೇಜ್ ಅನ್ನು ಹೆಚ್ಚಿಸಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿತ್ತು ಮತ್ತು ರಾಜ ವರ್ಗದ ಹೆಮ್ಮೆಯ ಸಂಕೇತವೆಂದು ಪರಿಗಣಿಸಲಾಗಿತ್ತು.

ಸದ್ಯ ರಾಯಲ್ ಎನ್‌ಫೀಲ್ಡ್ ಬುಲೆಟ್‌ ನ ಹೊಸ ವಿಷಯವು ಚರ್ಚೆಯ ವಿಷಯವಾಗಿದೆ. ಕಂಪನಿಯು ಹೊಸ ಅವತಾರದಲ್ಲಿ ಹಲವಾರು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಉತ್ಸಾಹಿಗಳು ಮತ್ತು ಅಭಿಮಾನಿಗಳ ಗಮನವನ್ನು ಸೆಳೆಯುತ್ತದೆ. ಬುಲೆಟ್‌ ನ ನವೀಕರಿಸಿದ ವಿನ್ಯಾಸವು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಿಂದಿನ ಕಾಲದ ರಾಯಲ್ ಎಂಫಿಲ್ಡ್ ಬೈಕ್ ನ ಬೆಲೆ ಇದೀಗ ವೈರಲ್ ಆಗುತ್ತಿದೆ.

Royal Enfield 1986 Bill Viral
Image Credit: News 18

1986 ಸೈಕಲ್ ಗಿಂತ ಕಡಿಮೆ ಬೆಲೆಗೆ ಸಿಗುತ್ತಿತ್ತು ಬುಲೆಟ್ 350
ಇದೀಗ 1986 ರ ಬಿಲ್‌ನ ವೈರಲ್ ಫೋಟೋವೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೈರಲ್ ಫೋಟೋ ಆ ಸಮಯದಲ್ಲಿ ರಾಯಲ್ ಎನ್‌ ಫೀಲ್ಡ್ ಬುಲೆಟ್ 350 ನ ಆನ್-ರೋಡ್ ಬೆಲೆಯನ್ನು ಬಹಿರಂಗಪಡಿಸುತ್ತದೆ. ಜಾರ್ಖಂಡ್ ಮೂಲದ ಸಂದೀಪ್ ಆಟೋ ಕಂಪನಿಯ ಬಿಲ್‌ ನಲ್ಲಿ ಬೈಕ್ ಬೆಲೆ ಕೇವಲ 18,700 ರೂ. ತೋರಿಸಲಾಗಿದೆ. ರಾಯಲ್ ಎನ್‌ ಫೀಲ್ಡ್ ಮೋಟಾರ್‌ ಸೈಕಲ್‌ ಗಳ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ 1986 ರ ಬೆಲೆ ಕೇಳಿದರೆ ಅಚ್ಚರಿ ಆಗುವುದಂತೂ ನಿಜ.

ವೈರಲ್ ಆಗಿದೆ ಅಂದಿನ ಬಿಲ್
1986 ರಲ್ಲಿ ಎನ್‌ಫೀಲ್ಡ್ ಬುಲೆಟ್ ಎಂದು ಕರೆಯಲ್ಪಡುವ ರಾಯಲ್ ಎನ್‌ಫೀಲ್ಡ್ ಬುಲೆಟ್ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಅದರ ಬಲವಾದ ಗುಣಮಟ್ಟ, ರಾಯಲ್ ನೋಟ ಮತ್ತು ವಿಶ್ವಾಸಾರ್ಹತೆಗಾಗಿ ಹೆಚ್ಚು ಜನಪ್ರಿಯತೆ ಪಡೆದಿದೆ. ಇದನ್ನು ಭಾರತೀಯ ಸೇನೆಯು ಗಡಿ ಪ್ರದೇಶಗಳಲ್ಲಿ ಗಸ್ತು ತಿರುಗಲು ಸಹ ಬಳಸುತ್ತಿತ್ತು. ಬೈಕ್‌ ನ ನಿರಂತರ ಆಕರ್ಷಣೆ ಮತ್ತು ಟೈಮ್‌ ಲೆಸ್ ವಿನ್ಯಾಸವು ಮೋಟಾರ್‌ ಸೈಕಲ್ ಪ್ರಿಯರನು ಆಕರ್ಷಿಸುತ್ತಿದೆ. ಈಗಿನ ಕಾಲದಲ್ಲಿ ರಾಯಲ್ ಎನ್‌ಫೀಲ್ಡ್ ಬೆಲೆ ದುಬಾರಿಯ್ಗಿದೆ. 1986 ರ ರಾಯಲ್ ಎಂಫಿಲ್ಡ್ ಬೆಲೆಯಲ್ಲಿ ಈಗ ಸೈಕಲ್ ಖರೀದಿಸುವುದು ಕೂಡ ಕಷ್ಟ ಎನ್ನಬಹುದು.

1986 Royal Enfield Bullet Bike Price
Image Credit: Sakshi

Join Nadunudi News WhatsApp Group

Join Nadunudi News WhatsApp Group