Bullet 350 EMI: ಹೊಸ ಬುಲೆಟ್ 350 ಬೈಕ್ ಕಡಿಮೆ ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ತಿಂಗಳ EMI ಎಷ್ಟು ನೋಡಿ

ಈ ಆಕರ್ಷಕ ಹಣಕಾಸು ಯೋಜನೆಯ ಮೂಲಕ ಬುಲೆಟ್ ಬೈಕ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ

Royal Enfield Bullet 350 EMI Details: ಹೊಸ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಅದನ್ನು ಖರೀದಿಸಲು ಜನರು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಯುವಕರಿಗೆ ಬುಲೆಟ್ ಬೈಕ್ ನ ಮೇಲೆ ಹೆಚ್ಚಿನ ಆಸಕ್ತಿ ಇರುತ್ತದೆ. Bullet ಬೈಕ್ ಗೆ Royal Enfield ಬೈಕ್ ಗಳು ಹೆಚ್ಚು ಹೆಸರುವಾಸಿಯಾಗಿವೆ. Royal Enfield ಕಂಪನಿಯು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಹೆಚ್ಚಿಸುತ್ತ ಹೋಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ Royal Enfield Bullet 350 ಬೈಕ್ ಗೆ ಡಿಮ್ಯಾಂಡ್ ಹೆಚ್ಚಿದೆ ಎನ್ನಬಹುದು. ಆದರೆ ಬುಲೆಟ್ ಬೈಕ್ ಗಳ ಬೆಲೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ದುಬಾರಿ ಬೆಲೆ ಆಗಿರುವುದರಿಂದ ಬೈಕ್ ಖರೀದಿಗೆ ಜನರು ಹಿಂದೇಟು ಹಾಕುತ್ತಾರೆ. ಆದರೆ ಇದೀಗ ನಿಮಗೆ ಬುಲೆಟ್ ಬೈಕ್ ಖರೀದಿಸಲು ಬೆಸ್ಟ್ ಟೈಮ್ ಸಿಕ್ಕಿದೆ ಎನ್ನಬಹುದು. ಹೌದು, ನೀವು ಆಕರ್ಷಕ ಹಣಕಾಸು ಯೋಜನೆಯ ಮೂಲಕ ಬುಲೆಟ್ ಬೈಕ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹದು.

Royal Enfield Bullet 350 EMI Details
Image Credit: TV9hindi

ರಾಯಲ್ ಏನ್ ಫೀಲ್ಡ್ 350 ಬುಲೆಟ್ ಬೈಕ್ ಖರೀದಿಗೆ EMI ಪ್ಲಾನ್ ಡಿಟೈಲ್ಸ್ ಇಲ್ಲಿದೆ
•ಹೊಸ ರಾಯಲ್ ಎನ್‌ ಫೀಲ್ಡ್ ಬುಲೆಟ್ 350 ಆನ್ ರೋಡ್ ಬೆಲೆಯನ್ನು ಬೈಕ್‌ ನ ಬಣ್ಣಗಳಿಂದ ನಿರ್ಧರಿಸಲಾಗುತ್ತದೆ. ಬೆಂಗಳೂರಿನಲ್ಲಿ ‘ಮಿಲಿಟರಿ ಸಿಲ್ವರ್ ರೆಡ್ ಮತ್ತು ಮಿಲಿಟರಿ ಸಿಲ್ವರ್ ಬ್ಲ್ಯಾಕ್’ ಆಯ್ಕೆಗಳೊಂದಿಗೆ ಈ ಮಾದರಿಯ ಆನ್ ರೋಡ್ ಬೆಲೆ ರೂ. 2,23,279 ಆಗಿದೆ. ನೀವು ರೂ. 22,000 ಡೌನ್ ಪೇಮೆಂಟ್ ಪಾವತಿಸಿ ಈ ಬೈಕ್ ಖರೀದಿಸಬಹುದು. ಉಳಿದ ಸಾಲದ ಮೊತ್ತಕ್ಕೆ 9.7% ಬಡ್ಡಿದರದಲ್ಲಿ ರೂ. 2,01,279 ಕ್ಕೆ ಮೂರು ವರ್ಷಗಳ ಅವಧಿಗೆ (36 ತಿಂಗಳು) ರೂ.6,466 ಮಾಸಿಕ EMI ಪಾವತಿಸಬೇಕು. ಕೇವಲ 22 ಸಾವಿರದಲ್ಲಿ ನೀವು ಜನಪ್ರಿಯ ಬುಲೆಟ್ 350 ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

•ರಾಯಲ್ ಎನ್‌ಫೀಲ್ಡ್ ಬುಲೆಟ್ 350 ‘ಬ್ಲ್ಯಾಕ್ ಗೋಲ್ಡ್’ ಆವೃತ್ತಿಯ ಆನ್ ರೋಡ್ ಬೆಲೆ ರೂ.2,74,789 ಆಗಿದೆ. ನೀವು ರೂ. 27,000 ಡೌನ್ ಪಾವತಿಯೊಂದಿಗೆ ಈ ಮೋಟಾರ್‌ ಸೈಕಲ್ ಅನ್ನು ಖರೀದಿಸಿದರೆ, ರೂ.2,47,789 ಸಾಲದ ಮೊತ್ತಕ್ಕೆ 9.7% ಬಡ್ಡಿದರದೊಂದಿಗೆ 3 ವರ್ಷಗಳವರೆಗೆ ರೂ.7,961 ರ ಮಾಸಿಕ EMI ಅನ್ನು ಪಾವತಿಸಬೇಕಾಗುತ್ತದೆ.

•ರಾಯಲ್ ಎನ್‌ಫೀಲ್ಡ್ ಬುಲೆಟ್ 350 ‘ಸ್ಟ್ಯಾಂಡರ್ಡ್ ಮರೂನ್ ಮತ್ತು ಸ್ಟ್ಯಾಂಡರ್ಡ್ ಬ್ಲ್ಯಾಕ್’ ರೂಪಾಂತರವು ರೂ.2,52,384 ಆನ್ ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.25,000 ಡೌನ್ ಪೇಮೆಂಟ್ ಪಾವತಿಸಿ ಈ ಬೈಕ್ ಖರೀದಿಸಿದರೆ, ಉಳಿದ ಸಾಲದ ಮೊತ್ತ ರೂ. 9.7% ಬಡ್ಡಿ ದರದಲ್ಲಿ ಮೂರು ವರ್ಷಗಳ ಅವಧಿಗೆ ಪ್ರತಿ ತಿಂಗಳು ರೂ.7,305 EMI ಪಾವತಿಸಬೇಕು.

Join Nadunudi News WhatsApp Group

Royal Enfield Bullet 350 Price In India
Image Credit: Bikewale

Join Nadunudi News WhatsApp Group